Site icon Vistara News

Selfiee Twitter Review: ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ ಅಭಿನಯದ ʻಸೆಲ್ಫಿʼ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ: ಇಲ್ಲಿದೆ ಟ್ವೀಟರ್‌ ವಿಮರ್ಶೆ

Selfiee Twitter Review

ಬೆಂಗಳೂರು: ಅಕ್ಷಯ್ ಕುಮಾರ್ (Akshay Kumar) ಮತ್ತು ಇಮ್ರಾನ್ ಹಶ್ಮಿ ಒಟ್ಟಿಗೆ ನಟಿಸಿರುವ ಸೆಲ್ಫಿ ಸಿನಿಮಾ ಫೆ.24ರಂದು ವಿಶ್ವಾದ್ಯಂತ ತೆರೆ ಕಂಡಿದೆ. ರಾಜ್ ಮೆಹ್ತಾ ನಿರ್ದೇಶನದ ಸೆಲ್ಫಿ ಬಗ್ಗೆ ಟ್ವೀಟರ್‌ನಲ್ಲಿ ನೋಡುಗರು ವಿಮರ್ಶೆಗಳನ್ನು (Selfiee Twitter Review) ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ (Akshay Kumar) ಸೂಪರ್​ಸ್ಟಾರ್​​ ಪಾತ್ರ ನಿಭಾಯಿಸಿದ್ದಾರೆ. ಇಮ್ರಾನ್ ಹಶ್ಮಿ (Emraan Hashmi) ಆರ್​ಟಿಒ ಅಧಿಕಾರಿಯ ಪಾತ್ರ ಮಾಡಿದ್ದಾರೆ. ವಿಜಯ್ ಪಾತ್ರದಲ್ಲಿ ಅಕ್ಷಯ್‌ ಮಿಂಚಿದ್ದಾರೆ. ಅವರ ಕಟ್ಟಾ ಅಭಿಮಾನಿಯಾಗಿರುವ ಓಂ ಪ್ರಕಾಶ್ ಅಗರ್ವಾಲ್ ಎಂಬ ಅಧಿಕಾರಿಯ ಪಾತ್ರದಲ್ಲಿ ಇಮ್ರಾನ್ ನಟಿಸಿದ್ದಾರೆ. ಚಿತ್ರದಲ್ಲಿ ಡಯಾನಾ ಪೆಂಟಿ ಮತ್ತು ನುಸ್ರತ್‌ ಭರುಚಾ ನಾಯಕಿಯರಾಗಿ ನಟಿಸಿದ್ದಾರೆ.

ನೋಡುಗರೊಬ್ಬರು ಸೆಲ್ಫಿ ಸಿನಿಮಾ ಸಖತ್‌ ಆಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ!

https://twitter.com/Janiking787/status/1628985391561801732?s=20

ಟ್ವೀಟ್‌ನಲ್ಲಿ ಮತ್ತೊಬ್ಬರು ʻʻಒಂದು ಸ್ಟಾರ್‌ ನೀಡಿ, ಈ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಬೇಡಿ. ನಿಮ್ಮ ಹಣವನ್ನು ಉಳಿಸಿ ಮತ್ತು ಮೂಲ ಸೌತ್ ಚಲನಚಿತ್ರ ಡ್ರೈವಿಂಗ್ ಲೈಸೆನ್ಸ್ ವೀಕ್ಷಿಸಲು ಹೋಗಿ, ಏಕೆಂದರೆ ಇದು ಈ ರಿಮೇಕ್‌ಗಿಂತ ಮಲಯಾಳಂ ಸಿನಿಮಾ 100 ಪಟ್ಟು ಉತ್ತಮವಾಗಿದೆ. ಕೆಟ್ಟ ರಿಮೇಕ್ ಚಿತ್ರʼʼಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮತ್ತೊಬ್ಬರು ʻʻಇದು ಪರಿಪೂರ್ಣ ಕೌಟುಂಬಿಕ ಮನರಂಜನೆ. ಅಕ್ಷಯ್‌ ಕುಮಾರ್‌ ಅವರ ಕಾಮಿಡಿ ತುಂಬ ಅದ್ಭುತವಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಕುಮಾರ್-ಇಮ್ರಾನ್ ಹಶ್ಮಿ ಹಾಸ್ಯ ಮತ್ತು ಹೃದಯಸ್ಪರ್ಶಿ ನಟನೆ ತುಂಬ ಚೆಂದವಾಗಿದೆ ಎಂದು ಬರೆದುಕೊಂಡಿದ್ದಾರೆ.

ʻʻಈ ಸಿನಿಮಾ ವ್ಯರ್ಥ, ಅಕ್ಷಯ್ ಅವರು ಸುಕುಮಾರನ ಅವರ ರೀತಿ ಪಾತ್ರ ನಿಭಾಯಿಸಿಲ್ಲ. ನೀವು ದೃಶ್ಯಗಳ ಮೂಲಕ ಚಲನಚಿತ್ರವನ್ನು ನಕಲಿಸಬಹುದು, ಆದರೆ ಪ್ರತಿಭೆ ಹೋಲಿಸಲಾಗದು. ನಿಮಗೆ ಇಷ್ಟವಾಗಬಹುದು ಆದರೆ ಯಾವುದೂ ಮೂಲವಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ತುಂಬಾ ಕೆಟ್ಟ ರೀಮೇಕ್ʼʼಎಂದು ಟ್ವೀಟ್‌ ಮಾಡಿದ್ದಾರೆ.

ಅಕ್ಷಯ್ ಕುಮಾರ್, ಇಮ್ರಾನ್ ಹಶ್ಮಿ, ಡಯಾನಾ ಪೆಂಟಿ ಮತ್ತು ನುಶ್ರತ್ ಭರುಚ್ಚಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಫೋನ್​ ಸೆಕ್ಸ್’​ ಸುಳಿಯಲ್ಲಿ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​; ಇಮ್ರಾನ್​ ಹಶ್ಮಿ ಎಂದು ವ್ಯಂಗ್ಯವಾಡಿದ ಪತ್ರಕರ್ತೆ!

ಸೆಲ್ಫಿ ಮಲಯಾಳಂನ ʻಡ್ರೈವಿಂಗ್ ಲೈಸೆನ್ಸ್ʼ ಚಿತ್ರದ ರಿಮೇಕ್ ಆಗಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಸುರಾಜ್ ವೆಂಜರಮೂಡು ಡ್ರೈವಿಂಗ್ ಲೈಸೆನ್ಸ್‌ನಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳನ್ನು ಅಕ್ಷಯ್ ಮತ್ತು ಇಮ್ರಾನ್ ಅಭಿನಯಿಸಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಸುಕುಮಾರನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಫ್ರೇಮ್ಸ್ ಸಹ-ನಿರ್ಮಾಣ ಮಾಡಿದೆ.

Exit mobile version