Site icon Vistara News

Alia Bhatt | ಮಗಳಿಗೆ ಮುದ್ದಾದ ಹೆಸರಿಟ್ಟ ಅಲಿಯಾ- ರಣಬೀರ್‌ ದಂಪತಿ; ಈ ಹೆಸರಿಗೆ ಹಲವು ಅರ್ಥಗಳಿವೆ

alia bhatt

ಮುಂಬಯಿ : ಬಾಲಿವುಡ್‌ ಸ್ಟಾರ್‌ ದಂಪತಿ ರಣಬೀರ್ ಕಪೂರ್‌- ಅಲಿಯಾ ಭಟ್‌ ದಂಪತಿ ತಮ್ಮ ಪುತ್ರಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಈ ಮಾಹಿತಿಯನ್ನು ಅಲಿಯಾ ಭಟ್‌ ಇನ್‌ಸ್ಟಾ ಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಗುವನ್ನು ಎತ್ತಿಕೊಂಡಿರುವ ಅಸ್ಪಷ್ಟ ಫೋಟೋವನ್ನು ಅವರು ಪೋಸ್ಟ್‌ ಮಾಡಿದ್ದು, ಫುಟ್ಬಾಲ್‌ ಜರ್ಸಿಯೊಂದರ ಮೇಲೆ ರಾಹಾ ಎಂಬುದಾಗಿ ಬರೆಯಲಾಗಿದೆ.

ಅಲಿಯಾ ಭಟ್‌ ನವೆಂಬರ್‌ ೬ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಲ್ಲಿಂದ ಮಗುವಿಗೆ ಏನು ಹೆಸರಿಡಬಹುದು ಎಂಬ ಕುತೂಹಲ ಮೂಡಿತ್ತು. ಇದೀಗ ಅಭಿಮಾನಿಗಳ ಕೌತುಕಕ್ಕೆ ತೆರೆ ಎಳೆದಿದ್ದಾರೆ ರಣಬೀರ್-ಅಲಿಯಾ ಜೋಡಿ.

ರಾಹ ಎಂಬ ಹೆಸರನ್ನು ಅವಳ ಅಜ್ಜಿ ಆಯ್ಕೆ ಮಾಡಿರುವುದು. ಇದಕ್ಕೆ ಹಲವಾರು ಸುಂದರ ಅರ್ಥಗಳಿವೆ. ರಾಹ ಎಂದರೆ ಅದರ ಮೂಲ ಅರ್ಥ ದೈವಿಕ ಮಾರ್ಗ ಎಂದು. ಸ್ವಾಹಿಲಿ ಭಾಷೆಯಲ್ಲಿ ಸಂತೋಷ ಎಂಬ ಅರ್ಥವಿದೆ. ಸಂಸ್ಕೃತದಲ್ಲಿ ಕುಲ ಎಂಬ ಅರ್ಥವಿದೆ. ಬಾಂಗ್ಲಾದಲ್ಲಿ ವಿಶ್ರಾಂತಿ, ಆರಾಮ ಹಾಗೂ ನಿರಾಳ ಎಂಬ ಅರ್ಥವಿದೆ. ಅರೇಬಿಕ್‌ನಲ್ಲಿ ಸಂತೋಷ, ಸ್ವಾತಂತ್ರ್ಯ ಹಾಗೂ ಆನಂದ ಎಂಬ ಅರ್ಥವಿದೆ. ಇವೆಲ್ಲವೂ ನಮ್ಮ ಪುತ್ರಿಗೆ ಅನ್ವರ್ಥ. ನಾವು ಅವಳನ್ನು ಹೊಂದಿದ ಮೊದಲ ದಿನದಿಂದಲೂ ಈ ಮೇಲಿನ ಎಲ್ಲವನ್ನೂ ಅನುಭವಿಸಿದ್ದೇವೆ. ನಮ್ಮ ಕುಟುಂಬಕ್ಕೆ ಬಂದಿರುವುದಕ್ಕೆ ಧನ್ಯವಾದಗಳು ರಾಹ, ನಿನ್ನಿಂದಾಗಿ ನಮ್ಮ ಜೀವನ ಈಗಷ್ಟೇ ಶುರುವಾಗಿದೆ ಎಂದು ಅಂದುಕೊಳ್ಳುತ್ತೇನೆ,” ಎಂದು ಅಲಿಯಾ ಭಟ್‌ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಹಾl ಅಜ್ಜಿ ನೀತು ಕಪೂರ್ ಹೆಸರನ್ನು ಆಯ್ಕೆ ಮಾಡಿದ್ದು, ರಣಬೀರ್‌ ಕಪೂರ್‌ ದೊಡ್ಡ ಫುಟ್ಬಾಲ್ ಅಭಿಮಾನಿಯಾಗಿರುವುದರಿಂದ ರಾಹಾ ಈಗಾಗಲೇ ಫುಟ್ಬಾಲ್ ಜೆರ್ಸಿಯನ್ನೂ ಹೊಂದಿದ್ದಾಳೆ. ಕಪೂರ್ ಕುಟುಂಬದಲ್ಲಿ ಇಂಗ್ಲಿಷ್‌ನ ‘ಆರ್‌’ ನಿಂದ ಪ್ರಾರಂಭವಾಗುವ ಹೆಸರುಗಳ ಪರಂಪರೆಯಿದೆ. ರಾಜ್ ಕಪೂರ್, ರಣಧೀರ್ ಕಪೂರ್, ರಿಷಿ ಕಪೂರ್, ರಣಬೀರ್ ಕಪೂರ್ ಮತ್ತು ಅವರ ಸಹೋದರಿ ರಿದ್ಧಿಮಾ ಕಪೂರ್ ಸಹಾನಿ.

ಇದನ್ನೂ ಓದಿ | Alia Bhatt | ಅಲಿಯಾ ಭಟ್‌ ಬೇಬಿ ಬಂಪ್‌ ಹೊಸ ಫೋಟೋಗಳು ವೈರಲ್‌!

Exit mobile version