Site icon Vistara News

Alia Bhatt – Ranbir Kapoor : ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅಲಿಯಾ-ರಣಬೀರ್‌

#image_title

ಮುಂಬೈ: ಬಾಲಿವುಡ್‌ನ ತಾರಾ ಜೋಡಿಗಳಲ್ಲಿ ಒಂದು ರಣಬೀರ್‌ ಮತ್ತು ಅಲಿಯಾ ಭಟ್‌ (Alia Bhatt – Ranbir Kapoor) ಜೋಡಿ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಏಪ್ರಿಲ್‌ 14ರಂದು ವಿವಾಹ ಮಾಡಿಕೊಂಡಿದ್ದಾರೆ. ಇಂದು ಈ ಜೋಡಿಯ ಮದುವೆಯ ಮೊದಲನೇ ವಾರ್ಷಿಕೋತ್ಸವವಿದ್ದು, ಅದರ ಸಂಭ್ರಮದಲ್ಲಿ ಪೂರ್ತಿ ಕುಟುಂಬವಿದೆ.

ರಣಬೀರ್ ಅವರ ತಾಯಿ ನೀತು ಕಪೂರ್‌, ಅಲಿಯಾ ಅವರ ತಾಯಿ ಸೋನಿ ರಜ್ದಾನ್‌ ಸೇರಿದಂತೆ ಹಲವರು ಈ ಜೋಡಿಗೆ ಮದುವೆ ವಾರ್ಷಿಕೋತ್ಸವದ ಶುಭ ಹಾರೈಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸೋನಿ ರಜ್ದಾನ್‌ ಅವರು, “ಕಳೆದ ವರ್ಷ ಈ ದಿನದಂದು ನನ್ನ ಪ್ರೀತಿಯ ಇವರಿಬ್ಬರು ಎಲ್ಲ ರೀತಿಯ ಸಮಯದಲ್ಲಿಯೂ ಪರಸ್ಪರ ಜತೆಯಾಗಿ ನಿಲ್ಲುವುದಾಗಿ ಪ್ರಮಾಣ ಮಾಡಿಕೊಂಡರು. ನಿಮ್ಮಿಬ್ಬರಿಗೂ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮಬ್ಬರ ಬಾಳ ಪ್ರಯಾಣ ಸಂತೋಷದಿಂದ ಕೂಡಿರಲಿ” ಎಂದು ಬರೆದುಕೊಂಡಿದ್ದಾರೆ. ಅಲಿಯಾ ಅವರ ಮದುವೆ ಫೋಟೋಗಳನ್ನೂ ಸಹ ಅದರೊಂದಿಗೆ ಹಂಚಿಕೊಂಡಿದ್ದಾರೆ.


ಅದೇ ರೀತಿಯಲ್ಲಿ ರಣಬೀರ್‌ ಅವರ ತಾಯಿ ಕೂಡ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕುವ ಮೂಲಕ ಮಗ ಮತ್ತು ಸೊಸೆಗೆ ಶುಭ ಹಾರೈಸಿದ್ದಾರೆ. ಮಗನ ಮದುವೆ ಫೋಟೋವನ್ನು ಹಂಚಿಕೊಂಡಿರುವ ಅವರು, “ನನ್ನ ಹೃದಯಬಡಿತ ಮತ್ತು ನನ್ನ ಪ್ರೀತಿಯ ವ್ಯಕ್ತಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಪ್ರೀತಿ ಮತ್ತು ಆಶೀರ್ವಾದ” ಎಂದು ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋದಲ್ಲಿ ಮದುವೆಯ ಸಂದರ್ಭದಲ್ಲಿ ತಂದೆ ರಿಷಿ ಕಪೂರ್‌ ಅವರ ಫೋಟೋವನ್ನೂ ಇಟ್ಟಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: Alia Bhatt : ಮೆಟ್‌ ಗಾಲಾದ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಲಿದ್ದಾರೆ ನಟಿ ಅಲಿಯಾ!
ಏಪ್ರಿಲ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್‌ ಮತ್ತು ಅಲಿಯಾ ಜೋಡಿ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ತಂದೆ ತಾಯಿಯಾದರು. ಅವರು ಮಗಳಿಗೆ ರಾಹಾ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರನ್ನು ಮಗುವಿನ ಅಕ್ಕಿ ನೀತು ಕಪೂರ್‌ ಅವರೇ ಆಯ್ಕೆ ಮಾಡಿರುವುದು. ರಾಹಾ ಎಂದರೆ ದೈವಿಕ ಮಾರ್ಗ ಎಂದರ್ಥ. ಬಾಂಗ್ಲಾದಲ್ಲಿ ರಾಹಾ ಪದಕ್ಕೆ ವಿಶ್ರಾಂತಿ ಎಂದು ಅರೇಬಿಕ್‌ನಲ್ಲಿ ಶಾಂತಿ ಎಂದು ಅರ್ಥವಿದೆ. ಆ ಕಾರಣಕ್ಕೆ ಅದೇ ಹೆಸರನ್ನು ಇಟ್ಟಿದ್ದೇವೆ ಎಂದು ಈ ಹಿಂದೆ ಕುಟುಂಬ ಹೇಳಿಕೊಂಡಿತ್ತು.

Exit mobile version