ಬೆಂಗಳೂರು: ತಮ್ಮ ಮುಂಬರುವ ಚಿತ್ರ `ಭೋಲಾ’ ಪ್ರಚಾರ ಕಾರ್ಯಗಳಲ್ಲಿ ನಿರತರಾಗಿರುವ ಅಜಯ್ ದೇವಗನ್ (ajay devgan) ಅವರು ಮಾರ್ಚ್ 15ರಂದು ಟ್ವಿಟರ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡಿದ್ದಾರೆ. ಸ್ವಲ್ಪ ಸಮಯವನ್ನು ಅಭಿಮಾನಿಗಳಿಗಾಗಿ ನಟ ಮೀಸಲಿಟ್ಟಿದ್ದಾರೆ. “ಪ್ರಚಾರಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಕೆಲವು ಆಸಕ್ತಿದಾಯಕ ಪ್ರಶ್ನೆಗಳಿದ್ದರೆ ಕೇಳಿ” ಎಂದು ಟ್ವೀಟ್ ಮಾಡಿದ್ದಾರೆ. ಈ ವೇಳೆ ಅವರ ಅಭಿಮಾನಿಯೊಬ್ಬರು ʻʻನಿಮ್ಮ ಎಲ್ಲ ಸಿನಿಮಾಗಳಲ್ಲಿ ಹೆಚ್ಚಾಗಿ ಟಬು ಅವರೊಂದಿಗೆ ಮಾಡುತ್ತಿದ್ದೀರಿ. ಅದಕ್ಕೆ ಏನಾದರೂ ಕಾರಣವಿದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಅಜಯ್ ದೇವಗನ್ ಉತ್ತರ ನೀಡಿದ್ದಾರೆ.
ʻʻಟಬು ಅವರ ಡೇಟ್ ಸಿಕ್ಕಿತು ಹಾಗಾಗಿ ಭೋಲಾ ಚಿತ್ರಕ್ಕೆ ತೆಗೆದುಕೊಂಡೆʼʼ ಎಂದು ಹೇಳಿದ್ದಾರೆ ಅಜಯ್ ದೇವಗನ್. ಭೋಲಾ ಚಿತ್ರದ ಸಹ-ನಟಿ ಟಬು ಮತ್ತು ಅಜಯ್ ದೇವಗನ್ ವರ್ಷ ದೃಶ್ಯಂ 2 ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಹಿಟ್ ಕಂಡಿತ್ತು. ಅಜಯ್ ದೇವಗನ್ ಮತ್ತು ಟಬು ಒಟ್ಟಿಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಗೋಲ್ಮಾಲ್ ಎಗೇನ್, ದೇ ದೇ ಪ್ಯಾರ್ ದೇ, ವಿಜಯಪಥ್, ಹಕೀಕತ್ ಮತ್ತು ತಕ್ಷಕ್ ಚಿತ್ರಗಳಲ್ಲಿ ನಟರು ಒಟ್ಟಿಗೆ ಕೆಲಸ ಮಾಡಿದ್ದಾರೆ.
ಅಜಯ್ ದೇವಗನ್ ಟ್ವೀಟ್
ಇನ್ನೊಬ್ಬರು ʻಭೋಲಾ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎಂದು ಭಾವಿಸುತ್ತೀರಿ? ಎಂಬ ಪ್ರಶ್ನೆಗೆ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿ ʻʻಹಣದ ಬಗ್ಗೆ ಗೊತ್ತಿಲ್ಲ. ಆದರೆ ಸಿನಿಮಾ ಅದು ನಿಮ್ಮೆಲ್ಲರಿಂದ ಬಹಳಷ್ಟು ಪ್ರೀತಿಯನ್ನು ಗಳಿಸುತ್ತದೆ ಎಂದು ನಾನು ಭಾವಿಸುತ್ತೇನೆʼʼಎಂದು ಸೆಷನ್ ಮುಗಿಸಿದ್ದಾರೆ.
ಇದನ್ನೂ ಓದಿ: Ajay Devgan | ಅಜಯ್ ದೇವಗನ್ ಅಭಿನಯದ ʻಭೋಲಾʼ ಟೀಸರ್ ರಿಲೀಸ್ ಡೇಟ್ ಅನೌನ್ಸ್
ಟಬು ಅವರು ಹಲವು ಸಿನಿಮಾಗಳ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಅದರಲ್ಲಿ ಮಕ್ಬೂಲ್(Maqbool,), ಮಾಚಿಸ್(Maqbool,), ದಿ ನೇಮ್‌ಸೇಕ್(The Namesake,), ಲೈಫ್ ಆಫ್ ಪೈ, ಅಂಧಧುನ್ (AndhaDhun), ಹೈದರ್, ದೃಶ್ಯಂ, ಹೇರಾ ಫೇರಿ(Hera Pheri) ಚಿತ್ರಗಳಲ್ಲಿ ಕೆಲವು. ಅವರು ಇತ್ತೀಚಿನ ವರ್ಷಗಳಲ್ಲಿ ದೃಶ್ಯಂ 2, ಕುಟ್ಟೆ ಮತ್ತು ಭೂಲ್ ಭುಲೈಯಾ 2 (Bhool Bhulaiyaa 2.) ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಅಜಯ್ ದೇವಗನ್ ಕೂಡ 2022 ರಲ್ಲಿ ವೃತ್ತಿಪರವಾಗಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೃಶ್ಯಂ 2, RRR ಮತ್ತು ಗಂಗೂಬಾಯಿ ಕಾಥಿಯಾವಾಡಿಯಲ್ಲಿ ನಟಿಸಿದ್ದಾರೆ.