Site icon Vistara News

Allu Arjun | ಅಲ್ಲು ಅರ್ಜುನ್‌ ಫ್ಯಾಮಿಲಿ ಶುರು ಮಾಡಿದೆ ಸ್ಟುಡಿಯೊ: ಪುಷ್ಪ 2 ಶೂಟಿಂಗ್‌ ತಡವಾಗಿದ್ದೇಕೆ?

Allu Arjun

ಬೆಂಗಳೂರು : ಟಾಲಿವುಡ್‌ ನಟ, ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಅಭಿನಯದ ಪುಷ್ಪ: ದಿ ರೂಲ್ (Pushpa 2: The Rule) ಎಂಬ ಉಪ ಶೀರ್ಷಿಕೆಯಡಿ, ಪುಷ್ಟ-೨ ಸೆಟ್ಟೇರಲು ಸಜ್ಜಾಗಿದೆ. ಆಗಸ್ಟ್ 22ರಂದು ಪುಷ್ಟ-೨ ಸಿನಿಮಾ ಮುಹೂರ್ತವನ್ನು ಚಿತ್ರತಂಡ ನೆರವೇರಿಸಿದೆ. ಆದರೆ ಇಷ್ಟು ದಿನವಾದರೂ ಚಿತ್ರತಂಡ ಶೂಟಿಂಗ್‌ ಶುರು ಮಾಡಿಲ್ಲ. ಇದಕ್ಕೆ ಕಾರಣ ʻಅಲ್ಲು ಸ್ಟುಡಿಯೋಸ್‌ʼ ಎಂಬ ಮಾತುಗಳು ಕೇಳಿ ಬಂದಿವೆ.

ಅಲ್ಲು ಅರ್ಜುನ್‌ ಫ್ಯಾಮಿಲಿ ಹೈದರಾಬಾದ್‌ನಲ್ಲಿ ಅಲ್ಲು ಸ್ಟುಡಿಯೋಸ್‌ ನಿರ್ಮಾಣ ಮಾಡಿದೆ. ‘ಪುಷ್ಪ’ -2 ಸಿನಿಮಾ ಶೂಟಿಂಗ್ ಮಾಡುವ ಮೂಲಕ ಶುಭಾರಂಭ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಪೂಜೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೆಗಾಸ್ಟಾರ್‌ ಚಿರಂಜೀವಿ ಬರಲಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್‌ ತಾತನ ಹೆಸರಿನಲ್ಲಿ ಸ್ಟುಡಿಯೊ!
ಅಲ್ಲು ಅರ್ಜುನ್‌ ತಾತ ಖ್ಯಾತ ನಟ ರಾಮಲಿಂಗಯ್ಯ ಅವರ ಹೆಸರಿನಲ್ಲಿ ಈ ಸ್ಟುಡಿಯೊ ನಿರ್ಮಾಣವಾಗಿದೆ. ಅಕ್ಟೋಬರ್‌ 1ರಂದು ರಾಮಲಿಂಗಯ್ಯ ಅವರ ಜನುಮದಿನವಾಗಿದ್ದು ಅದೇ ದಿನ ಸ್ಟುಡಿಯೊ ಚಾಲನೆ ಸಿಗಲಿದೆ. ಇತ್ತ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ಸಂಬಂಧಿಕರು. ಅರ್ಜುನ್‌ ತಂದೆ ಅಲ್ಲು ಅರವಿಂದ್‌ ಸಹೋದರಿಯನ್ನು ಚಿರಂಜೀವಿ ಮದುವೆ ಆಗಿದ್ದಾರೆ.

ಹೇಗಿದೆ ಸ್ಟುಡಿಯೊ ?
ಸಿನಿಮಾ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳು ಒಂದೇ ಸೂರಿನಡಿ ಸಿಗುವಂತೆ ಈ 10 ಎಕರೆ ಜಾಗದಲ್ಲಿ ಸ್ಟುಡಿಯೊ ನಿರ್ಮಾಣ ಮಾಡಿದೆ. ಹೈದರಾಬಾದ್‌ನಲ್ಲಿ ರಾಮೋಜಿ ಫಿಲ್ಮ್‌ ಸಿಟಿ ಜತೆಗೆ ʻಅಕ್ಕಿನೇನಿ ಫ್ಯಾಮಿಲಿʼಯ ಅನ್ನಪೂರ್ಣ ಸ್ಟುಡಿಯೊ, ʻದಗ್ಗುಬಾಟಿ ಫ್ಯಾಮಿಲಿʼಯ ರಾಮನಾಯುಡು ಸ್ಟುಡಿಯೋ, ʻನಂದಮೂರಿ ಫ್ಯಾಮಿಲಿʼಯ ರಾಮಕೃಷ್ಣಾ ಸ್ಟುಡಿಯೊಗಳಲ್ಲಿ ಕೆಲಸಗಳು ನಡೆಯುತ್ತಿದೆ. ಇದೇ ಸಾಲಿಗೆ ಅಲ್ಲು ಸ್ಟುಡಿಯೊ ಕೂಡ ಸೇರುತ್ತಿರುವುದು ವಿಶೇಷ.

ಇದಅನ್ನೂ ಓದಿ | Allu Arjun | ನ್ಯೂಯಾರ್ಕ್‌ನ ಇಂಡಿಯಾ ಡೇ ಪರೇಡ್‌ನಲ್ಲಿ ಭಾರತ ಪ್ರತಿನಿಧಿಸಿದ ಐಕಾನ್‌ಸ್ಟಾರ್‌: ಪೋಟೊ ವೈರಲ್‌!

ಪುಷ್ಪ: ದಿ ರೂಲ್ (Pushpa 2: The Rule)
ಪುಷ್ಪ: ದಿ ರೈಸ್ ಸಕ್ಸೆಸ್‌ ನಂತರ ಮತ್ತೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಒಂದಾಗುತ್ತಿದ್ದಾರೆ. ಈ ಕುರಿತು ಮೈತ್ರಿ ಮೂವಿ ಮೇಕರ್ಸ್‌ ಈ ಹಿಂದೆ ಪೋಸ್ಟ್‌ ಹಂಚಿಕೊಂಡಿತ್ತು. “ಪುಷ್ಪರಾಜ್ ಈಸ್ ಬ್ಯಾಕ್! ಈ ಬಾರಿ ರೂಲ್ #PushpaTheRuleʼʼ ಎಂದು ಹಂಚಿಕೊಂಡಿದ್ದರು.

ಸಿನಿ ರಸಿಕರಲ್ಲಿ ಎರಡನೇ ಪಾರ್ಟ್‌ ಹೇಗಿರಲಿದೆ ಎಂಬ ಕೂತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್‌ ಶೂಟಿಂಗ್‌ ಆರಂಭಿಸುತ್ತಿದ್ದಾರೆ. 2021ರಲ್ಲಿ ಚಿತ್ರ ಬಿಡುಗಡೆಗೊಂಡು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪಾರ್ಟ್‌ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್‌ ಫಾಸಿಲ್‌ ಮತ್ತು ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಪುಷ್ಪ ದಿ ರೈಸ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ.

ಇದನ್ನೂ ಓದಿ | Allu Arjun | ಬಾಲಿವುಡ್‌ ನನ್ನ ಔಟ್ ಆಫ್‌ ಕಂಫರ್ಟ್‌ ಝೋನ್‌; ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್

Exit mobile version