Site icon Vistara News

Alia Bhatt | ಆಲಿಯಾ ಭಟ್‌ ಹಾಲುಣಿಸುವ ಫೋಟೊ ವೈರಲ್‌: ನಕಲಿ ಅಂತಿದ್ದಾರೆ ನೆಟ್ಟಿಗರು!

Alia Bhatt

ಬೆಂಗಳೂರು : ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt) ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಮಗಳು ರಾಹಾ (Raha) ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಗುವಿಗೆ ಹಾಲುಣಿಸುವ ಫೋಟೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಲಿಯಾ ಭಟ್‌ ನವೆಂಬರ್‌ ೬ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಈ ನಡುವೆ ಒಂದಿಷ್ಟು ಜನ, ವೈರಲ್ ಆಗಿರುವ ಆಲಿಯಾ ಫೋಟೊ ನಕಲಿ ಎಂದು ಹೇಳುತ್ತಿದ್ದಾರೆ. ಫೇಕ್ ಫೋಟೊವನ್ನು ಕೆಲ ಕಿಡಿಗೇಡಿಗಳು ಬೇಕೆಂದೇ ಹರಿಬಿಟ್ಟಿದ್ದಾರೆ ಎಂಬ ವದಂತಿ ಕೂಡ ಇದೆ. ಏಪ್ರಿಲ್ 14 ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ | Alia Bhatt | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಆಲಿಯಾ ಭಟ್‌

ನಟಿ ಆಲಿಯಾ ಭಟ್ ತಮ್ಮ ಬೇಬಿ ಬಂಪ್‌ ಫೋಟೊ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದರು. ಬ್ರಹ್ಮಾಸ್ತ್ರ ಸಿನಿಮಾ ಪ್ರಮೋಷನ್‌ ವೇಳೆ ಅವರ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ಪ್ರಚಾರವನ್ನೂ ಮಾಡಿದ್ದರು.

ಇದನ್ನೂ ಓದಿ | RRR Movie | ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್‌ನಲ್ಲೂ ಆರ್‌ಆರ್‌ಆರ್‌ ಹವಾ: ಆಲಿಯಾ ಭಟ್‌ ಪೋಸ್ಟ್‌ ವೈರಲ್‌!

Exit mobile version