Site icon Vistara News

Alia Bhatt : ಫೋಟೋಶಾಪ್‌ ಮಾಡಿರುವ ಫೋಟೊ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಆಲಿಯಾ ಭಟ್

#image_title

ಮುಂಬೈ: ಫೋಟೋಶಾಪ್‌ ಈಗಿನ ಯುವಕರ ಫೇವರಿಟ್‌ ಆಪ್‌. ಅದರಲ್ಲಿ ಫೋಟೋಗಳನ್ನು ಎಡಿಟ್‌ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಲೈಕ್‌, ಕಾಮೆಂಟ್‌ ಗಿಟ್ಟಿಸಿಕೊಳ್ಳುವುದೇ ಅವರ ಗುರಿ. ಆದರೆ ಇದೀಗ ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt) ಕೂಡ ಫೋಟೋಶಾಪ್‌ ಅನ್ನು ಬಳಸುತ್ತಿದ್ದಾರೆ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ. ನಟಿ ಹಾಕಿದ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿದೆ.

ಆಲಿಯಾ ಇತ್ತೀಚೆಗೆ ಗುಚಿ ಗ್ರೂಸ್‌ 2024 ಕಾರ್ಯಕ್ರಮಕ್ಕೆಂದು ದಕ್ಷಿಣ ಕೋರಿಯಾಕ್ಕೆ ತೆರಳಿದ್ದರು. ಅಲ್ಲಿ ಅವರು ಹಲವಾರು ಸೆಲೆಬ್ರಿಟಿಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಅದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ರೀತಿ ಹಂಚಿಕೊಂಡಿರುವ ಒಂದು ಫೋಟೋದಲ್ಲಿ ನಟಿ ಫೋಟೋಶಾಪ್‌ ಮಾಡಿದ್ದಾರೆ ಎನ್ನುವುದು ನೆಟ್ಟಿಗರ ಆರೋಪ.

ಇದನ್ನೂ ಓದಿ: Viral Video: ಹಿರಿಯ ನಟಿ ರೇಖಾರನ್ನು ನೋಡುತ್ತಿದ್ದಂತೆಯೇ ಓಡಿ ಹೋಗಿ ತಬ್ಬಿಕೊಂಡ ಅಲಿಯಾ ಭಟ್
ಈ ಬಗ್ಗೆ ರೆಡ್ಡಿಟ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. “ಫೋಟೋದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮುಖವನ್ನು ʼರಿಪೇರಿʼ ಮಾಡಲಾಗಿದೆ. ಏರ್‌ಬ್ರಷ್‌ ಮಾಡಿರುವುದು ಕೂಡ ನೀಟಾಗಿ ಕಾಣುತ್ತಿದೆ” ಎಂದು ಒಬ್ಬರು ಹೇಳಿದ್ದಾರೆ. ಹಾಗೆಯೇ “ಆಲಿಯಾ ಯಾವಾಗಲೂ ತಮ್ಮ ಕೈಗಳಿಗೆ ಫೋಟೋಶಾಪ್‌ ಮಾಡುವುದನ್ನು ನಾನು ಗಮನಿಸಿದ್ದೇನೆ. ಹಾಗೆಯೇ ಮುಖವನ್ನು ಕೂಡ ಸಣ್ಣದಾಗಿ, ಉದ್ದವಾಗಿ ಕಾಣುವಂತೆ ಮಾಡುವುದಕ್ಕೆಂದು ಫೋಟೋಶಾಪ್‌ ಮಾಡಲಾಗಿದೆ. ಅವರ ಇನ್‌ಸ್ಟಾಗ್ರಾಂ ಫೋಟೋಗಳು ಅವರು ನಿಜವಾಗಿ ಕಾಣುವುದಕ್ಕಿಂತ ಬೇರೆಯೇ ಇರುತ್ತವೆ” ಎಂದು ಹೇಳಿದ್ದಾರೆ.‌

ಹಾಗೆಯೇ ಇನ್ನೊಬ್ಬರು ಇದರ ಬಗ್ಗೆ ಕಮೆಂಟ್‌ ಮಾಡಿದ್ದು, “ಸೆಲೆಬ್ರಿಟಿಗಳು ಫೋಟೋಶಾಪ್‌ ಮಾಡುವುದು ಸಾಮಾನ್ಯ. ಹಾಗೆಯೇ ಆಲಿಯಾ ಕೂಡ ಫೋಟೋಶಾಪ್‌ ಮಾಡುತ್ತಾರೆ. ನನಗೆ ಅದರ ಬಗ್ಗೆ ಬೇಜಾರೇನಿಲ್ಲ. ಆದರೆ ಎಡಿಟ್‌ ಮಾಡಿರುವುದು ಎಂದು ಇಷ್ಟು ನೀಟಾಗಿ ಗೊತ್ತಾಗುವ ಹಾಗೆ ಮಾಡಿದ್ದಾರಲ್ಲಾ ಎನ್ನುವುದೇ ಬೇಜಾರು” ಎಂದು ಹೇಳಿದ್ದಾರೆ!

ಇದನ್ನೂ ಓದಿ: Alia Bhatt: ಗುಚಿ ಬ್ರ್ಯಾಂಡ್‌ ರಾಯಭಾರಿಯಾಗಿ ಆಲಿಯಾ ಭಟ್‌ ಮೊದಲ ಫೋಟೊಶೂಟ್‌
ಈ ಹಿಂದೆ ಅಲಿಯಾ ಅವರು ಇದೇ ಕಾರ್ಯಕ್ರಮದಲ್ಲಿ ಐಷಾರಾಮಿ ಬ್ಯಾಗ್‌ ಅನ್ನು ಖಾಲಿಯಾಗಿ ತೆಗೆದುಕೊಂಡು ಹೋಗಿದ್ದರ ಬಗ್ಗೆಯೂ ಸಾಕಷ್ಟು ಟ್ರೋಲ್‌ ಆಗಿತ್ತು.

ಅಲಿಯಾ ಗುಚಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕೆ ಪಾಪ್‌ ಗಾಯಕಿ ಐಯು ಅಕಾ ಲೀ ಜಿ-ಇಯುನ್‌ ಅವರ ಪಕ್ಕದಲ್ಲಿ ಕುಳಿತುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಹಲವಾರು ಸೆಲೆಬ್ರಿಟಿಗಳನ್ನೂ ಸಹ ಫೋಟೋದಲ್ಲಿ ನೋಡಬಹುದಾಗಿದೆ.

Exit mobile version