Site icon Vistara News

Ranbir Kapoor: ಆಲಿಯಾ ತರ ನಾನೂ ಮಗಳಿಗೆ ಒಂದೊಳ್ಳೆ ಪತ್ರ ಬರೆಯುವೆ ಎಂದ ರಣಬೀರ್

Alia Bhatt Ranbir Kapoor

ಬೆಂಗಳೂರು: ಪತ್ನಿ ಆಲಿಯಾ ಭಟ್ ಮಗಳು ರಾಹಾಗೆ ಪ್ರತಿದಿನ ಇಮೇಲ್ ಬರೆಯುತ್ತಾರೆ ಎಂದು ರಣಬೀರ್ ಕಪೂರ್‌ (Ranbir Kapoor) ಬಹಿರಂಗಪಡಿಸಿದ್ದಾರೆ. ಜರ್ಮನ್ ಪೆನ್ ಬ್ರ್ಯಾಂಡ್ ಹೌಸರ್ ಜತೆಗಿನ ಹೊಸ ಸಂವಾದದಲ್ಲಿ, ರಣಬೀರ್ ಅವರು ಈ ಬಗ್ಗೆ ಹೇಳಿಕೆ ನೀಡಿದರು. ಮಗಳಿಗೆ ಪತ್ರ ಬರೆಯುತ್ತೀರಾ? ಎಂದು ಸಂವಾದದಲ್ಲಿ ಕೇಳಿದಾಗ, ರಣಬೀರ್, “ಆಲಿಯಾ ಪ್ರತಿದಿನ ರಾಹಾಗೆ ಇಮೇಲ್ ಬರೆಯುತ್ತಿದ್ದಾಳೆ. ನಾನು ಕೂಡ ಮಗಳಿಗೆಗೆಂದು ಒಂದೊಳ್ಳೆ ಪತ್ರ ಬರೆಯಲು ಪ್ರಾರಂಭಿಸುತ್ತೇನೆ. ನಾನು ಚಿಕ್ಕವನಿದ್ದಾಗ ಸಾಕಷ್ಟು ಪ್ರೇಮ ಪತ್ರಗಳನ್ನು ಬರೆದಿದ್ದೆʼʼ ಎಂದು ಅವರು ಬಹಿರಂಗಪಡಿಸಿದರು.

ರಣಬೀರ್ ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಂಡು ನಾನೊಬ್ಬ “ಗ್ರೇಟ್ ಕಾಪಿಯರ್” ಆಗಿದ್ದೆ ಎಂದರು. ʻʻನಾನು ಶಾಲಾ ದಿನಗಳಲ್ಲಿ ಕಾಪಿ ಮಾಡುತ್ತಿದ್ದೆ. ಆದರೆ ಸಿಕ್ಕಿ ಹಾಕಿಕೊಳ್ಳುತ್ತಿರಲಿಲ್ಲ. ಪ್ರಾಂಶುಪಾಲರ ಹತ್ತಿರ 8ನೇ ತರಗತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೆ. ಆಗ ಚೆನ್ನಾಗಿ ಪೆಟ್ಟು ಬಿದ್ದಿತ್ತು. ಆ ಪೆಟ್ಟಿನ ಸೌಂಡ್‌ ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ. ಆ ಕ್ಷಣ ನನಗೆ ಇನ್ನೂ ನೆನಪಿದೆʼʼಎಂದರು.

ಇದನ್ನೂ ಓದಿ: Ranbir Kapoor: ಮಹಾದೇವ್ ಬೆಟ್ಟಿಂಗ್ ಆ್ಯಪ್ ಕೇಸ್ ಸಂಬಂಧ ನಟ ರಣಬೀರ್ ಕಪೂರ್‌ಗೆ ಇಡಿ ಸಮನ್ಸ್

ಅನಿಮಲ್‌ ಸಿನಿಮಾ ಬಿಡುಗಡೆಗೆ ಸಜ್ಜು

ರಣಬೀರ್‌ ಅನಿಮಲ್‌ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ರಣಬೀರ್ ಕಪೂರ್ (Ranbir Kapoor) ಅಭಿನಯದ ʻಅನಿಮಲ್ʼ ಸಿನಿಮಾ ಹಾಗೂ ವಿಕ್ಕಿ ಕೌಶಲ್ (Vicky Kaushal) ಅವರ ʻಸ್ಯಾಮ್ ಬಹದ್ದೂರ್ʼ (Sam Bahadur) ಸಿನಿಮಾ ಒಂದೇ ದಿನ ರಿಲೀಸ್‌ ಆಗುತ್ತಿದ್ದು, ಎರಡೂ ಬಾಕ್ಸ್‌ ಆಫೀಸ್‌ನಲ್ಲಿ ಕ್ಲ್ಯಾಶ್‌ ಆಗಲಿವೆ.

ಡಿಸೆಂಬರ್‌ 1ರಂದು ಈ ಎರಡೂ ಸಿನಿಮಾಗಳು ವಿಶ್ವಾದ್ಯಂತ ತೆರೆ ಕಾಣುತ್ತಿವೆ. ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌ ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ. ತೆಲುಗಿನ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಡಿಸೆಂಬರ್‌ 1ರಂದು ತೆರೆಗೆ ಬರಲಿದೆ. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Exit mobile version