Site icon Vistara News

Akira Toriyama: ʻಡ್ರ್ಯಾಗನ್ ಬಾಲ್ʼ ಸರಣಿಯ ಸೃಷ್ಟಿಕರ್ತ ಅಕಿರಾ ಟೋರಿಯಾಮಾ ಇನ್ನಿಲ್ಲ

Akira Toriyama, Creator Of Dragon Ball Series Dies

ಜಪಾನ್‌ನ ಅತ್ಯಂತ ಜನಪ್ರಿಯ “ಡ್ರ್ಯಾಗನ್ ಬಾಲ್” (Dragon Ball) ಕಾಮಿಕ್ಸ್ ಮತ್ತು ಅನಿಮೆ ಕಾರ್ಟೂನ್‌ಗಳ ಸೃಷ್ಟಿಕರ್ತ ಅಕಿರಾ ಟೋರಿಯಾಮಾ (Akira Toriyama) ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಸಬ್ಡ್ಯುರಲ್ ಹೆಮಟೋಮಾದಿಂದ (subdural hematoma) ಮಾರ್ಚ್ 1ರಂದು ನಿಧನರಾದರು ಎಂದು ವರದಿಯಾಗಿದೆ. “ಡ್ರ್ಯಾಗನ್ ಬಾಲ್” ಫ್ರ್ಯಾಂಚೈಸ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ನಿಧನದ ಬಗ್ಗೆ ಪೋಸ್ಟ್ ಮಾಡಲಾಗಿದೆ.

ಫ್ರ್ಯಾಂಚೈಸ್‌ನ ಅಧಿಕೃತ ಎಕ್ಸ್‌ ಖಾತೆ ಅವರ ಬಗ್ಗೆ ಹೀಗೆ ಬರೆದುಕೊಂಡಿದೆ. ಅಕಿರಾ ಟೋರಿಯಾಮಾ ಇನ್ನಷ್ಟು ಕ್ರಿಯೇಷನ್‌ ವರ್ಕ್‌ಗಳನ್ನು ಹೊಂದಿದ್ದರು. ಆದರೂ ಇದ್ದಷ್ಟು ದಿನ ಇಡೀ ಜಗತ್ತಿಗೆ manga ಟೈಟಲ್ಸ್‌ (manga titles) ಮತ್ತು ಅನೇಕ ಕ್ರಿಯೇಷನ್‌ಗಳನ್ನು ನೀಡಿದ್ದಾರೆ. ಆದರೆ ಇಂದು ಅವರು ಬಾರದ ಲೋಕಕ್ಕೆ ಹೋಗಿದ್ದಾರೆʼʼಎಂದು ಬರೆದುಕೊಂಡಿದೆ.

ಇದನ್ನೂ ಓದಿ: Milana Nagaraj: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಲವ್‌ ಮಾಕ್ಟೆಲ್‌ʼ ಜೋಡಿ!

“ಡ್ರ್ಯಾಗನ್ ಬಾಲ್” ಸಾರ್ವಕಾಲಿಕ ಹೆಚ್ಚು ಮಾರಾಟವಾದ ಮತ್ತು ಅತ್ಯಂತ ಪ್ರಭಾವಶಾಲಿ ಮಂಗಾ ಸರಣಿ ಕಾರ್ಯಕ್ರಮ. ಇದನ್ನು ಮೊದಲು 1984 ರಲ್ಲಿ ಧಾರಾವಾಹಿ ಮಾಡಲಾಯಿತು. ಲೆಕ್ಕವಿಲ್ಲದಷ್ಟು ಅನಿಮೆ ಸರಣಿಗಳು, ಸಿನಿಮಾಗಳು ಮತ್ತು ವಿಡಿಯೊ ಗೇಮ್‌ಗಳನ್ನು ಈ ʻಡ್ರ್ಯಾಗನ್ ಬಾಲ್ʼ ಒಳಗೊಂಡಿದೆ. ದುಷ್ಟ ಶತ್ರುಗಳಿಂದ ಭೂಮಿಯನ್ನು ರಕ್ಷಿಸುವ ಹೋರಾಟದಲ್ಲಿ ಮಿತ್ರರಿಗೆ ಸಹಾಯ ಮಾಡಲು ಡ್ರ್ಯಾಗನ್‌ಗಳನ್ನು ಹೊಂದಿರುವ ಮಾಂತ್ರಿಕ ಚೆಂಡುಗಳನ್ನು ಸಂಗ್ರಹಿಸುವ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸನ್ ಗೊಕು ಎಂಬ ಹುಡುಗನ ಕಥೆ ಇದು.

ಅಕಿರಾ ಟೋರಿಯಾಮಾ ಹಠಾತ್ ಅಕಿರಾ ಟೋರಿಯಾಮಾ ನಿಧನ ಸುದ್ದಿಯಿಂದ ತುಂಬಾ ದುಃಖವಾಗಿದೆ ಎಂದು ಪಬ್ಲಿಷಿಂಗ್ ಹೌಸ್ ಶುಯೆಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version