Site icon Vistara News

Akhil Akkineni: ʻಏಜೆಂಟ್‌ʼ ಸಿನಿಮಾ ಮೆಚ್ಚಿದ ಪ್ರೇಕ್ಷಕರು: ʻಒನ್ ಮ್ಯಾನ್ ಶೋʼ ಅಂದ್ರು ನೆಟ್ಟಿಗರು, ಇಲ್ಲಿದೆ ಟ್ವಿಟರ್ ವಿಮರ್ಶೆ!

Akhil Akkineni Agent Twitter review Netizens call it 'one man show'

ಬೆಂಗಳೂರು: ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ (Akhil Akkineni) ಹಾಗೂ ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್‌ ಸಿನಿಮಾ ‘ಏಜೆಂಟ್’ ಏಪ್ರಿಲ್ 28ರಂದು ಬಿಡುಗಡೆಗೊಂಡಿದೆ. ಪ್ರೇಕ್ಷಕರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನಿರ್ದೇಶಕ ಸುರೇಂದರ್ ರೆಡ್ಡಿ ಈ ಆ್ಯಕ್ಷನ್ ಜಾನರ್‌ನಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದಂತಿದೆ. ನೋಡುಗರ ವಿಮರ್ಶೆಗಳನ್ನು ಗಮನಿಸಿದರೆ, ಅಖಿಲ್ ಚಿತ್ರದಲ್ಲಿ ಪವರ್-ಪ್ಯಾಕ್ಡ್ ಅಭಿನಯವನ್ನು ನೀಡಿದ್ದಾರೆ.

ಹಲವಾರು ನೆಟಿಜನ್‌ಗಳು ಚಿತ್ರದ ಕುರಿತು ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ನಟಿಸಿದರೆ, ಸಾಕ್ಷಿ ವೈದ್ಯ ನಾಯಕಿಯಾಗಿ ನಟಿಸಿದ್ದಾರೆ ಒಬ್ಬರು ಸಿನಿಮಾ ಬಗ್ಗೆ “ಆಕ್ಷನ್ ಚಲನಚಿತ್ರ ಪ್ರೇಮಿಗಳಿಗೆ ಯೋಗ್ಯವಾದ ಸಿನಿಮಾ ಇದುʼʼ ಎಂದರೆ ಮತ್ತೊಬ್ಬರು, ʻʻಅಖಿಲ್ ಒನ್ ಮ್ಯಾನ್ ಶೋ ಆಗಿ ಮಿಂಚಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.

https://twitter.com/PowerTalkies1/status/1651809211607846914?s=20

ಏಜೆಂಟ್ ಮಾಸ್ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಜತೆಗೆ ಮನಸ್ಸಿಗೆ ಮುದ ನೀಡುತ್ತದೆ.

https://twitter.com/kirayekotigadu/status/1651809479963611144?s=20

ಏಜೆಂಟ್ ಮೊದಲಾರ್ಧ ಸಖತ್‌ ಆಗಿದೆ. ಉತ್ತಮ ಹಾಡುಗಳು, ಹೆಚ್ಚಿನ ಸಾಹಸ ದೃಶ್ಯಗಳನ್ನು ಹೊಂದಿದೆ. ಉತ್ತಮವಾದ ಇಂಟರ್‌ವಲ್‌ ಕೂಡ.

https://twitter.com/bunnyfan2000/status/1651807384338333696?s=20

ಅದ್ಭುತವಾದ ಸ್ಟೈಲಿಶ್ ಮೇಕಿಂಗ್. ಉತ್ತಮ ಬಿಜಿಎಂ (ಹಿನ್ನೆಲೆ ಧ್ವನಿ)

https://twitter.com/juicymissesyou/status/1651807269493899264?s=20

ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್‌ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ. ಚಾಕೊಲೇಟ್ ಬಾಯ್ ಅವತಾರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟ ಇದೇ ಮೊದಲ ಬಾರಿಗೆ ಈ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Akhil Akkineni: ‘ಏಜೆಂಟ್’ ಟ್ರೈಲರ್‌ ಔಟ್‌: ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡ ಅಖಿಲ್ ಅಕ್ಕಿನೇನಿ!

ಇನ್ನೂ ಗಮನಿಸಬೇಕಾದ ಸಂಗತಿಯೆಂದರೆ, ಅವರು ತಮ್ಮ ತೂಕವನ್ನು ಇಳಿಕೆ ಮಾಡಿಕೊಂಡಿದ್ದಾರೆ. ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಸೂಲ್ ಎಲ್ಲೂರು ಛಾಯಾಗ್ರಹಣ ಮಾಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದೆ. ಅಜಯ್ ಸುಂಕರ, ಪತಿ ದೀಪಾ ರೆಡ್ಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Exit mobile version