Site icon Vistara News

Alia Bhatt | ತಲೆಕೆಳಗಾಗಿ ನೇತಾಡುವ ಭಂಗಿಯ ಫೋಟೊ ಶೇರ್‌ ಮಾಡಿದ ಆಲಿಯಾ ಭಟ್‌: ಸೋನು ಸೂದ್‌ ಹೇಳಿದ್ದೇನು?

Alia Bhatt

ಬೆಂಗಳೂರು: ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt) ಯೋಗ ಮಾಡುತ್ತಿರುವ ಫೋಟೊ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ʻʻಡೆಲಿವರಿ ಆದ ನಂತರ ಮೊದಲ ಬಾರಿಗೆ ಈ ಆಸನ ಪ್ರಯತ್ನಿಸಿದ್ದೇನೆʼʼ ಎಂದು ಹೇಳಿಕೊಂಡಿದ್ದಾರೆ. ತಲೆಕೆಳಗಾಗಿ ನೇತಾಡುತ್ತಿರುವ ಫೋಟೊ ಇದಾಗಿದೆ. ಮಗುವಿಗೆ ಜನ್ಮ ನೀಡಿ ಕೆಲವೇ ದಿನಗಳಲ್ಲಿ ಈ ರೀತಿಯ ಸಾಹಸ ಮಾಡಿದ ಆಲಿಯಾ ಭಟ್ ನೋಡಿ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. 

ಸೆಲೆಬ್ರಿಟಿ ಫಿಟ್‌ನೆಸ್ ತರಬೇತುದಾರರಾದ ಅಂಶುಕಾ ಪರ್ವಾನಿ ಅವರು ಆಲಿಯಾ ಅವರ ವಿಡಿಯೊವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ತಲೆ ಕೆಳಗಾಗಿ ಇರುವ ಭಂಗಿಯ ಫೋಟೊ ಹಂಚಿಕೊಂಡಿರುವ ನಟಿ ಆಲಿಯಾ, “ಡೆಲಿವರಿಯಾಗಿ ಒಂದೂವರೆ ತಿಂಗಳ ಬಳಿಕ ನಾನು ಮತ್ತೆ ನನ್ನ ಕೋರ್‌ಗೆ ಮರಳುತ್ತಿದ್ದೇನೆ. ನನ್ನ ಕೋಚ್‌ ಅವರ ಮಾರ್ಗದರ್ಶನಲ್ಲಿ ಈ ಭಂಗಿ ಪ್ರಯತ್ನಿಸಲು ಸಾಧ್ಯವಾಯಿತು. ಪ್ರಸವದ ನಂತರ ನಿಮ್ಮ ದೇಹದ ಕಾಳಜಿ ತುಂಬ ಮುಖ್ಯ. ನನ್ನ ವ್ಯಾಯಾಮದ ಸಮಯದಲ್ಲಿ ನಾನು ನಡೆಯುವುದು, ನನ್ನ ಸ್ಥಿರತೆ ಮತ್ತು ಸಮತೋಲನವನ್ನು ಕಂಡುಕೊಳ್ಳುವುದು ಮಾಡಿದ್ದೇನೆ. ವ್ಯಾಯಾಮ ಮಾಡುವ ಮೊದಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ನಂತರ ಮಾಡಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Alia Bhatt | ಆಲಿಯಾ ಭಟ್‌ ಹಾಲುಣಿಸುವ ಫೋಟೊ ವೈರಲ್‌: ನಕಲಿ ಅಂತಿದ್ದಾರೆ ನೆಟ್ಟಿಗರು!

ಸಿನಿ ಸೆಲೆಬ್ರಿಟಿಗಳು ಕೂಡ ಕಮೆಂಟ್ ಮಾಡಿ ʻವಾವ್ʼ ಎನ್ನುತ್ತಿದ್ದಾರೆ. ನಟ ಸೋನು ಸೂದ್ ಕಮೆಂಟ್ ಮಾಡಿ, ‘ತಪ್ಪಾಗಿ ನಿಮ್ಮ ಚಿತ್ರವನ್ನು ತಲೆಕೆಳಗಾಗಿ ಪೋಸ್ಟ್ ಮಾಡಿದ್ದೀರಿ’ ಎಂದು ಹೇಳಿದ್ದಾರೆ. ಆಲಿಯಾ ಭಟ್‌ ನವೆಂಬರ್‌ ೬ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಏಪ್ರಿಲ್ 14ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಲಿಯಾ ಈಗ ಮಗಳು ರಾಹಾ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ | Alia Bhatt | ಆಲಿಯಾ ಭಟ್‌ ಹಾಲುಣಿಸುವ ಫೋಟೊ ವೈರಲ್‌: ನಕಲಿ ಅಂತಿದ್ದಾರೆ ನೆಟ್ಟಿಗರು!

Exit mobile version