Site icon Vistara News

Alia Bhatt | ಹೆರಿಗೆ ನಂತರ ಮುದ್ದು ಮಗಳೊಂದಿಗೆ ಮನೆಗೆ ಆಗಮಿಸಿದ ಆಲಿಯಾ-ರಣಬೀರ್‌: ಫೋಟೊ ವೈರಲ್‌!

Alia Bhatt

ಬೆಂಗಳೂರು: ನವೆಂಬರ್‌ 6ರಂದು ಆಲಿಯಾ ಭಟ್‌ (Alia Bhatt) ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮನೆಗೆ ಮುದ್ದು ಮಗಳ ಆಗಮನವಾಗಿದೆ. ಹೆರಿಗೆ ನಂತರ ಮಗಳೊಂದಿಗೆ ಆಲಿಯಾ ದಂಪತಿ ಮನೆಗೆ ಬಂದಿದ್ದಾರೆ. ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʻಬ್ರಹ್ಮಾಸ್ತ್ರ’ ಜೋಡಿ ರಣಬೀರ್‌ ಮತ್ತು ಆಲಿಯಾ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಈ ವರ್ಷ ಹಸೆಮಣೆ ಏರಿದ್ದರು. ಹೆರಿಗೆಯ ಬಳಿಕ ಆಲಿಯಾ ಮನೆಗೆ ಆಗಮಿಸಿದ್ದಾರೆ. ರಣಬೀರ್‌ ಕಪೂರ್‌ ಮಗಳನ್ನು ಎತ್ತಿಕೊಂಡು ಕಾರಿನಿಂದ ಇಳಿಯುತ್ತಿರುವ ವಿಡಿಯೊ ವೈರಲ್‌ ಆಗಿದೆ. ಕ್ಯಾಮೆರಾ ಕಣ್ಣಿನಿಂದ ಮಗುವಿನ ಮುಖ ತೋರಿಸದೇ ರಣಬೀರ್ ಮರೆಮಾಚಿದ್ದಾರೆ.

ಇದನ್ನೂ ಓದಿ | Alia Bhatt | ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ಬಾಲಿವುಡ್‌ ನಟಿ ಆಲಿಯಾ ಭಟ್‌!

ಏಪ್ರಿಲ್ 14 ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ | Alia Bhatt | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಆಲಿಯಾ ಭಟ್‌

Exit mobile version