ಬೆಂಗಳೂರು: ನಟಿ ಆಲಿಯಾ ಭಟ್ (Alia Bhatt) ಅವರನ್ನು ಇಟಾಲಿಯನ್ ಫ್ಯಾಷನ್ ಹೌಸ್ ಗುಚಿ ತಮ್ಮ ಮೊದಲ ಭಾರತೀಯ ಜಾಗತಿಕ ರಾಯಭಾರಿ ಎಂದು ಘೋಷಿಸಿದೆ. ಸಿಯೋಲ್‌ನಲ್ಲಿ ನಡೆಯಲಿರುವ ಗುಚಿ ಕ್ರೂಸ್ 2024 ರನ್‌ವೇ ಪ್ರದರ್ಶನದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಆಲಿಯಾ. ಅಂತಾರಾಷ್ಟ್ರೀಯ ಲೇಬಲ್‌ಗಾಗಿ ತನ್ನ ಮೊದಲ ಫೋಟೊಶೂಟ್‌ಅನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಟಿ ಡಿಸೈನರ್ ಸೂಟ್‌ನಲ್ಲಿ ಕಾಣಿಸಿಕೊಂಡಿದನ್ನು ಇಷ್ಟಪಟ್ಟಿದ್ದಾರೆ ಅವರ ಫ್ಯಾನ್ಸ್.
ಮ್ಯಾಚಿಂಗ್ ಬ್ಯಾಗ್ ಜತೆಗೆ ಬೂದು ಬಣ್ಣದ ಪ್ಯಾಂಟ್‌ಸೂಟ್ ಧರಿಸಿದ್ದ ಆಲಿಯಾ ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ಆಲಿಯಾ ‘ಬೇಸಿಕ್ ಸೂಟ್ ಲುಕ್ ತುಂಬಾ ಪೊಷ್ʼ ಆಗಿ ಕಾಣಿಸುತ್ತಿದೆ’ ಎಂದು ಹೇಳಿದ್ದಾರೆ. ಒಬ್ಬ ಅಭಿಮಾನಿ ʻʻಗುಚ್ ಕ್ರೂಸ್ ಆಲಿಯಾರನ್ನು ಪಡೆದದ್ದು ಅದೃಷ್ಟಶಾಲಿʼʼ ಎಂದರು. ಅಭಿಮಾನಿಯೊಬ್ಬರು, “ಇದು ಜಗತ್ತನ್ನು ಆಳುವ ಸಮಯ. ಮೊದಲ ಭಾರತೀಯ ಸೆಲೆಬ್ರಿಟಿ, ವಿಶ್ವದ ಅತಿದೊಡ್ಡ ಫ್ಯಾಷನ್ ಬ್ರಾಂಡ್ ಗುಚಿಗೆ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.” ಎಂದು ಬರೆದುಕೊಂಡಿದ್ದಾರೆ..
ಆಲಿಯಾ ಮಾತನಾಡಿ “ನಾನು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಗುಚಿ ಬ್ರ್ಯಾಂಡ್‌ವನ್ನು ಪ್ರತಿನಿಧಿಸುವ ಗೌರವವನ್ನು ಹೊಂದಿದ್ದೇನೆ. ಗುಚಿಯ ಪರಂಪರೆಯು ಯಾವಾಗಲೂ ನನಗೆ ಸ್ಫೂರ್ತಿ ಮತ್ತು ಆಸಕ್ತಿಯನ್ನುಂಟು ಮಾಡಿದೆʼʼ ಎಂದರು.
ನಟಿ ಆಲಿಯಾ ಭಟ್ (Alia Bhatt) ಅವರನ್ನು ಇಟಾಲಿಯನ್ ಫ್ಯಾಷನ್ ಹೌಸ್ ಗುಚಿ ತಮ್ಮ ಮೊದಲ ಭಾರತೀಯ ಜಾಗತಿಕ ರಾಯಭಾರಿ ಎಂದು ಘೋಷಿಸಿದೆ. ವರದಿಯ ಪ್ರಕಾರ, ಮುಂದಿನ ವಾರ ಸಿಯೋಲ್‌ನಲ್ಲಿ ನಡೆಯಲಿರುವ ಗುಚಿ ಕ್ರೂಸ್ 2024 ಪ್ರದರ್ಶನದಲ್ಲಿ ಆಲಿಯಾ ಬ್ರ್ಯಾಂಡ್‌ನ ಜಾಗತಿಕ ರಾಯಭಾರಿಯಾಗಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್ ಗುಚಿಯ ಮೊದಲ ಭಾರತೀಯ ಜಾಗತಿಕ ರಾಯಭಾರಿಯಾಗಿದ್ದಾರೆ. ಸಿಯೋಲ್‌ನಲ್ಲಿ ನಡೆಯಲಿರುವ ಗುಚಿ ಕ್ರೂಸ್ 2024 ರನ್‌ವೇ ಪ್ರದರ್ಶನದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ನಗರದ ಜಿಯೊಂಗ್‌ಬೊಕ್‌ಗುಂಗ್ ಅರಮನೆಯಲ್ಲಿ (Gyeongbokgung Palace) ನಡೆಯಲಿದೆ.
ಇದನ್ನೂ ಓದಿ; Alia Bhatt: ದೀಪಿಕಾ ಲುಕ್ ಕಾಪಿ ಮಾಡಿದ್ರಾ ಆಲಿಯಾ? ಟ್ರೋಲಿಗರ ಬಾಯಿಗೆ ಆಹಾರವಾದ ನಟಿ
ಆಲಿಯಾ ಭಟ್ ಪೋಸ್ಟ್
ಮೊದಲ ಬಾರಿಗೆ ಮೆಟ್ ಗಾಲಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲಿಯಾ ಭಟ್ 1,00,000 ಮುತ್ತುಗಳಿಂದ ಅಲಂಕರಿಸಲ್ಪಟ್ಟ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಭಾರತದ ಫ್ಯಾಷನ್ ಡಿಸೈನರ್ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿರುವ ಈ ಉಡುಪಿನಲ್ಲಿ 1 ಲಕ್ಷ ಬಿಳಿ ಮುತ್ತುಗಳ ಕಸೂತಿ ಮಾಡಲಾಗಿದೆ. ಆಲಿಯಾ ಭಟ್ ಅವರು ಈಗ ಬಾಲಿವುಡ್ಗೆ ಮಾತ್ರ ಸೀಮಿತ ಆಗಿಲ್ಲ. ಅವರು ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಬಂದಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ.