ಬೆಂಗಳೂರು: ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರು ನಟ ಯಶ್ ಅವರ ಕುರಿತು ಇತ್ತೀಚಿಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ಯಶ್ (Actor Yash) ಫ್ಯಾನ್ಸ್ ಕೆರಳಿಸುವಂತೆ ಮಾಡಿದೆ. ʻಕೋಟಬೊಮ್ಮಲಿ ಪಿಎಸ್ʼ(Kotabommali PS) ಟೀಸರ್ ಬಿಡುಗಡೆ ಸಮಾರಂಭದಲ್ಲಿ ಅಲ್ಲು ಅರವಿಂದ್ ಅವರು ಸಿನಿಮಾ ಬಜೆಟ್‌ನಲ್ಲಿ ನಟರ ಸಂಭಾವನೆಯ ಪ್ರಭಾವದ ಬಗ್ಗೆ ಮಾತನಾಡಿದರು. ಸಿನಿಮಾ ಹಿಟ್ ಆದ ನಂತರ ನಟರು ತಮ್ಮ ಸಂಭಾವನೆಯನ್ನು ಹೆಚ್ಚಿಸುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಯಶ್ ಅವರ ಉದಾಹರಣೆಯನ್ನು ನೀಡಿದರು. ಇದು ಭಾರಿ ಚರ್ಚೆಗೆ ಗುರಿಯಾಗಿದೆ.
ಅಲ್ಲು ಅರವಿಂದ್ ಹೇಳಿದ್ದೇನು?
ತಮ್ಮ ನಿರ್ಮಾಣ ಸಂಸ್ಥೆಯಾದ ಗೀತಾ ಆರ್ಟ್ಸ್ ಪ್ರಸ್ತುತ ಬಜೆಟ್‌ನಿಂದಾಗಿ ಸಣ್ಣ ಚಿತ್ರಗಳತ್ತ ಗಮನ ಹರಿಸುತ್ತಿದೆ ಎಂದು ಅಲ್ಲು ಅರವಿಂದ್ ಈವೆಂಟ್‌ನಲ್ಲಿ ಹೇಳಿದರು. ಸಿನಿಮಾ ಹಿಟ್ ಆದ ನಂತರ ಸೆಲೆಬ್ರಿಟಿಗಳು ಸಂಭಾವನೆಯನ್ನು ಹೆಚ್ಚಿಸುತ್ತಾರೆಯೇ? ಎಂದು ಪ್ರಶ್ನೆ ಕೇಳಲಾಯಿತು.
ಈ ಬಗ್ಗೆ ಮಾತನಾಡಿದ ಅರವಿಂದ್ ‘ಸಿನಿಮಾದ ನಾಯಕ ನಟನಿಗೆ ಸಿನಿಮಾದ ಬಜೆಟ್‌ನಲ್ಲಿ ಶೇ.20ರಿಂದ 25ರಷ್ಟು ಮಾತ್ರ ಸಂಭಾವನೆ ಸಿಗುತ್ತದೆ. ಹೀಗಾಗಿ ಸಿನಿಮಾದ ಬಜೆಟ್ ಹೆಚ್ಚಾಗುವುದು ಸುಳ್ಳಲ್ಲ. ಕೇವಲ ಅವರ ಸಂಭಾವನೆಯಿಂದಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತದೆʼʼಎಂದರು. ಈ ವೇಳೆ ಕೆಜಿಎಫ್ ಯಶಸ್ಸಿಗೆ ಹೆಸರುವಾಸಿಯಾದ ಯಶ್ ಅವರ ಉದಾಹರಣೆಯನ್ನು ಉಲ್ಲೇಖಿಸಿ, ʻʻಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನ ಯಶ್ ಯಾರು? ಆ ಸಿನಿಮಾ ಯಾಕೆ ಸದ್ದು ಮಾಡಿತು? ಆ ಶ್ರೀಮಂತಿಕೆಯೇ ಸಿನಿಮಾದ ಯಶಸ್ಸಿಗೆ ಕಾರಣವಾಯಿತು. ಇದು ಕೇವಲ ಒಂದು ಉದಾಹರಣೆ. ಸಿನಿಮಾದ ಹೀರೋ ಯಾರೇ ಆಗಿರಲಿ, ಮೇಕಿಂಗ್‌ನಿಂದಾಗಿ ಅದು ಪ್ರೇಕ್ಷಕರನ್ನು ಸೆಳೆಯುತ್ತದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: Actor Yash: ಡ್ರಾಮಾ ಬಿಡಪ್ಪ ಎಂದು ಯಶ್ ಕುರಿತು ಉಡಾಫೆ ಮಾತಾಡಿದ ರವಿತೇಜಗೆ ಫ್ಯಾನ್ಸ್ ಕ್ಲಾಸ್!
'Who is Yash before KGF'
— 𝑲𝑩𝑶 | 𝑲𝒂𝒓𝒏𝒂𝒕𝒂𝒌𝒂 𝑩𝒐𝒙 𝑶𝒇𝒇𝒊𝒄𝒆 (@Karnatakaa_BO) November 7, 2023
'A small actor nobody knew'
'His previous film collection 9cr'
'His next film which started after KGF1 wrap – low budget rural comedy Kirataka2 which he shelved'
Producer #AlluAravind Honest, Bold Comments on KGF @TheNameIsYashpic.twitter.com/S72NPO5b3T
ಯಶ್ ಮತ್ತು ಅವರ ಚಿತ್ರಗಳ ಬಗ್ಗೆ ಅಲ್ಲು ಅರವಿಂದ್ ಅವರ ಕಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ವರ್ಗದ ಜನರಿಗೆ ಸರಿಯಾಗಿ ಹೋಗಲಿಲ್ಲ. ಈ ಬಗ್ಗೆ ಯಶ್ ಫ್ಯಾನ್ಸ್ ಕೂಡ ಕೆಂಡಾಮಂಡಲವಾದರು. ಅದರಲ್ಲಿ ಒಬ್ಬರು ʻʻಕೆಜಿಎಫ್ ವಿಶೇಷವಾದದ್ದು ಯಶ್ ಅವರಿಂದ ಮಾತ್ರ. ಅವರಿಲ್ಲದಿದ್ದರೆ ಇದು ಊಹಿಸಲೂ ಸಾಧ್ಯವಿಲ್ಲ. ಯಶ್ ಅವರ ಕೊಡುಗೆ ಇದುʼʼಎಂದು ಕಮೆಂಟ್ ಮಾಡಿದ್ದಾರೆ. “ಅಲ್ಲು ಅರ್ಜುನ್ ಕೂಡ ಸಣ್ಣ ಹೀರೊ ಆಗಿದ್ದರು, ಅಲವೈಕುಂಠಪುರಂ ಲೋ ಸಿನಿಮಾ ಬರುವ ತನಕ ವಿಜಯ್ ದೇವರಕೊಂಡ ಅವರೊಂದಿಗೆ ಸ್ಪರ್ಧಿಸುತ್ತಿದ್ದರುʼʼಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೂಡ, “ಕೆಜಿಎಫ್‌ಗಿಂತ ಮೊದಲು ಯಶ್ ಯಾರೆಂದು ತಿಳಿದಿಲ್ಲ ಎಂದು ಜನರು ಹೇಳುವುದರಲ್ಲಿ ತಪ್ಪೇನಿಲ್ಲ” ಎಂದು ಹೇಳಿದರು.