ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಆಗಾಗ ಬಾಲಿವುಡ್ ಫೋಟೋಗ್ರಾಫರ್‌ಗಳ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ನಟಿ ಕುಟುಂಬದೊಂದಿಗೆ ಗುರುವಾರ ಡಿನ್ನರ್ ಪಾರ್ಟಿ ಮಾಡಿದ್ದು, ಅಲ್ಲಿಂದ ಹೊರಗೆ ಬರುವಾಗ ಮಾಧ್ಯಮದವರ ಕಣ್ಣಿಗೆ ಬಿದ್ದರು. ಆ ವೇಳೆ ನಟಿ ಮಾಡಿದ ಒಂದು ಕೆಲಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಲ್ಲಿದೆ.
ಆಲಿಯಾ ಅವರು ತಾಯಿ ಸೋನಿ ರಾಜ್ದಾನ್ ಮತ್ತು ಸಹೋದರಿ ಶಹೀನ್ ಭಟ್ ಅವರೊಂದಿಗೆ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ಹೊರಬಂದಾಗ ಬಾಲಿವುಡ್ ಫೋಟೋಗ್ರಾಫರ್‌ಗಳನ್ನು ಕಂಡ ಅವರು ಅವರಿಗೆ ಪೋಸ್ ಕೊಟ್ಟಿದ್ದಾರೆ. ಫೋಟೊ ಹೊಡೆಯುವ ಗಡಿಬಿಡಿಯಲ್ಲಿ ಫೋಟೊಗ್ರಾಫರ್ ಒಬ್ಬರು ತಮ್ಮ ಚಪ್ಪಲಿ ಅಲ್ಲೇ ಬಿಟ್ಟಿದ್ದರು. ಆಲಿಯಾ ತಮ್ಮ ಕಾರಿನ ಬಳಿಗೆ ತೆರಳುವಾಗ ಅವರಿಗೆ ಒಂದು ಚಪ್ಪಲಿ ಕಾಣಿಸಿಕೊಂಡಿದೆ. ಆಗ ಅವರು ಇದು ಯಾರ ಚಪ್ಪಲಿ ಎಂದು ಕೇಳಿದ್ದಾರೆ. ಅದಕ್ಕೆ ಅಲ್ಲಿದ್ದ ಫೋಟೋಗ್ರಾಫರ್ ಒಬ್ಬರು ನನ್ನದೇ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: Ranbir Kapoor: ‘ಅನಿಮಲ್’ ಬಿಡುಗಡೆ ದಿನಾಂಕ ಪೋಸ್ಟ್ ಪೋನ್; ಅಕ್ಷಯ್ ಕುಮಾರ್, ಆಲಿಯಾ ಸಿನಿಮಾಗಳಿಂದ ಕ್ಲ್ಯಾಶ್!
ಹಾಗೆ ಹೇಳುತ್ತಿದ್ದಂತೆಯೇ ಬೇರೆ ಏನನ್ನೂ ಯೋಚಿಸದ ನಟಿ ಆ ಚಪ್ಪಲಿಯನ್ನು ಕೈಯಲ್ಲಿ ಎತ್ತಿಕೊಂಡು ಫೋಟೋಗ್ರಾಫರ್ ಕಾಲಿನ ಬಳಿ ತಂದು ಹಾಕಿದ್ದಾರೆ. ಈ ವೇಳೆ ಫೋಟೋಗ್ರಾಫರ್‌ಗಳು ಬೇಡ ಎಂದು ಎಷ್ಟು ಹೇಳಿದರೂ ನಟಿ ಅದನ್ನು ಕೇಳಿಸಿಕೊಳ್ಳದೆ ಈ ಕೆಲಸ ಮಾಡಿದ್ದಾರೆ.
ನಟಿ ಈ ರೀತಿ ಚಪ್ಪಲಿ ತಂದುಕೊಟ್ಟ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಷ್ಟು ದೊಡ್ಡ ನಟಿಯಾದರೂ ಅದನ್ಯಾವುದನ್ನೂ ಲೆಕ್ಕಿಸದೆ ಮಾಧ್ಯಮದವರ ಚಪ್ಪಲಿಯನ್ನೂ ಕೈನಲ್ಲಿ ಹಿಡಿದ ನಟಿಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಅಹಂ ಇಲ್ಲದ ನಟಿ ಆಲಿಯಾ”, “ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬಾರದು ಎಂದು ಆಲಿಯಾ ತೋರಿಸಿಕೊಟ್ಟಿದ್ದಾರೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.
ಇದನ್ನೂ ಓದಿ: Alia Bhatt: ದೀಪಿಕಾ, ಪ್ರಿಯಾಂಕಾ ನೋಡಿ ಕಲಿಯಿರಿ; ಆಲಿಯಾ ವರ್ತನೆಗೆ ನೆಟ್ಟಿಗರ ಕ್ಲಾಸ್!
ಆಲಿಯಾ ಅವರು ನಟಿಸಿರುವ ರಾಕಿ ಔರ್ ಕಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ಈ ಸಿನಿಮಾವನ್ನು ಕರಣ್ ಜೋಹರ್ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಆಲಿಯಾ ಅವರಿಗೆ ರಣವೀರ್ ಸಿಂಗ್ ಅವರು ಜೋಡಿಯಾಗಿ ನಟಿಸಿದ್ದಾರೆ. ಜಯಾ ಬಚ್ಚನ್, ಧರ್ಮೇಂದ್ರ, ಮತ್ತು ಶಬಾನಾ ಅಜ್ಮಿ ಮುಂತಾದ ಹಿರಿಯ ನಟರು ತಾರಾಗಣದಲ್ಲಿದ್ದಾರೆ. ಈ ಸಿನಿಮಾ ಜುಲೈ 23ರಂದು ತೆರೆ ಕಾಣಲಿದೆ.