Site icon Vistara News

Allu Arjun: ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜತೆ ಅಲ್ಲು ಅರ್ಜುನ್‌; ಹುಚ್ಚೆದ್ದು ಕುಣಿದ ಅಭಿಮಾನಿಗಳು!

Allu Arjun joins DJ Martin Garrix

ಬೆಂಗಳೂರು: ಟಾಲಿವುಡ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್ (Allu Arjun) ಹೈದರಾಬಾದ್ ಕಾರ್ಯಕ್ರಮವೊಂದರಲ್ಲಿ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಈ ವೇಳೆ ಚಿತ್ರ ಪುಷ್ಪ: ದಿ ರೈಸ್‌ನ ʻಊ ಅಂಟಾವಾʼ ಹಾಡಿಗೆ ಅಲ್ಲು ಸಾಥ್‌ ನೀಡಿದರು. ಈವೆಂಟ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 2021 ರ ಚಿತ್ರದಲ್ಲಿ ಪುಷ್ಪ ರಾಜ್ ಪಾತ್ರದಲ್ಲಿ ನಟಿಸಿದ್ದ ಅರ್ಜುನ್, ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಲ್ಲು ಅರ್ಜುನ್ ಮತ್ತು ಡಿಜೆ ಮಾರ್ಟಿನ್ ಗ್ಯಾರಿಕ್ಸ್ ವೇದಿಕೆಯ ಮೇಲಿರುವ ಟೇಬಲ್ ಮೇಲೆ ಡ್ಯಾನ್ಸ್ ಮಾಡುತ್ತಿರುವುದು ವಿಡಿಯೋದಲ್ಲಿದೆ. ಪುಷ್ಪ: ದಿ ರೈಸ್‌ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ವೇದಿಕೆಯಲ್ಲಿ ಅಲ್ಲು ಅರ್ಜುನ್ ಅವರ ಸ್ಟೈಲಿಶ್ ಎಂಟ್ರಿಯ ವಿಡಿಯೊಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಅವರು ಸಂಪೂರ್ಣವಾಗಿ ಕಪ್ಪು ಬಟ್ಟೆಯನ್ನು ಧರಿಸಿದ್ದರು ಮತ್ತು ಅದರ ಮೇಲೆ ‘ಐಕಾನ್’ ಎಂದು ಬರೆಯಲಾದ ಮ್ಯಾಚಿಂಗ್ ಕ್ಯಾಪ್ ಅನ್ನು ಹೊಂದಿದ್ದರು. ನಟ ಇನ್‌ಸ್ಟಾಗ್ರಾಮ್‌ನಲ್ಲಿ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; Allu Arjun: ಅಲ್ಲು ಅರ್ಜುನ್‌ ಜತೆ ಸಿನಿಮಾ ಮಾಡಲಿದ್ದಾರೆ ಭೂಷಣ್ ಕುಮಾರ್, ಸಂದೀಪ್ ರೆಡ್ಡಿ ವಂಗಾ: ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಪುಷ್ಪ: ದಿ ರೂಲ್ (Pushpa 2: The Rule)

ಪುಷ್ಪ: ದಿ ರೂಲ್ (Pushpa 2: The Rule) ಎಂಬ ಉಪ ಶೀರ್ಷಿಕೆಯಡಿ, ಪುಷ್ಟ-2 ಸೆಟ್ಟೇರಿದೆ. ಸಿನಿ ರಸಿಕರಲ್ಲಿ ಎರಡನೇ ಪಾರ್ಟ್‌ ಹೇಗಿರಲಿದೆ ಎಂಬ ಕೂತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್‌ ಶೂಟಿಂಗ್‌ ಆರಂಭಿಸಿದ್ದಾರೆ. 2021ರಲ್ಲಿ ಚಿತ್ರ ಬಿಡುಗಡೆಗೊಂಡು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪಾರ್ಟ್‌ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್‌ ಫಾಸಿಲ್‌ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.

Exit mobile version