Site icon Vistara News

Alia Bhatt: 2023ರ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಹಿಳಾ ಪಟ್ಟಿಯಲ್ಲಿ ಏಕೈಕ ಭಾರತೀಯ ನಟಿ ಆಲಿಯಾ ಭಟ್

Variety's Impactful International Women of 2023

ಬೆಂಗಳೂರು: ಬಾಲಿವುಡ್‌ ನಟಿ ಆಲಿಯಾ ಭಟ್‌ಗೆ (Alia Bhatt) ಮತ್ತೊಂದು ಗರಿ ಸೇರಿದೆ. 2023ರ ಪ್ರಭಾವಶಾಲಿ ಅಂತಾರಾಷ್ಟ್ರೀಯ ಮಹಿಳಾ ಪಟ್ಟಿಯಲ್ಲಿ (Variety’s list of Impactful International Women of 2023 list.) ಆಲಿಯಾ ಹೆಸರು ಸೇರಿದೆ. ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ನಟಿಯಾಗಿ ಆಲಿಯಾ ಭಟ್ ಹೊರಹೊಮ್ಮಿದ್ದಾರೆ.

ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಾಥಿಯಾವಾಡಿಯಲ್ಲಿನ ಅಭಿನಯಕ್ಕಾಗಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಿಯತಕಾಲಿಕವು ರಿಸರ್ಚ್ ಕ್ರಿಯೇಟರ್‌, ನಿರ್ಮಾಪಕ, ಬರಹಗಾರ ಅಬ್ಬಿ ಅಜಯ್ ಜತೆ ಆಲಿಯಾ ಅವರನ್ನು ಪ್ರದರ್ಶನ ಉದ್ಯಮದಲ್ಲಿ ಅತ್ಯಂತ ಯಶಸ್ವಿ ಮಹಿಳೆ ಎಂದು ಹೆಸರಿಸಿದೆ .

ಇದನ್ನೂ ಓದಿ: Aliya Bhat: ಆಲಿಯಾ ಭಟ್‌ ಖಾಸಗಿ ಫೋಟೊ ವೈರಲ್‌: ಪೊಲೀಸರಿಗೆ ದೂರು ಸಲ್ಲಿಸಿದ ನಟಿ, ಬಿಟೌನ್‌ ಮಂದಿ ಫುಲ್‌ ಗರಂ!

ಆಲಿಯಾ ಕೊನೆಯದಾಗಿ ಪತಿ ರಣಬೀರ್ ಕಪೂರ್ ಜತೆ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಡಾರ್ಲಿಂಗ್ಸ್‌ನಲ್ಲಿ ಕಾಣಿಸಿಕೊಂಡರು. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಅವರು ರಣವೀರ್ ಸಿಂಗ್ ಎದುರು ಕಾಣಿಸಿಕೊಳ್ಳಲಿದ್ದಾರೆ.

Exit mobile version