Site icon Vistara News

Allu Arjun | ನ್ಯೂಯಾರ್ಕ್‌ನ ಇಂಡಿಯಾ ಡೇ ಪರೇಡ್‌ನಲ್ಲಿ ಭಾರತ ಪ್ರತಿನಿಧಿಸಿದ ಐಕಾನ್‌ಸ್ಟಾರ್‌: ಪೋಟೊ ವೈರಲ್‌!

Allu Arjun

ಬೆಂಗಳೂರು: ನ್ಯೂಯಾರ್ಕ್‌ನ ಇಂಡಿಯಾ ಡೇ ಪರೇಡ್‌ನಲ್ಲಿ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಭಾಗಿಯಾಗಿರುವ ಪೋಟೊಗಳು ವೈರಲ್‌ ಆಗಿವೆ. ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ಅತಿ ದೊಡ್ಡ ವಾರ್ಷಿಕ ಭಾರತೀಯ ದಿನದ ಪರೇಡ್‌ನಲ್ಲಿ ಅಲ್ಲು ಅರ್ಜುನ್‌ ಭಾರತವನ್ನು ಪ್ರತಿನಿಧಿಸಿದ್ದಾರೆ.

ನ್ಯೂಯಾರ್ಕ್‌, ನ್ಯೂಜೆರ್ಸಿ, ಕನೆಕ್ವಿಕಟ್‌ ಭಾರತೀಯ ಸಂಘಗಳ ಒಕ್ಕೂಟವು 75ನೇ ಭಾರತದ ಸ್ವಾತಂತ್ರ್ಯ ವರ್ಷವನ್ನು ಅದ್ಧೂರಿಯಾಗಿ ಆಚರಿಸಿದೆ. ಈ ವೇಳೆ ನಟ ಅಲ್ಲು ಅರ್ಜುನ್ ಹಾಗೂ ಪತ್ನಿ ಸ್ನೇಹ ಪರೇಡ್‌ನಲ್ಲಿ ಭಾಗಿಯಾಗಿರುವ ವಿಡಿಯೊ ಹಾಗೂ ಫೋಟೋಗಳು ವೈರಲ್ ಆಗಿವೆ. ಇಂಡಿಯಾ ಡೇ ಪರೇಡ್‌ನನಲ್ಲಿ ಅಲ್ಲು ಅರ್ಜುನ್‌ ಗ್ರ್ಯಾಂಡ್ ಮಾರ್ಷಲ್ ಎಂಬ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ | Pushpa 2: The Rule | ಅಲ್ಲುಅರ್ಜುನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸೆಟ್ಟೇರಲು ಸಜ್ಜಾದ ಪುಷ್ಪರಾಜ್‌!

ನ್ಯೂಯಾರ್ಕ್‌ ಮೇಯರ್ ಎರಿಕ್ ಆಡಮ್ಸ್‌ ಅವರಿಗೆ ಅಲ್ಲು ಅರ್ಜುನ್ ಅಭಿನಂದನೆ ತಿಳಿಸಿದ್ದಾರೆ. ಎರಿಕ್‌ರವರ ಜತೆ ನಟ ಅಲ್ಲು ಅರ್ಜುನ್‌, ಪುಷ್ಪ ಸಿಗ್ನೇಚರ್ ಸ್ಟೈಲ್‌ನೊಂದಿಗೆ ಪೋಸ್ ಕೊಟ್ಟು ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. “ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ಗ್ರ್ಯಾಂಡ್ ಮಾರ್ಷಲ್ ಆಗಿರುವುದು ಒಂದು ಗೌರವ” ಎಂದು ಅಲ್ಲು ಅರ್ಜುನ್‌ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈಗಾಗಲೇ ಅಲ್ಲು ಅರ್ಜುನ್‌ ಅವರ ಪುಷ್ಪ: ದಿ ರೂಲ್ ಎಂಬ ಉಪ ಶೀರ್ಷಿಕೆಯಡಿ, ಪುಷ್ಟ-೨ ಸೆಟ್‌ ಏರಲು ಸಜ್ಜಾಗಿದೆ. ಆಗಸ್ಟ್ 22ರಂದು ಪುಷ್ಟ-೨ ಸಿನಿಮಾ ಮುಹೂರ್ತವನ್ನು ಚಿತ್ರತಂಡ ಫಿಕ್ಸ್‌ ಮಾಡಿದೆ. ಸಿನಿ ರಸಿಕರಲ್ಲಿ ಎರಡನೇ ಪಾರ್ಟ್‌ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್‌ ಶೂಟಿಂಗ್‌ ಆರಂಭಿಸುತ್ತಿದ್ದಾರೆ.

ಇದನ್ನೂ ಓದಿ | Allu Arjun | ಬಾಲಿವುಡ್‌ ನನ್ನ ಔಟ್ ಆಫ್‌ ಕಂಫರ್ಟ್‌ ಝೋನ್‌; ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್

Exit mobile version