ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಇಮ್ರಾನ್ ಹಶ್ಮಿ ಒಟ್ಟಿಗೆ ನಟಿಸಿರುವ ಸೆಲ್ಫಿ ಸಿನಿಮಾ ಫೆ.24ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಅಷ್ಟಾಗಿ ಗಳಿಕೆ ಕಂಡಿಲ್ಲ ಎಂದು ವರದಿಯಾಗಿದೆ. ವ್ಯಾಪಾರ ಮೂಲಗಳ ಪ್ರಕಾರ, ಇಮ್ರಾನ್ ಹಶ್ಮಿ, ನುಶ್ರತ್ ಭರುಚ್ಚಾ ಮತ್ತು ಡಯಾನಾ ಪೆಂಟಿ ಸಹ ನಟಿಸಿರುವ ಚಿತ್ರವು ಮೊದಲ ದಿನದಲ್ಲಿ ಕಡಿಮೆ ಗಳಿಕೆ ಕಂಡಿದೆ ಎನ್ನಲಾಗಿದೆ.
ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರನ್ ಆದರ್ಶ್ ಟ್ವಿಟರ್ನಲ್ಲಿ ʻʻಮೊದಲ ದಿನ ಸೆಲ್ಫಿ ಸಿನಿಮಾ 1.30 ಕೋಟಿ ರೂ. ಗಳಿಕೆ ಕಂಡಿದ್ದು, ಅದರಲ್ಲಿ ಪಿವಿಆರ್ 64 ಲಕ್ಷ ರೂ. ಸಿನಿಪೊಲಿಸ್ 23 ಲಕ್ಷ ರೂ. ಐನಾಕ್ಸ್ 43 ಲಕ್ಷರೂ. ಗಳಿಕೆ ಕಂಡಿದೆ. ಹಾಗೂ ಪಠಾಣ್ 27.08 ಕೋಟಿ ರೂ. ಶೆಹಜಾದಾ 2.92 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್ ಪಾದದ ಕೆಳಗೆ ಭಾರತದ ನಕ್ಷೆ: ನೆಟ್ಟಿಗರು ಗರಂ!
ಇದನ್ನೂ ಓದಿ: Akshay Kumar: ಬೈಕಾಟ್ ಗ್ಯಾಂಗ್ನ ಟ್ರೋಲ್ ಮಾಡಿದ ಅಕ್ಷಯ್ ಕುಮಾರ್: ಸೆಲ್ಫಿ ಸಿನಿಮಾ ಫೆ.24ಕ್ಕೆ ತೆರೆಗೆ
ರಾಜ್ ಮೆಹ್ತಾ ನಿರ್ದೇಶಿಸಿದ ಸೆಲ್ಫಿ ಮಲಯಾಳಂನ ʻಡ್ರೈವಿಂಗ್ ಲೈಸೆನ್ಸ್ʼ ಚಿತ್ರದ ರಿಮೇಕ್ ಆಗಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಸುರಾಜ್ ವೆಂಜರಮೂಡು ಡ್ರೈವಿಂಗ್ ಲೈಸೆನ್ಸ್ನಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳನ್ನು ಅಕ್ಷಯ್ ಮತ್ತು ಇಮ್ರಾನ್ ಅಭಿನಯಿಸಲಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಸುಕುಮಾರನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಫ್ರೇಮ್ಸ್ ಸಹ-ನಿರ್ಮಾಣ ಮಾಡಿದೆ.