ಬೆಂಗಳೂರು: ರಣಬೀರ್ ಕಪೂರ್- ಆಲಿಯಾ ಭಟ್ (Alia Bhatt) ಮುದ್ದು ಮಗಳು ರಾಹಾ ಆಗಮನದ ಖುಷಿಯಲ್ಲಿದ್ದಾರೆ. ಮಗಳ ಮುಖವನ್ನು ಎಲ್ಲಿಯೂ ರಿವೀಲ್ ಮಾಡದ ಆಲಿಯಾ ಭಟ್ ಇದೀಗ ಜಾಹೀರಾತಿನ ಪೋಸ್ಟ್‌ನೊಂದಿಗೆ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಈ ಮಗುವಿನ ಫೋಟೊ ನೋಡಿ ಆಲಿಯಾ ಮಗು ಎಂದೇ ಕೆಲವರು ಭಾವಿಸಿದ್ದಾರೆ. ಈ ಪೋಸ್ಟ್ ಬಗ್ಗೆ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಆಲಿಯಾ, ಜಾಹೀರಾತಿನ ಪೋಸ್ಟ್‌ನೊಂದಿಗೆ ಮಗುವಿನ ಫೋಟೊ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಜಾಹೀರಾತಿನ ಪೋಸ್ಟ್ ಅನ್ನು ನಟಿ ಹಂಚಿಕೊಂಡಿರೋದನ್ನು ನೋಡಿ ಆಲಿಯಾ ಮಗು ಎಂದೇ ಕೆಲವರು ಭಾವಿಸಿದ್ದಾರೆ. ಚಿತ್ತಾರಗಳ ಮಧ್ಯೆ ಕುಳಿತಿರುವ ಮಗು ಪಿಂಕ್ ಬಣ್ಣದ ಬಟ್ಟೆ ತೊಟ್ಟಿದೆ. ಅಂದಹಾಗೆ ಇದು ಬ್ರ್ಯಾಂಡ್ ಪ್ರಚಾರಕ್ಕಾಗಿ ಆಲಿಯಾ ಭಟ್ ಪೋಸ್ಟ್ ಶೇರ್ ಮಾಡಿದ್ದಾರೆ. ಹಾಗಾಗಿ ಇದು ಆಲಿಯಾ ಮಗು ರಾಹಾ ಎಂದು ಅಭಿಮಾನಿಗಳು ತಪ್ಪು ಗ್ರಹಿಸಿದ್ದಾರೆ.
ಒಬ್ಬ ಅಭಿಮಾನಿ, ‘ಒಂದು ಕ್ಷಣ ನಾನು ಮಗು ರಾಹಾ ಎಂದು ಭಾವಿಸಿದೆ’ ಎಂದು ಬರೆದರೆ, ಮತ್ತೊಬ್ಬರು ‘ಎಲ್ಲರೂ ಇದನ್ನು ರಾಹಾ ಎಂದು ಭಾವಿಸಿದ್ದರು. 3 ತಿಂಗಳ ಮಕ್ಕಳು ನೇರವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಿʼʼ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Alia Bhatt: 108 ಸೂರ್ಯ ನಮಸ್ಕಾರ ಮಾಡಿದ ಆಲಿಯಾ ಭಟ್: ಫೋಟೊಗಳು ವೈರಲ್!
ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಆಲಿಯಾ ಹಾಗೂ ರಣಬೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತನ್ನ ವೃತ್ತಿಜೀವನದ ಯಶಸ್ಸಿನ ಉತ್ತುಂಗದಲ್ಲಿದ್ದರು ಆಲಿಯಾ. ಮದುವೆಯಾಗುವ ಮತ್ತು ತಾಯ್ತನವನ್ನು ಸ್ವೀಕರಿಸುವ ನಿರ್ಧಾರಕ್ಕೆ ತಾನು ಎಂದಿಗೂ ವಿಷಾದಿಸುವುದಿಲ್ಲ ಎಂದು ಬಾಂಬೆ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆಲಿಯಾ ಹೇಳಿಕೊಂಡಿದ್ದರು. ಇದು ತನ್ನ ಜೀವನದಲ್ಲಿ ತಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂತಲೂ ಹೇಳಿದ್ದರು.
ಇದನ್ನೂ ಓದಿ:Alia Bhatt | ತಲೆಕೆಳಗಾಗಿ ನೇತಾಡುವ ಭಂಗಿಯ ಫೋಟೊ ಶೇರ್ ಮಾಡಿದ ಆಲಿಯಾ ಭಟ್: ಸೋನು ಸೂದ್ ಹೇಳಿದ್ದೇನು?
ಆಲಿಯಾ ಅವರು ರಣವೀರ್ ಸಿಂಗ್ ಜತೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಜೋಹರ್ ನಿರ್ದೇಶನದ ಈ ಚಿತ್ರದಲ್ಲಿ ಜಯಾ ಬಚ್ಚನ್, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ವರ್ಷ ಜುಲೈನಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.