ಬೆಂಗಳೂರು: ಜ್ಯೂನಿಯರ್ ಎನ್ಟಿಆರ್ ಮಕ್ಕಳಾದ ಅಭಯ್ ಮತ್ತು ಭಾರ್ಗವ ಅವರಿಗೆ ಆಲಿಯಾ ಭಟ್ (Alia Bhatt) ತಮ್ಮ ಬಟ್ಟೆ ಬ್ರ್ಯಾಂಡ್ನಿಂದ ಉಡುಗೊರೆಯನ್ನು ಕಳುಹಿಸಿದ್ದಾರೆ. ಜ್ಯೂನಿಯರ್ ಎನ್ಟಿಆರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಲಿಯಾ ಭಟ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಜ್ಯೂನಿಯರ್ ಎನ್ಟಿಆರ್ ಎರಡು ಚೀಲಗಳ ಫೋಟೊವನ್ನು ಹಂಚಿಕೊಂಡಿದ್ದು ಅದರಲ್ಲಿ ʻʻನೀವು ನನ್ನ ನೆಚ್ಚಿನ ಹ್ಯೂಮನ್ ಬೀನ್(Bean)ʼʼ ಎಂದು ಬರೆದುಕೊಂಡಿದೆ. ಜ್ಯೂನಿಯರ್ ಎನ್ಟಿಆರ್ ಸ್ಟೋರಿಯಲ್ಲಿ ʻʻಧನ್ಯವಾದಗಳು ಅಲಿಯಾ ಭಟ್. ಆಲಿಯಾ ಭಟ್ ಯಾವಾಗಲೂ ಅಭಯ್ ಮತ್ತು ಭಾರ್ಗವ ಮುಖದಲ್ಲಿ ನಗುವನ್ನು ತುಂಬುತ್ತಾರೆ. ಶೀಘ್ರದಲ್ಲೇ ನನ್ನ ಹೆಸರಿನ ಬ್ಯಾಗ್ ಅನ್ನು ನೋಡುವ ಭರವಸೆ ಇದೆʼʼಎಂದು ಬರೆದುಕೊಂಡಿದ್ದಾರೆ.
ಆಲಿಯಾ ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿ ʻʻನಾನು ನಿಮಗಾಗಿ ವಿಶೇಷವಾದ ವೇರ್ಗಳನ್ನು ಮಾತ್ರ ಕಳುಹಿಸಿದ್ದೇನೆ. ಧನ್ಯವಾದʼʼಎಂದು ಬರೆದುಕೊಂಡಿದ್ದಾರೆ. ಆಲಿಯಾ ಭಟ್ ತಮ್ಮ ಬಟ್ಟೆ ಬ್ರ್ಯಾಂಡ್ ಅನ್ನು 2020ರಲ್ಲಿ ಪ್ರಾರಂಭಿಸಿದರು.
ಇತ್ತೀಚೆಗಷ್ಟೆ ನಟ ಕೊರಟಾಲ ಶಿವ ಅವರೊಂದಿಗೆ ಎನ್ಟಿಆರ್ 30 ಸಿನಿಮಾವನ್ನು ಲಾಂಚ್ ಮಾಡಿದರು ಜ್ಯೂನಿಯರ್ ಎನ್ಟಿಆರ್. ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಮುಹೂರ್ತಕ್ಕೆ ಆಗಮಿಸಿದ್ದರು. ಹೈದರಾಬಾದ್, ಗೋವಾ ಮತ್ತು ವಿಶಾಖಪಟ್ಟಣಂನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Junior NTR: NTR 30 ಸೆಟ್ನಿಂದ ವೈರಲ್ ಆಯ್ತು ರಕ್ತದಿಂದ ತುಂಬಿದ ವಾಟರ್ ಟ್ಯಾಂಕರ್!
2024ರ ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.
ಅನಿರುದ್ಧ ಸಂಗೀತ ನಿರ್ದೇಶಕರಾಗಿದ್ದು, ರತ್ನವೇಲು ಛಾಯಾಗ್ರಹಣ ಮಾಡಲಿದ್ದಾರೆ. ನಂದಮೂರಿ ಕಲ್ಯಾಣರಾಮ್ ಪ್ರಸ್ತುತಪಡಿಸಿದ್ದು, ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ ಬ್ಯಾನರ್ನಡಿಯಲ್ಲಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿ ಕೃಷ್ಣ ಕೆ ನಿರ್ಮಿಸಿದ್ದಾರೆ. 300 ಕೋಟಿ ಬಜೆಟ್ನಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಆಲಿಯಾ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಆಲಿಯಾ ಜೊತೆಗೆ ರಣವೀರ್ ಸಿಂಗ್, ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ನಟಿಸಿದ್ದಾರೆ.