ಆಲಿಯಾ ಭಟ್ (Alia Bhatt) ಅವರು ರಣಬೀರ್ ಕಪೂರ್ ಜತೆ 2022 ಏಪ್ರಿಲ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿ ನವೆಂಬರ್ 6, 2022ರಂದು ಮಗಳು ರಾಹಾಳನ್ನು ಬರಮಾಡಿಕೊಂಡಿದ್ದರು. ಮಗಳ ಮುಖವನ್ನು ಇದುವರೆಗೂ ರಿವೀಲ್ ಮಾಡಿಲ್ಲ ದಂಪತಿ. ಕೆಲ ದಿನಗಳ ಹಿಂದೆ ಮಗಳೊಂದಿಗೆ ನಗರದ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಮಗಳು ರಾಹಾಳ ಫೋಟೊ ಕ್ಕಿಕ್ಕಿಸಬೇಡಿ ಎಂದು ಆಲಿಯಾ ಮತ್ತು ರಣಬೀರ್ ಮಾಧ್ಯಮಗಳು ಮತ್ತು ಛಾಯಾಗ್ರಾಹಕಕರಿಗೆ ಮನವಿ ಮಾಡಿದ್ದಾರೆ.
ರಣಬೀರ್ ಈ ಬಗ್ಗೆ ಮಾತನಾಡಿ ಕನಿಷ್ಠ ಆರಂಭಿಕ ವರ್ಷಗಳಲ್ಲಿ ಮಗಳ ಮುಖವನ್ನು ತೋರಿಸದಂತೆ ನಿರ್ಧಾರ ಮಾಡಿದ್ದೇವೆ. ನಂತರ ಸಹಜವಾಗಿ ರಾಹಾ ಬೆಳೆದಾಗ ಮತ್ತು ಅವಳು ಸಾಮಾಜಿಕ ಮಾಧ್ಯಮದಲ್ಲಿ ಇರಬೇಕೆಂದು ಬಯಸಿದಾಗ, ಅದು ಅವಳ ಆಯ್ಕೆಯಾಗಿದೆ. ಆದರೆ ಪೋಷಕರಾಗಿ ಸದ್ಯಕ್ಕೆ ಸಾಧ್ಯವಾದಷ್ಟು ಫೋಟೊಗಳಿಂದ ದೂರ ಇರುವಂತೆ ಬಯಸುತ್ತೇವೆ. ಪಾಪರಾಜಿಗಳು (ಸಿಲೆಬ್ರೆಟಿಗಳ ಬೆನ್ನುಬಿದ್ದು ಫೋಟೊ ಕ್ಲಿಕ್ಕಿಸುವವರು) ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಅವರು ನಮ್ಮನ್ನು ಅರ್ಥಮಾಡಿಕೊಂಡಿದ್ದಾರೆ ಎಂದುಕೊಳ್ಳುತ್ತೇವೆ. ಈ ಸಮಯದಲ್ಲಿ ರಾಹಾ ಕೇವಲ ತನ್ನ ಹೆತ್ತವರ ಮುಖವನ್ನು ನೋಡಲು ಮತ್ತು ಗುರುತಿಸಲು ಪ್ರಾರಂಭಿಸಿರುವ ಚಿಕ್ಕ ಮಗು. ಅವಳ ಫೋಟೊವನ್ನು ಸದ್ಯದ ಮಟ್ಟಿಗೆ ಸಾರ್ವಜನಿಕವಾಗಿ ತೋರಿಸಲು ನಮಗೆ ಇಷ್ಟವಿಲ್ಲ ಎಂದವರು ಹೇಳಿದ್ದಾರೆ.
ಇದನ್ನೂ ಓದಿ | Alia Bhatt | ಆಲಿಯಾ ಭಟ್ ಜನರೊಂದಿಗೆ ಹಂಚಿಕೊಳ್ಳಲು ಇಚ್ಛಿಸದ ಫೋಟೊ ಇದೀಗ ವೈರಲ್!
ನಾವು ಪಾಪರಾಜಿಗಳಿಗೆ ಪೋಸ್ ನೀಡುತ್ತೇವೆ. ನಮ್ಮ ಚಿತ್ರಗಳಿಗೆ ನೋ ಎನ್ನುವುದಿಲ್ಲ. ಆದರೆ ಅವರು ರಾಹಾಳ ಚಿತ್ರಗಳನ್ನು ಕ್ಲಿಕ್ ಮಾಡಬಾರದು ಅಷ್ಟೆ ಎಂದಿದ್ದಾರೆ.
ಆಲಿಯಾ ಮಾತನಾಡಿ ಒಂದು ವೇಳೆ ರಾಹಾಳ ಫೋಟೊ ನಿಮಗೆ ಸಿಕ್ಕಿದ್ದರೂ, ಆಕೆಯ ಮುಖವನ್ನು ಹೃದಯದ ಎಮೋಜಿ ಅಥವಾ ಗ್ರಾಫಿಕ್ ಮೂಲಕ ಮರೆಮಾಚಬೇಕು ಎಂದು ಸಲಹೆ ನೀಡಿದ್ದಾರೆ. ರಾಹಾಳ ಚಿತ್ರಗಳು ವೈರಲ್ ಆಗದಂತೆ ಅಭಿಮಾನಿಗಳ ಸಂಘಗಳೊಂದಿಗೆ ಮಾತನಾಡುವುದಾಗಿ ರಣಬೀರ್ ಮತ್ತು ಆಲಿಯಾ ಹೇಳಿದ್ದಾರೆ. ಸಮಯ ನೋಡಿ ಮಗಳನ್ನು ಪರಿಚಯಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ | Alia Bhatt | ತಲೆಕೆಳಗಾಗಿ ನೇತಾಡುವ ಭಂಗಿಯ ಫೋಟೊ ಶೇರ್ ಮಾಡಿದ ಆಲಿಯಾ ಭಟ್: ಸೋನು ಸೂದ್ ಹೇಳಿದ್ದೇನು?