Site icon Vistara News

Tunisha Sharma | ಸೆಟ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ನಟಿ ತುನಿಶಾ ಶರ್ಮಾ

Tunisha Sharma

ಬೆಂಗಳೂರು: ಅರೇಬಿಯನ್ ನೈಟ್ಸ್ ಆಧಾರಿತ ಟಿವಿ ಸಿರೀಸ್‌ ʻಅಲಿ ಬಾಬಾ ದಸ್ತಾನ್-ಇ-ಕಾಬೂಲ್‌ʼನಲ್ಲಿ ಶೆಹಜಾದಿ ಮರಿಯಮ್ ಪಾತ್ರದಲ್ಲಿ ನಟಿಸಿರುವ ನಟಿ ತುನಿಶಾ ಶರ್ಮಾ ಶನಿವಾರ ಡಿಸೆಂಬರ್ 24 (Tunisha Sharma) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಟಿವಿ ಕಾರ್ಯಕ್ರಮದ ಸೆಟ್‌ ಒಂದರಲ್ಲಿಯೇ ಮೇಕಪ್ ರೂಮ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. 20 ವರ್ಷದ ನಟಿ ತುನಿಶಾ ಶರ್ಮಾ ‘ಚಕ್ರವರ್ತಿ ಅಶೋಕ ಸಾಮ್ರಾಟ್ʼ, ʻಗಬ್ಬರ್ ಪೂಂಚ್ವಾಲಾʼ, ʻಶೇರ್-ಎ-ಪಂಜಾಬ್: ಮಹಾರಾಜ ರಂಜಿತ್ ಸಿಂಗ್ʼ, ʻಇಂಟರ್ನೆಟ್ ವಾಲಾ ಲವ್ʼ ಮತ್ತು ʻಇಷ್ಕ್ ಸುಭಾನ್ ಅಲ್ಲಾʼ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು.

ಇದನ್ನೂ ಓದಿ | Nishi Singh | ಜನ್ಮದಿನದ ಖುಷಿ ಮಾಸುವ ಮೊದಲೇ ಹಿಂದಿ ನಟಿ ನಿಶಿ ಸಿಂಗ್‌ ನಿಧನ

ಟಿವಿ ಕಾರ್ಯಕ್ರಮಗಳಷ್ಟೇ ಅಲ್ಲದೇ ʻಫಿತೂರ್ʼ, ʻಬಾರ್ ಬಾರ್ ದೇಖೋʼ, ʻಕಹಾನಿ 2: ದುರ್ಗಾ ರಾಣಿ ಸಿಂಗ್ʼ ಮತ್ತು ʻದಬಾಂಗ್ 3ʼ ನಂತಹ ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ದಬಾಂಗ್ 3ನಲ್ಲಿ ಅವರು ಅತಿಥಿ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ | Actor Tabassum | ಫೂಲ್‌ ಖಿಲೆ ಹೈ ಗುಲ್ಶನ್‌ ಗುಲ್ಶನ್‌ ಖ್ಯಾತಿಯ ನಟಿ ತಬಸ್ಸುಮ್‌ ನಿಧನ

Exit mobile version