Alia Bhatt: 108 ಸೂರ್ಯ ನಮಸ್ಕಾರ ಮಾಡಿದ ಆಲಿಯಾ ಭಟ್: ಫೋಟೊಗಳು ವೈರಲ್! Yashaswi Devadiga 1 year ago ಮುದ್ದು ಮಗಳು ರಾಹಾ ಮನೆಗೆ ಕಾಲಿಟ್ಟ ಬೆನ್ನಲ್ಲೇ ಆಲಿಯಾ ಭಟ್ ಫಿಟ್ನೆಸ್ ಕಡೆ ಮುಖ ಮಾಡಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಯೋಗ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ಆಲಿಯಾ.ಇದೀಗ ಆಲಿಯಾ ಅವರ ಯೋಗ ತರಬೇತುದಾರರಾದ ಅಂಶುಕಾ ಅವರು ನಟಿ ಧ್ಯಾನ ಮಾಡುತ್ತಿರುವ ಫೋಟೊಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆಆಲಿಯಾ ಭಟ್ ಅವರು 108 ಸೂರ್ಯ ನಮಸ್ಕಾರ ಮಾಡಿದರು ಹಾಗೂ ದಿನದ ಫಿಟ್ನೆಸ್ ಗುರಿಯನ್ನು ಪೂರ್ಣಗೊಳಿಸಿದರು ಎಂದು ಯೋಗ ತರಬೇತುದಾರರಾದ ಅಂಶುಕಾ ಹೇಳಿಕೊಂಡಿದ್ದಾರೆ. ಸಹೋದರಿ ಶಾಹೀನ್ ಭಟ್ ಮತ್ತು ಅವರ ಯೋಗ ತರಬೇತುದಾರರೊಂದಿಗೆ ಮುದ್ದಾದ ಸೆಲ್ಫಿಗೆ ಪೋಸ್ ನೀಡಿದ್ದಾರೆ ಆಲಿಯಾ.ಆಲಿಯಾ ಭಟ್ ಕೊನೆಯದಾಗಿ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ಲೇ ಜರಾ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮತ್ತು ಹಾಲಿವುಡ್ ಸಿನಿಮಾ ಹಾರ್ಟ್ ಆಫ್ ಸ್ಟೋನ್ ಹೀಗೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.