Site icon Vistara News

Kannada New Movie: ʻರೇಸರ್‌ʼ ಸಿನಿಮಾ ಮೋಷನ್ ಪೋಸ್ಟರ್ ಔಟ್‌: ಸ್ಟೈಲಿಶ್‌ ಆಗಿ ಬೈಕ್ ಏರಿ ಬಂದ ಅಕ್ಷಿತಾ ಸತ್ಯನಾರಾಯಣ್!

akshithasathyanarayana

ಬೆಂಗಳೂರು: ʻರೇಸರ್’ ಸಿನಿಮಾ (Kannada New Movie) ಮೂಲಕ ನಿರ್ಮಾಪಕ ಹಾಗೂ ನಿರ್ದೇಶಕರು ಆಗಿರುವ ವಿಷ್ಣುಕಾಂತ್ ಪುತ್ರ ಭರತ್ ವಿಷ್ಣುಕಾಂತ್ ನಿರ್ದೇಶನಕ್ಕಿಳಿದಿದ್ದಾರೆ. ಬೈಕ್ ರೇಸಿಂಗ್ ಕುರಿತ ನೈಜ ಘಟನೆ ಆಧಾರಿತ ಈ ಚಿತ್ರದ ಹೀರೊಯಿನ್ ಇಂಟ್ರೂಡಕ್ಷನ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ತೆಲುಗು ಸೀರಿಯಲ್ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಅಕ್ಷಿತಾ ಸತ್ಯನಾರಾಯಣ್ ರೇಸರ್ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಮೂಲತಃ ಕನ್ನಡದವರೇ ಆದ ಅಕ್ಷಿತಾ ಮಾಡೆಲ್ ಜಗತ್ತಿಗೆ ಚಿರಪರಿಚಿತರು. 2020ರ VK ನವತಾರೆ ಕಿರೀಟ ಮುಡಿಗೇರಿಸಿಕೊಂಡಿರುವ ಅವರೀಗ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ರೇಸರ್, ಗ್ಯಾರೇಜ್‌ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಅದಕ್ಕೆ ಸಿನಿಮ್ಯಾಟಿಕ್ ಟಚ್ ಕೊಟ್ಟು ಕಥೆ ಹೆಣೆಯಲಾಗಿದೆ. ಅದಕ್ಕಾಗಿ ನಾಯಕಿ ಅಕ್ಷಿತಾ ಸತ್ಯನಾರಾಯಣ್ ಬೈಕ್ ರೇಸ್ ಕಲಿತಿದ್ದಾರೆ. ದುಬಾರಿ ಬೆಲೆ ಬೈಕ್ ಏರಿ ಅಕ್ಷಿತಾ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿರುವ ಮೋಷನ್ ಪೋಸ್ಟರ್ ಪ್ರೇಕ್ಷರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅಕ್ಷಿತಾ ಸಿನಿಮಾದಲ್ಲಿ ಬಬ್ಲಿ ಹುಡುಗಿಯಾಗಿ ಪಾತ್ರ ನಿಭಾಯಿಸಿದ್ದಾರೆ.

ಕಳೆದ ಜನವರಿಯಲ್ಲಿ ಸೆಟ್ಟೇರಿದ್ದ ರೇಸರ್ ಸಿನಿಮಾದ 35ರಷ್ಟು ಭಾಗ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದೇ ಮಾಸಾಂತ್ಯಕ್ಕೆ ಹಾಡುಗಳ ಚಿತ್ರೀಕರಣ ನಡೆಯಲಿದೆ. ಭಾಯ್ ಎಂಬ ದೊಡ್ಡ ಪಾತ್ರಕ್ಕಾಗಿ ಮಲಯಾಳಂ, ಕನ್ನಡದ ಇಬ್ಬರು ದೊಡ್ಡ ಸ್ಟಾರ್ ಗಳನ್ನು ಅಪ್ರೋಚ್ ಮಾಡಲಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: Adipurush Movie: ಆದಿಪುರುಷ್ ಅದ್ಧೂರಿ ಓಪನಿಂಗ್; ರಾಜ್ಯದಲ್ಲಿ ಕನ್ನಡಕ್ಕಿಂತಲೂ ತೆಲುಗು ಆವೃತ್ತಿಗೇ ಹೆಚ್ಚು ಬೇಡಿಕೆ!

ಸಂದೇಶ್ ಪ್ರಸನ್ನ ನಾಯಕನಾಗಿ ನಟಿಸುತ್ತಿದ್ದು, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ, ಸ್ವಾತಿ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಮೈಸೂರು ಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಭರತ್ ವಿಷ್ಣುಕಾಂತ್ ನಿರ್ದೇಶನದ ಜತೆಗೆ ಭರತ್ ಫಿಲಂಸ್ ನಡಿ ತಾವೇ ರೇಸರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Exit mobile version