ಬೆಂಗಳೂರೂ: ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ʻಸ್ಟೈಲಿಶ್ ಸ್ಟಾರ್,ʼ ಎಂತಲೇ ಖ್ಯಾತಿ ಪಡೆದಿದ್ದಾರೆ. ಇದೀಗ ಪುಷ್ಪಾ ಸ್ಟಾರ್ ಅಲ್ಲು, ಮುಂಬೈ ವಿಮಾನ ನಿಲ್ದಾಣದಲ್ಲಿ ತನ್ನ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಪ್ರಿಂಟೆಡ್ ಡ್ರೆಸ್‌ನಲ್ಲಿ ಬಿಳಿ ಪ್ಯಾಂಟ್‌ನೊಂದಿಗೆ ಸರಖ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಅವರು ನಟನೆ ಮಾತ್ರವಲ್ಲದೇ ಫ್ಯಾಷನ್ ಜಗತ್ತಿನಲ್ಲಿಯೂ ಯಾವಾಗಲೂ ಮುಂದು. ಇದೀಗ ಅವರ ಹೇರ್‌ಸ್ಟೈಲ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ನಟ ಪುಷ್ಟ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕ ಭೂಷಣ್ ಕುಮಾರ್ (Bhushan Kumar), ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಮತ್ತು ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹೊಸ ಯೋಜನೆಗೆ ಕೈ ಹಾಕಿದ್ದಾರೆ.
ಈ ಅಸೋಸಿಯೇಶನ್ ಅಡಿಯಲ್ಲಿ ಚಲನಚಿತ್ರವನ್ನು ಟಿ-ಸಿರೀಸ್ ಫಿಲ್ಮ್ಸ್ ಪ್ರೊಡಕ್ಷನ್ ಮತ್ತು ಭದ್ರಕಾಳಿ ಪಿಕ್ಚರ್ಸ್ ನಿರ್ಮಿಸಲಿದೆ. ನಿರ್ಮಾಪಕ ಭೂಷಣ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜತೆ ಸಹ-ನಿರ್ಮಾಪಕ ಶಿವ ಚಾನಾನ ಮತ್ತು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ ಸಹಯೋಗವನ್ನು ಭೇಟಿಯಾಗುವುದರ ಮೂಲಕ ಅಧಿಕೃತಗೊಳಿಸಿದ್ದಾರೆ.
ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್ ಜನುಮದಿನದಂದೇ ಪುಷ್ಪ 2 ಸಿನಿಮಾದ ಟೀಸರ್ ರಿಲೀಸ್?
ಮುಂಬೈ ಏರ್‌ಪೋರ್ಟ್‌ನಲ್ಲಿ ಅಲ್ಲು
ಟಿ-ಸೀರೀಸ್, ಅಡಿಯಲ್ಲಿ ಭೂಷಣ್ ಕುಮಾರ್ ಈಗಾಗಲೇ ಪ್ರಭಾಸ್ ಅವರೊಂದಿಗೆ ‘ಸಾಹೋ’, ‘ರಾಧೆ ಶ್ಯಾಮ್’ ಮತ್ತು ‘ಆದಿಪುರುಷ’ ಸಿನಿಮಾ ಮಾಡಿದ್ದಾರೆ. ‘ಆದಿಪುರುಷ’ ಸದ್ಯ ಬಿಡುಗಡೆಯ ಹಂತದಲ್ಲಿದೆ. 3 ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ನಿರ್ಮಿಸಿರುವ ಭೂಷಣ್ ಕುಮಾರ್ ಅವರು ತಮ್ಮ ನಾಲ್ಕನೇ ಚಿತ್ರವಾಗಿ ‘ಸ್ಪಿರಿಟ್’ ಅನ್ನು ನಿರ್ಮಿಸಲಿದ್ದಾರೆ. ಆದರೆ ಈ ಬಾರಿ ಅಲ್ಲು ಅರ್ಜುನ್ ಜತೆ ಕೈ ಜೋಡಿಸಿದ್ದಾರೆ.