ಬೆಂಗಳೂರು: ‘ಕಾಫಿ ವಿತ್ ಕರಣ್ 8’ ನ (Koffee With Karan-8 ) ಇತ್ತೀಚಿನ ಸಂಚಿಕೆಯಲ್ಲಿ, ಆಲಿಯಾ ಭಟ್ (Alia Bhatt) ಅವರು ಪತಿ ರಣಬೀರ್ ಕಪೂರ್ ಅವರನ್ನು ನೆಟ್ಟಿಗರು ‘‘ಟಾಕ್ಸಿಕ್’ (Toxic) ಎಂದು ಹಣೆಪಟ್ಟೆ ಕಟ್ಟಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೆಲವು ತಿಂಗಳ ಹಿಂದೆ, ಆಲಿಯಾ ಅವರು ರಣಬೀರ್ ಅವರಿಗೆ ʻʻನಾನು ಲಿಪ್‌ಸ್ಟಿಕ್ ಹಾಕಿಕೊಳ್ಳುವುದನ್ನ ಇಷ್ಟಪಡುವುದಿಲ್ಲ. ಹಾಕಿದಾಗಲೆಲ್ಲ ತೆಗೆದುಬಿಡು ಎನ್ನುತ್ತಾರೆ. ಏಕೆಂದರೆ ಅವರಿಗೆ ನಾನು ನ್ಯಾಚುರಲ್ ಆಗಿ ಕಾಣುವುದು ಇಷ್ಟʼʼ ಎಂದು ಹೇಳಿದರು. ಈ ಬಗ್ಗೆ, ರಣಬೀರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮಾತ್ರವಲ್ಲ ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಣಬೀರ್ ಕಪೂರ್ ಅವರನ್ನು ಟಾಕ್ಸಿಕ್ ಎಂದು ನೆಟ್ಟಿಗರು ಕರೆದಿದ್ದರು ಇದೀಗ ಈ ಬಗ್ಗೆ ಆಲಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಆಲಿಯಾ ಮಾತನಾಡಿ, “ನನ್ನ ಜೀವನದಲ್ಲಿ ಯಾವುದೇ ವಿಷಯದ ಬಗ್ಗೆ ಮಾತನಾಡುವಾಗಲೂ ನಾನು ತುಂಬಾ ಪ್ರಾಮಾಣಿಕವಾಗಿ ಮಾತನಾಡುತ್ತೇನೆ. ರಣಬೀರ್ ಅವರ ವ್ಯಕ್ತಿತ್ವ ಸಂಪೂರ್ಣವಾಗಿ ವಿರುದ್ಧವಾಗಿದೆ. ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಯ್ತು. ನನ್ನ ತಂಡ ಈ ಬಗ್ಗೆ ನನ್ನ ಬಳಿ ಹೇಳಿತು. ಆಗಲಿ ಬಿಡಿ ಎಂದೆ. ರಣಬೀರ್ ಬಗ್ಗೆ ಗಂಭೀರವಾದ ಲೇಖನ ಬರೆದು, ಅದರಲ್ಲೂ ಕೂಡ ಟಾಕ್ಸಿಕ್ ಎಂದು ವಿವರಿಸಲಾಗಿತ್ತು. ಜಗತ್ತಿನಲ್ಲಿ ಹೆಚ್ಚು ಗಮನ ಹರಿಸಲು ಅನೇಕ ವಿಷಯಗಳಿವೆʼʼಎಂದು ಪ್ರತಿಕ್ರಿಯಿಸಿದರು.
ಸಿನಿಮಾ ವಿಚಾರಕ್ಕೆ ಬಂದರೆ ರಣವೀರ್ ಸಿಂಗ್ ಜತೆಗಿನ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ನಂತರ, ಆಲಿಯಾ ಭಟ್ ‘ಜಿಗ್ರಾ’ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾಗಾಗಿ ಮೊದಲ ಬಾರಿಗೆ ನಿರ್ಮಾಪಕ ವಾಸನ್ ಬಾಲಾ ಅವರೊಂದಿಗೆ ಕೈಜೋಡಿಸಿದ್ದಾರೆ.
ಇದನ್ನೂ ಓದಿ: Alia Bhatt: ಯಶ್ ಬಳಿಕ ಆಲಿಯಾ ಭಟ್ ಕೂಡ ʻರಾಮಾಯಣʼ ಸಿನಿಮಾದಿಂದ ಹೊರಕ್ಕೆ!
#AliaBhatt for #KoffeeWithKaran pic.twitter.com/1yP8zFRFyy
— V (@Actresses4U) November 16, 2023
ರಣಬೀರ್ ಕಪೂರ್ ಪ್ರಸ್ತುತ ʻಅನಿಮಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಕಪೂರ್ ತಂದೆ ಬಲ್ಬೀರ್ ಸಿಂಗ್ ಪಾತ್ರವನ್ನು ಅನಿಲ್ ಕಪೂರ್ ನಿರ್ವಹಿಸಿದ್ದಾರೆ. ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ‘ಅನಿಮಲ್ ಸಿನಿಮಾ’ಗೆ ಬೆಂಬಲ ನೀಡಿವೆ. ರಣಬೀರ್ ಅವರ ಕಿಟ್ಟಿಯಲ್ಲಿ ‘ರಾಮಾಯಣ’ ಎಂಬ ಮಹಾಕಾವ್ಯ ನಾಟಕವೂ ಇದೆ.