Site icon Vistara News

Ajay Rao Movie | ಸಿನಿಮಾ ನಿರ್ಮಾಣಕ್ಕೆ ಅಜಯ್‌ ರಾವ್‌ ಕಂಬ್ಯಾಕ್‌

Ajay Rao Movie

ಬೆಂಗಳೂರು: ಚಂದನವನದಲ್ಲಿ ತಮ್ಮದೇ ವಿಭಿನ್ನ ಜಾನರ್‌ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ‘ಎಕ್ಸ್‌ಕ್ಯೂಸ್‌ ಮಿ’ ಖ್ಯಾತಿಯ ಅಜಯ್‌ ರಾವ್‌ (Ajay Rao Movie) ಇದೀಗ ಮತ್ತೆ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ಅಜಯ್ ರಾವ್ ಹೊಸದೊಂದು ಸಿನಿಮಾಗೆ ಸಜ್ಜಾಗಿದ್ದಾರೆ.

ನಿರ್ದೇಶಕ ಪವನ್ ಭಟ್ ಕನ್ನಡ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುತ್ತಿದ್ದು, ಅವರ ನಿರ್ದೇಶನದ ಚಿತ್ರದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸುತ್ತಿದ್ದು, ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ.

ನೀರಿಕ್ಷೆಗಳ ಭಾರ!
‘ಕಟಿಂಗ್ ಶಾಪ್’ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪವನ್ ಭಟ್ ಅವರಿಗೆ 2ನೇ ಸಿನಿಮಾ ಇದಾಗಿದೆ. ಹೀಗಾಗಿ ಅಜಯ್ ರಾವ್ ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೊರೊನಾ ಬಳಿಕ ಸ್ಯಾಂಡಲ್​ವುಡ್ ಮತ್ತೆ ಮೈಕೊಡವಿ ನಿಂತಿದ್ದು, ಹೊಸ ಮನ್ವಂತರ ಆರಂಭವಾಗಿದೆ. ಈ ಹೊತ್ತಲ್ಲೇ ನಟ ಅಜಯ್ ರಾವ್ ಅವರು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಡೈರೆಕ್ಟರ್ ಪವನ್ ಭಟ್ ಕಥೆ ಹೇಳಿದ ತಕ್ಷಣ ಇಂಪ್ರೆಸ್ ಆದ ಅಜಯ್ ರಾವ್, ತಮ್ಮದೇ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಿ ನಟಿಸಲು ಒಪ್ಪಿದ್ದಾರಂತೆ. ಇನ್ನೂ ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ಹಾಗೇ ಸಹ ಕಲಾವಿದರಿಗೆ ಹುಡುಕಾಟವೂ ನಡೆಯುತ್ತಿದೆ. ಮತ್ತೊಂದು ಕಡೆ ಶೀಘ್ರದಲ್ಲೇ ಚಿತ್ರದ ಟೈಟಲ್ ರಿವೀಲ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Janardhan Reddy Son | ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಟೈಟಲ್​​ ಲಾಂಚ್​​ಗೆ ಕ್ಷಣಗಣನೆ!

Exit mobile version