Site icon Vistara News

Akhil Akkineni: ಮಗನನ್ನು ಟ್ರೋಲ್‌ ಮಾಡಿದವರಿಗೆ ಅಮಲಾ ಅಕ್ಕಿನೇನಿ ಕ್ಲಾಸ್‌

Amala Akkineni reacts to poor reviews of Akhil Akkineni ‘Agent’

ಬೆಂಗಳೂರು: ಅಖಿಲ್ ಅಕ್ಕಿನೇನಿ (Akhil Akkineni) ಅವರ ಬಹು ನಿರೀಕ್ಷಿತ ಚಿತ್ರ ‘ಏಜೆಂಟ್’ ಏಪ್ರಿಲ್‌ 28ರಂದು ಬಿಡುಗಡೆಗೊಂಡಿತು. ಅಷ್ಟಾಗಿ ಯಶಸ್ವಿ ಪ್ರದರ್ಶನ ಕಂಡಿಲ್ಲ. ಸಿನಿಮಾ ಕೂಡ ಹೆಚ್ಚು ಟ್ರೋಲ್‌ಗೆ ಗುರಿಯಾಗಿದೆ. ಅಮಲಾ ಅಕ್ಕಿನೇನಿ ಅಖಿಲ್​ರ ತಾಯಿ ಅಮಲಾ, ಮಗನ ಬೆಂಬಲಕ್ಕೆ ನಿಂತಿದ್ದು, ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.

ಅಮಲಾ ಪೋಸ್ಟ್‌ನಲ್ಲಿ ʻʻಈ ಟ್ರೋಲ್‌ಗಳು ಅಭದ್ರತೆ ಅನುಭವಿಸುತ್ತಿರುವವರು ಹಾಗೂ ಏನಾದರೂ ಸಾಧಿಸಲು ವಿಫಲವಾದವರು ಮಾತ್ರ ಮಾಡುತ್ತಾರೆ. ನಾನು ನಿನ್ನೆ ಏಜೆಂಟ್ ಸಿನಿಮಾ ವೀಕ್ಷಿಸಿದೆ. ಚಿತ್ರವನ್ನು ಪ್ರಾಮಾಣಿಕವಾಗಿ ಆನಂದಿಸಿದೆ. ಕೆಲವು ನ್ಯೂನತೆಗಳನ್ನು ಹೊಂದಿದ್ದರೂ, ನೀವು ಅದನ್ನು ತೆರೆದ ಮನಸ್ಸಿನಿಂದ ನೋಡಿದರೆ, ನೀವು ಆಶ್ಚರ್ಯಚಕಿತರಾಗುವಿರಿʼʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ʻʻಚಿತ್ರಮಂದಿರಗಳಲ್ಲಿ ಅರ್ಧದಷ್ಟು ಪ್ರೇಕ್ಷಕರು ಹೆಂಗಸರು, ತಾಯಂದಿರು ಮತ್ತು ಅಜ್ಜಿಯರು ಮತ್ತು ಅವರ ಗಂಡ ಮತ್ತು ಮಕ್ಕಳಿದ್ದರು. ಆ್ಯಕ್ಷನ್ ಸೀಕ್ವೆನ್ಸ್‌ಗಳು ಬಂದಿದ್ದಾಗ ಕಿರುಚಾಟಗಳು ಕೇಳಿ ಬಂದವು. ನನಗೆ ಭರವಸೆ ಇದೆ, ಮುಂದಿನದ್ದು ಇದಕ್ಕಿಂತಲೂ ದೊಡ್ಡದಾಗಿ ಹಾಗೂ ಬೆಟರ್ ಆಗಿ ಇರುತ್ತದೆ” ಎಂದಿದ್ದಾರೆ ಅಮಲಾ.

ಸಿನಿಮಾವನ್ನು ಸುರೇಂದರ್ ರೆಡ್ಡಿ ನಿರ್ಮಿಸಿದ್ದಾರೆ. ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್‌ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ. ಚಾಕೊಲೇಟ್ ಬಾಯ್ ಅವತಾರದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟ ಇದೇ ಮೊದಲ ಬಾರಿಗೆ ಈ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Akhil Akkineni: ʻಏಜೆಂಟ್‌ʼ ಸಿನಿಮಾ ಮೆಚ್ಚಿದ ಪ್ರೇಕ್ಷಕರು: ʻಒನ್ ಮ್ಯಾನ್ ಶೋʼ ಅಂದ್ರು ನೆಟ್ಟಿಗರು, ಇಲ್ಲಿದೆ ಟ್ವಿಟರ್ ವಿಮರ್ಶೆ!

ಇನ್ನೂ ಗಮನಿಸಬೇಕಾದ ಸಂಗತಿಯೆಂದರೆ, ಅವರು ತಮ್ಮ ತೂಕವನ್ನು ಇಳಿಕೆ ಮಾಡಿಕೊಂಡಿದ್ದಾರೆ. ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಸೂಲ್ ಎಲ್ಲೂರು ಛಾಯಾಗ್ರಹಣ ಮಾಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದೆ. ಅಜಯ್ ಸುಂಕರ, ಪತಿ ದೀಪಾ ರೆಡ್ಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

Exit mobile version