Site icon Vistara News

Allu Arjun | ಸ್ನೇಹಿತರೊಂದಿಗೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ಅಲ್ಲು ಅರ್ಜುನ್‌-ಸ್ನೇಹಾ ದಂಪತಿ

Allu Arjun

ಬೆಂಗಳೂರು : ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್ (Allu Arjun) ಮತ್ತು ಅವರ ಪತ್ನಿ ಸ್ನೇಹಾ ರೆಡ್ಡಿ ದಕ್ಷಿಣದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಕಪಲ್‌. ಅನೇಕ ಅಭಿಮಾನಿಗಳಿಗೆ ಇವರು ರೋಲ್‌ ಮಾಡೆಲ್‌ ಕೂಡ ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲು-ಸ್ನೇಹಾ ಆಗಾಗ ಓಡಾಟ, ಪ್ರವಾಸ, ಪಾರ್ಟಿ, ಮಕ್ಕಳ ಜತೆ, ಕುಟುಂಬದವರ ಜತೆಗಿನ ಒಡನಾಟ ಹೀಗೆ ಅನೇಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹೊಸ ವರ್ಷವನ್ನು ಆಚರಿಸಲು ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ತಮ್ಮ ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಪುಷ್ಪ-2 ಚಿತ್ರೀಕರಣದಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ನಟ ಅಲ್ಲು ಅರ್ಜುನ್‌ ಸ್ನೇಹಿತರೊಂದಿಗೆ ಮಧುರ ಕ್ಷಣವನ್ನು ಅನುಭವಿಸಿದ್ದಾರೆ. ಅಲ್ಲು ಅರ್ಜುನ್ ಮತ್ತು ಸ್ನೇಹಾ ಆಗಾಗ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಪ್ರವಾಸಕ್ಕೆ ಹೋಗುತ್ತಾರೆ. ಇತ್ತೀಚೆಗೆ, ಅವರು ತಮ್ಮ ಮಗ ಅಯಾನ್ ಮತ್ತು ಮಗಳು ಅರ್ಹಾ ಮತ್ತು ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ಹೋಗಿದ್ದರು.

ಇದನ್ನೂ ಓದಿ | Allu Arjun | ಪುಷ್ಪ-2 ಸಿನಿಮಾಗೆ ನಟ ರಾಮ್‌ಚರಣ್‌ ಎಂಟ್ರಿ?

ಪುಷ್ಪ: ದಿ ರೂಲ್ (Pushpa 2: The Rule)
ಪುಷ್ಪ: ದಿ ರೂಲ್ (Pushpa 2: The Rule) ಎಂಬ ಉಪ ಶೀರ್ಷಿಕೆಯಡಿ, ಪುಷ್ಟ-೨ ಸೆಟ್ಟೇರಿದೆ. ಸಿನಿ ರಸಿಕರಲ್ಲಿ ಎರಡನೇ ಪಾರ್ಟ್‌ ಹೇಗಿರಲಿದೆ ಎಂಬ ಕೂತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್‌ ಶೂಟಿಂಗ್‌ ಆರಂಭಿಸುತ್ತಿದ್ದಾರೆ ಎನ್ನಲಾಗುತ್ತಿದೆ. 2021ರಲ್ಲಿ ಚಿತ್ರ ಬಿಡುಗಡೆಗೊಂಡು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪಾರ್ಟ್‌ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್‌ ಫಾಸಿಲ್‌ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.

ಪುಷ್ಪ-2 ನಂತರ ಅಲ್ಲು ಅರ್ಜುನ್‌ ವೇಣು ಶ್ರೀರಾಮ್ ಅವರೊಂದಿಗೆ ಮತ್ತು ಕೊರಟಾಲ ಶಿವ ಅವರೊಂದಿಗೆ ಪ್ರಾಜೆಕ್ಟ್‌ ಹೊಂದಿದ್ದಾರೆ. ಈ ನಡುವೆ ಬೋಯಪತಿ ಶ್ರೀನು, ಎಆರ್ ಮುರುಗದಾಸ್ ಹಾಗೂ ಇತರ ನಿರ್ದೇಶಕರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ | Allu Arjun | ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ʻಪುಷ್ಪ: ದಿ ರೈಸ್‌ʼ ರಷ್ಯನ್ ಟ್ರೈಲರ್‌ ಔಟ್‌: ಫಿದಾ ಆದ್ರು ಫ್ಯಾನ್ಸ್‌!

Exit mobile version