ಬೆಂಗಳೂರು; ಆಲಿಯಾ ಭಟ್ (Alia Bhatt) ಮತ್ತು ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್‌ನಲ್ಲಿ ಸದ್ಯ ಮಿಂಚುತ್ತಿರುವ ನಟಿಯರು. ನಟನೆಯ ಜತೆಗೆ ಇವರಿಬ್ಬರ ಫ್ಯಾಷನ್ ಕುರಿತಾಗಿ ಬಹಳ ಚರ್ಚೆಯಲ್ಲಿರುತ್ತಾರೆ. ಆದರೆ ಇವರಿಬ್ಬರ ಫ್ಯಾನ್ಸ್‌ಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ, ದೀಪಿಕಾ ಅವರ ಅಭಿಮಾನಿಯೊಬ್ಬರು ತಮ್ಮ ಇತ್ತೀಚಿನ ಮ್ಯಾಗಜೀನ್ ಕವರ್‌ಗಾಗಿ ದೀಪಿಕಾ ಅವರ ಲುಕ್‌ವನ್ನು ಆಲಿಯಾ ಕಾಪಿ ಮಾಡಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
ಹಾರ್ಪರ್ಸ್ ಬಜಾರ್‌ನ ಕವರ್ ಶೂಟ್‌ಗಾಗಿ ಆಲಿಯಾ ಭಟ್ ಹಸಿರು ಉಡುಗೆ ಧರಿಸಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಇದೇ ರೀತಿಯ ಹೊಂದುವ ಉಡುಗೆಯನ್ನು ದೀಪಿಕಾ ಪಡುಕೋಣೆ 72ನೇ ಕಾನ್ ಚಲನಚಿತ್ರೋತ್ಸವದಲ್ಲಿ ಧರಿಸಿದ್ದರು. ಇದೀಗ ಆಲಿಯಾ ಧರಿಸಿರುವ ಉಡುಗೆಯನ್ನು ದೀಪಿಕಾ ಅವರು ಧರಿಸಿರುವ ಗ್ರೀನ್ ಟ್ಯೂಲ್ ಗೌನ್‌ನೊಂದಿಗೆ ಹೋಲಿಸಿದ್ದಾರೆ.
ನೆಟ್ಟಿಗರೊಬ್ಬರು ಎರಡೂ ಫೋಟೊಗಳನ್ನು ಹಂಚಿಕೊಂಡು ʻʻಆಲಿಯಾ ಭಟ್ ಅವರು ದೀಪಿಕಾ ಪಡುಕೋಣೆಯಾಗಲು ಪ್ರಯತ್ನಿಸುತ್ತಿದ್ದಾರೆʼʼಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ಯಾವತ್ತೂ ಆಲಿಯಾ ಭಟ್ ಅವರು ದೀಪಿಕಾ ಅವರ ಫ್ಯಾಷನ್‌ವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಆಲಿಯಾ ಭಟ್ ಅಭಿಮಾನಿಗಳು ಸಮರ್ಥಿಸಿಕೊಂಡು, ಆಲಿಯಾ 2018ಲ್ಲಿಯೇ ಈ ರೀತಿಯ ಬಟ್ಟೆಯನ್ನು ಧರಿಸಿದ್ದರು. ಈ ಶೈಲಿಯ ಉಡುಗೆ ಅವರಿಗೆ ಹೊಸದಲ್ಲʼʼಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Alia Bhatt: ಇಟಾಲಿಯನ್ ಫ್ಯಾಷನ್ ಹೌಸ್ ಗುಚಿಗೆ ನಟಿ ಆಲಿಯಾ ಭಟ್ ಮೊದಲ ಭಾರತೀಯ ಜಾಗತಿಕ ರಾಯಭಾರಿ
ವೈರಲ್ ಟ್ವೀಟ್
ಮೊದಲ ಬಾರಿಗೆ ಮೆಟ್ ಗಾಲಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲಿಯಾ ಭಟ್ 100,000 ಮುತ್ತುಗಳಿಂದ ಅಲಂಕರಿಸಲ್ಪಟ್ಟ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಭಾರತದ ಫ್ಯಾಷನ್ ಡಿಸೈನರ್ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿರುವ ಈ ಉಡುಪಿನಲ್ಲಿ 1 ಲಕ್ಷ ಬಿಳಿ ಮುತ್ತುಗಳ ಕಸೂತಿ ಮಾಡಲಾಗಿದೆ. ಆಲಿಯಾ ಭಟ್ ಅವರು ಈಗ ಬಾಲಿವುಡ್ಗೆ ಮಾತ್ರ ಸೀಮಿತ ಆಗಿಲ್ಲ. ಅವರು ಹಾಲಿವುಡ್ ಚಿತ್ರ ಕೂಡ ಮಾಡಿದ್ದಾರೆ. ‘ಹಾರ್ಟ್ ಆಫ್ ಸ್ಟೋನ್’ ಹೆಸರಿನ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿ ಬಂದಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ. ದೀಪಿಕಾ ಮುಂದಿನ ದಿನಗಳಲ್ಲಿ ಹೃತಿಕ್ ರೋಷನ್ jತೆಗೆ ಫೈಟರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆಲಿಯಾ ಭಟ್ ಅವರು ಕರಣ್ ಜೋಹರ್ ನಿರ್ದೇಶನದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಶಬಾನಾ ಅಜ್ಮಿ, ಧರ್ಮೇಂದ್ರ ಮತ್ತು ಜಯಾ ಬಚ್ಚನ್ ನಟಿಸಿದ್ದಾರೆ.