ಬೆಂಗಳೂರು: ನಟಿ ಆಲಿಯಾ ಭಟ್ ((Alia Bhatt )) ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿ ಅಕ್ಟೋಬರ್ 19ಕ್ಕೆ 10 ವರ್ಷಗಳು ಪೂರೈಸಿವೆ. ಈ ಸಂತಸದ ವಿಚಾರವನ್ನು ಇನ್ಸ್ಟಾ ಮೂಲಕ ಹಂಚಿಕೊಂಡಿದ್ದಾರೆ. 2012ರಲ್ಲಿ ʻಸ್ಟೂಡೆಂಟ್ ಆಫ್ ದಿ ಇಯರ್ʼ ಚಿತ್ರದ ಮೂಲಕ ಅಲಿಯಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಈ ಬಗ್ಗೆ ಖಷಿಯನ್ನು ಹಂಚಿಕೊಂಡ ಆಲಿಯಾ ಭಟ್ ಪೋಸ್ಟ್ ಶೇರ್ ಮಾಡಿ, ʻʻಇವತ್ತಿಗೆ ಸಿನಿ ರಂಗದಲ್ಲಿ 10 ವರ್ಷಗಳನ್ನು ಪೂರೈಸಿದೆ. ನನ್ನ ಸಿನಿ ಜರ್ನಿಗೆ ತುಂಬಾ ಕೃತಜ್ಞಳಾಗಿದ್ದೇನೆ. ಪ್ರತಿ ದಿನವೂ ನಾನು ಒಳ್ಳೆಯ ಭರವೆಸೆಯೊಂದಿಗೆ ಇನ್ನೂ ಹಾರ್ಡ್ ವರ್ಕ್ ಮಾಡಿ, ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ,ʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Alia Bhatt | ಅಲಿಯಾ ಭಟ್ ಬೇಬಿ ಬಂಪ್ ಹೊಸ ಫೋಟೋಗಳು ವೈರಲ್!
ಪೋಸ್ಟ್‌ಗೆ ಬಾಲಿವುಡ್ ನಟ ನಟಿಯರು ಕಮೆಂಟ್ ಮಾಡುವುದರ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ನಟಿ ಕರೀನಾ ಕಪೂರ್, ಜಾನ್ವಿ ಕಪೂರ್, ಶ್ವೇತಾ ಬಚ್ಚನ್, ಜೋಯಾ ಮತ್ತು ನಟರಾದ ವರುಣ್ ಧವನ್ ಕಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲಿಯಾ ಭಟ್ ಅಭಿಮಾನಿಗಳು ಕೂಡ ಶುಭ ಹಾರೈಸಿದ್ದಾರೆ.
ಆಲಿಯಾ ಭಟ್ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ನಟಿ ಸೋನಿ ರಜ್ದಾನ್ ದಂಪತಿ ಪುತ್ರಿ. ʻಹೈವೇʼ, ʻ2 ಸ್ಟೇಟ್ಸ್ʼ, ʻಡಿಯರ್ ಜಿಂದಗಿʼ ಮತ್ತು ʻಗಂಗೂಬಾಯಿ ಕಥಿಯಾವಾಡಿʼ ಹೀಗೆ ಹಲವು ಪ್ರಮುಖ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಂಪತಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಲಿಯಾ ಭಟ್ ಕೊನೆಯದಾಗಿ ರಣಬೀರ್ ಕಪೂರ್ ಜತೆ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ | Alia Bhatt | ಮುಂದಿನ ತಿಂಗಳೇ ಆಲಿಯಾ ಭಟ್ ಹೆರಿಗೆ; ಮಗುವಿನ ಸ್ವಾಗತಕ್ಕೆ ಸ್ಟಾರ್ ದಂಪತಿ ಭರ್ಜರಿ ಸಿದ್ಧತೆ