Site icon Vistara News

Allu Arjun: ನಟಿ ಭಾನುಶ್ರೀ ಮೆಹ್ರಾರನ್ನು ಬ್ಲಾಕ್‌ ಮಾಡಿದ ಅಲ್ಲು ಅರ್ಜುನ್‌; ಸ್ಪಷ್ಟನೆ ನೀಡಿದ ನಟಿ

Allu Arjun blocks Varudu co-star Bhanushree Mehra

ಬೆಂಗಳೂರು: 2010ರಲ್ಲಿ ತೆರೆಗೆ ಬಂದ `ವರುಡು’ ಚಿತ್ರದಲ್ಲಿ ಭಾನುಶ್ರೀ ಮೆಹ್ರಾ (Bhanushree Mehra) ಅವರು ಅಲ್ಲು ಅರ್ಜುನ್ (Allu Arjun) ಜತೆಗೆ ಕಾಣಿಸಿಕೊಂಡಿದ್ದರು. ಇದಾದ ನಂತರ ಭಾನುಶ್ರೀ ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆದರೆ ಅಷ್ಟಾಗಿ ಸಿನಿಮಾದಲ್ಲಿ ಯಶಸ್ಸು ಪಡೆದುಕೊಂಡಿಲ್ಲ. ಭಾನುಶ್ರೀ ಕನ್ನಡದಲ್ಲಿ ಕೋಮಲಕುಮಾರ್ ಅಭಿನಯದ `ಡೀಲ್ ರಾಜ’ ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ನಟಿ, ಅಲ್ಲು ಅರ್ಜುನ್‌ ವಿಚಾರವಾಗಿ ಸಖತ್‌ ಸುದ್ದಿಯಲ್ಲಿದ್ದಾರೆ. ಅಲ್ಲು ಅರ್ಜುನ್‌ ತಮ್ಮನ್ನು ಬ್ಲಾಕ್‌ ಮಾಡಿದ್ದಾರೆ ಎಂದು ನಟಿ ಬಹಿರಂಗಪಡಿಸಿದ್ದಾರೆ.

ಭಾನುಶ್ರೀ ನಂತರ ತೆಲುಗಿನಲ್ಲೇ ‘ಡಿಂಗ್ ಡಾಂಗ್ ಬೆಲ್’, ‘ಅಲಾ ಎಲಾ’ ರಾಮ್ ಚರಣ್ ಸಿನಿಮಾ ‘ಗೋವಿಂದುಡು ಅಂದರಿವಾಡೆಲೆ’, ‘ರನ್’ ಮತ್ತು ‘ಮಿಸ್ ಇಂಡಿಯಾ’ದಲ್ಲಿ ಕೀರ್ತಿ ಸುರೇಶ್ ಜತೆ ಚಿಕ್ಕ ಪಾತ್ರದಲ್ಲಿ ನಟಿಸಿದರು.

ನಟಿಯನ್ನು ಬ್ಲಾಕ್‌ ಮಾಡಿದ ಅಲ್ಲು ಅರ್ಜುನ್‌

ಮಾರ್ಚ್ 18ರಂದು ಭಾನುಶ್ರೀ ಟ್ವಿಟ್ಟರ್‌ನಲ್ಲಿ ಅಲ್ಲು ಅರ್ಜುನ್ ತನ್ನನ್ನು ಬ್ಲಾಕ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಟಿ ಟ್ವೀಟ್‌ ಸ್ಕ್ರೀನ್‌ಶಾಟ್‌ ಹಂಚಿಕೊಂಡು ʻʻನೀವು ಯಾವಾಗಲಾದರೂ ಹಳಿಯಲ್ಲಿ ಸಿಕ್ಕಿಕೊಂಡಿದ್ದೀರಿ ಎಂದು ಭಾಸವಾಗಿದೆಯೆ? ಆದರೆ ಆ ಅನುಭವ ನನಗಾಗಿದೆ. ನಾನು ಅಲ್ಲು ಅರ್ಜುನ್ ಜತೆ ವರುಡು ಚಿತ್ರದಲ್ಲಿ ನಟಿಸಿದ್ದೇನೆ. ಆದರೂ ಇನ್ನೂ ಯಾವುದೇ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ನೆನಪಿಡಿ. ಕೆಲಸ ಸಿಗುತ್ತಿಲ್ಲ ಎಂದು ನೆನಪು ಮಾಡಿಕೊಂಡಿದ್ದೇನೆ. ಆದರೆ, ನನ್ನ ಕಷ್ಟಗಳಿಂದಲೇ ಖುಷಿಯನ್ನು ಕಂಡುಕೊಳ್ಳಲು ಕಲಿತಿದ್ದೇನೆ. ಅದರಲ್ಲೂ ಅಲ್ಲು ಅರ್ಜುನ್ ಟ್ವಿಟರ್‌ನಲ್ಲಿ (Twitter) ನನ್ನನ್ನು ಬ್ಲಾಕ್ ಮಾಡಿದ್ದ ಮೇಲೆ ಕಲಿತುಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Actor Allu Arjun : ಪುಷ್ಪಾ 2 ಸಿನಿಮಾಗೆ ಅಲ್ಲು ಅರ್ಜುನ್‌ ಕೇಳಿದ್ದು 100 ಕೋಟಿ ರೂ.ಗೆ ಹೆಚ್ಚು!

ಭಾನುಶ್ರೀ ಈ ಟ್ವೀಟ್‌ ನಂತರದಲ್ಲಿ ಮತ್ತೊಂದು ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ, ತನ್ನ ವೃತ್ತಿಜೀವನದ ಹಿನ್ನಡೆಗೆ ಅಲ್ಲು ಅರ್ಜುನ್‌ ಕಾರಣರಲ್ಲ ಎಂತಲೂ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದು ಟ್ವೀಟ್‌

ನಟಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ: “ಒಳ್ಳೆಯ ಸುದ್ದಿ, ಅಲ್ಲು ಅರ್ಜುನ್ ನನ್ನನ್ನು ಅನ್‌ಬ್ಲಾಕ್ ಮಾಡಿದ್ದಾರೆ! ನನ್ನ ವೃತ್ತಿಜೀವನದ ಹಿನ್ನಡೆಗೆ ನಾನು ಅವರನ್ನು ಎಂದಿಗೂ ದೂಷಿಸಲಿಲ್ಲ. ಬದಲಿಗೆ, ಮುಂದುವರಿಯಲು ನಾನು ಕಲಿತಿದ್ದೇನೆ. ಧನ್ಯವಾದಗಳು, ಅಲ್ಲು ಅರ್ಜುನ್ʼʼಎಂದು ಬರೆದುಕೊಂಡಿದ್ದಾರೆ.

ಅಲ್ಲು ಅರ್ಜುನ್ ಕೊನೆಯದಾಗಿ ಪುಷ್ಪಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ 2021ರಲ್ಲಿ ತೆರೆಗೆ ಬಂದು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು. ಅವರು ಪ್ರಸ್ತುತ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಸಂದೀಪ್‌ ವಾಂಗಾ ಅವರ ಜತೆಯೂ ಕೈ ಜೋಡಿಸಲಿದ್ದಾರೆ.

Exit mobile version