ಬೆಂಗಳೂರು: ನಟ ಅಜಯ್ ದೇವಗನ್ (Ajay Devgn) ಅವರು “ಮೈದಾನ್ʼ ಸಿನಿಮಾದಲ್ಲಿ ಫುಟ್ಬಾಲ್ ಕೋಚ್ ಆಗಿ ಬಣ್ಣ ಹಚ್ಚಿದ್ದಾರೆ. ಬೋನಿ ಕಪೂರ್ ಅವರ ‘ಮೈದಾನ್’ ಸಿನಿಮಾವು ಫುಟ್ಬಾಲ್ ಮೂಲಕ ಭಾರತಕ್ಕೆ ಹೆಮ್ಮೆ ತಂದ ಸೈಯದ್ ಅಬ್ದುಲ್ ರಹೀಮ್ ಅವರ ಜೀವನದ ಸುತ್ತ ಸುತ್ತುವ ಕತೆಯಾಗಿದೆ. ‘“ಮೈದಾನ್’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಗಬೇಕಿದೆ. ಇದಕ್ಕೂ ಮೊದಲೇ ಸಿನಿಮಾಗೆ ತಡೆ ನೀಡಲಾಗಿದೆ. ಮೂಲ ಕತೆ ಕದ್ದಿದ್ದಾರೆ ಎಂದು ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ದೂರು ನೀಡಿದ್ದರು. ಇದೀಗ ‘ಮೈದಾನ್’ ಚಿತ್ರಕ್ಕೆ ಮೈಸೂರು ಕೋರ್ಟ್ ತಡೆ ನೀಡಿದೆ.
ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ ‘ಮೈದಾನ್’ ಚಿತ್ರದಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ʻʻ2018ರಲ್ಲಿ ಈ ಕಥೆ ಬಗ್ಗೆ ಲಿಂಕ್ಡಿನ್ನಲ್ಲಿ ಹಾಕಿದ್ದೆ. ಕಥೆ ನೋಡಿ ಸುಕ್ದಾಸ್ ಸೂರ್ಯವಂಶಿ ಎಂಬುವವರು ಚರ್ಚಿಸಿದ್ದರು. 2019ರ ಫೆಬ್ರವರಿಯಲ್ಲಿ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ಈ ಕತೆಯ ಸಾರ ಮತ್ತು ಹೆಸರನ್ನು ನೋಂದಣಿ ಮಾಡಿಸಿದ್ದೆ. ನನ್ನ ಮೂಲ ಕತೆ ಕದ್ದು ʼಮೈದಾನ್ʼ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆʼʼ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಇದೀಗ ತಡೆಯನ್ನು ತೆಗೆಯುವಂತೆ ಚಿತ್ರತಂಡ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Ajay Devagan: ಅಜಯ್ ದೇವಗನ್ ಗೆ ಹುಟ್ಟುಹಬ್ಬದ ಸಂಭ್ರಮ; ಬಯಲಾಯ್ತು ನಟನ ಹಿಂದಿನ ಹೆಸರಿನ ಸಿಕ್ರೆಟ್!
ಅಮಿತ್ ಶರ್ಮಾ ಅವರು ‘ಮೈದಾನ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಿಯೋ ಸ್ಟುಡಿಯೋಸ್, ಬೋನಿ ಕಪೂರ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Actor Ajith Kumar: ಅಜಿತ್ ಕಾರು ಅಪಘಾತ ವಿಡಿಯೋ ವೈರಲ್; ನಟನ ಸಾಹಸಕ್ಕೆ ಮೆಚ್ಚುಗೆ
ಈ ನಡುವೆ ಮೈದಾನ್ ಸಿನಿಮಾ ಮತ್ತೊಂದು ಭಾರೀ ಬಜೆಟ್ ಚಿತ್ರದೊಂದಿಗೆ ಪೈಪೋಟಿ ನೀಡಬೇಕಾಗಿದೆ. ಈ ಬಾರಿ ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಏಪ್ರಿಲ್ 10ರಂದು ಅಕ್ಷಯ್ ಕುಮಾರ್ ನಟನೆಯ ʻಬಡೆ ಮಿಯಾನ್ ಚೋಟೆ ಮಿಯಾನ್ʼ ಹಾಗೂ ಅಜಯ್ ದೇವಗನ್ ಅವರ ʻಮೈದಾನ್ʼ (Maidan) ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗುತ್ತಿದೆ. ಹೀಗೆ ಈ ಕಲಾವಿದರ ಚಿತ್ರಗಳು ಒಂದೇ ದಿನಾಂಕದಂದು ರಿಲೀಸ್ ಆಗುತ್ತಿರುವುದು 9ನೇ ಬಾರಿ ಎನ್ನುವುದು ವಿಶೇಷ.