ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ಕ್ರಿಸ್ಮಸ್ ದಿನ ಮೊದಲ ಬಾರಿ ಮಗಳು ರಾಹಾ ಅವರ ಮುಖ ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ.
ಮಗಳೊಂದಿಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಪೋಸ್ ಕೊಟ್ಟಿರುವ ವಿಡಿಯೊವನ್ನು ಪಾಪರಾಜಿಗಳು (ಫೋಟೊಗ್ರಾಫರ್‌ಗಳು) ಪೋಸ್ಟ್ ಹಂಚಿಕೊಂಡಿದ್ದಾರೆ.
ಕುನಾಲ್ ಕಪೂರ್ ಅವರ ಮನೆಯಲ್ಲಿ ಕ್ರಿಸ್ಮಸ್ ಪಾರ್ಟಿಗೆ ಜೋಡಿ ಭಾಗಿಯಾಗಿದ್ದ ಸಮಯದಲ್ಲಿ ಮಗಳ ಮುಖವನ್ನು ರಿವೀಲ್ ಮಾಡಿದರು. ಇದೀಗ ಜೋಡಿಯ ಫ್ಯಾನ್ಸ್ ರಾಹಾ ಕಂಡು ಸಖತ್ ಕ್ಯೂಟ್ ಇದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Alia Bhatt: ಪತಿಗೆ ‘ಟಾಕ್ಸಿಕ್ʼ ಎಂದವರಿಗೆ ಖಡಕ್ ಪ್ರತಿಕ್ರಿಯೆ ಕೊಟ್ಟ ಆಲಿಯಾ ಭಟ್!
ರಾಹ ಎಂದರೆ ಅದರ ಮೂಲ ಅರ್ಥ ದೈವಿಕ ಮಾರ್ಗ ಎಂದು. ಸ್ವಾಹಿಲಿ ಭಾಷೆಯಲ್ಲಿ ಸಂತೋಷ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ಕುಲ ಎಂಬ ಅರ್ಥವಿದೆ. ಬಾಂಗ್ಲಾದಲ್ಲಿ ವಿಶ್ರಾಂತಿ, ಆರಾಮ ಹಾಗೂ ನಿರಾಳ ಎಂಬ ಅರ್ಥವಿದೆ. ಅರೇಬಿಕ್‌ನಲ್ಲಿ ಸಂತೋಷ, ಸ್ವಾತಂತ್ರ್ಯ ಹಾಗೂ ಆನಂದ ಎಂಬ ಅರ್ಥವಿದೆ ಎಂದು ಆಲಿಯಾ ಈ ಹಿಂದೆ ಹೇಳಿದ್ದರು.
ಈ ಪೋಸ್ಟ್‌ಗೂ ಮೊದಲು ಆಲಿಯಾ ಭಟ್ ಕುಟುಂಬದ ಜತೆ ಕ್ರಿಸ್‌ಮಸ್ ದಿನವನ್ನು ಆದ್ಧೂರಿಯಾಗಿ ಆಚರಿಸಿದ್ದರು. ತಂದೆ ಮಹೇಶ್ ಭಟ್, ತಾಯಿ ಸೋನಿ ರಾಜ್ದಾನ್, ರಣಬೀರ್ ಕಪೂರ್ ಜತೆಗೆ ಪಾರ್ಟಿ ಮಾಡಿರುವ ಫೋಟೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.