Site icon Vistara News

Pushpa 2 : ಹೊಸ ಚಿತ್ರ ಪೋಸ್ಟ್​ ಮಾಡಿ ಪುಷ್ಪ 2 ಬಗ್ಗೆ ಕುತೂಹಲ ಸೃಷ್ಟಿಸಿದ ಅಲ್ಲು ಅರ್ಜುನ್​

Pushpa 2

ನವದೆಹಲಿ: ಪುಷ್ಪಾ 2 ಸಿನಿಮಾದ (Pushpa 2 ) ಪೋಸ್ಟರ್​ ಟೀಸರ್ ಬಿಡುಗಡೆಗೆ ಮುಂಚಿತವಾಗಿ, ಸಿನಿಮಾ ತಂಡ ಅಭಿಮಾನಿಗಳ ಉತ್ಸಾಹ ಹೆಚ್ಚಿಸುತ್ತಿದ್ದಾರೆ. ಶುಕ್ರವಾರ ಅಲ್ಲು ಅರ್ಜುನ್ (Allu Arjun) ಅಲಿಯಾಸ್ ಪುಷ್ಪಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ಫೀಡ್​ನಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್ ನಲ್ಲಿ ಅಲ್ಲು ಅರ್ಜುನ್ ಅವರ ಕುತೂಹಲಕಾರಿ ಲುಕ್ ಇದೆ. ಕುಂಕುಮದಿಂದ ಲೇಪಿತರಾಗಿರುವ ಅಲ್ಲು ಅರ್ಜುನ್ ಒಂದು ಕೈಯಲ್ಲಿ ಶಂಖವನ್ನು ಊದುತ್ತಿದ್ದರೆ, ಇನ್ನೊಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದಿರುವುದನ್ನು ಕಾಣಬಹುದು. ಈ ಪೋಸ್ಟರ್ ಅನ್ನು ಹಂಚಿಕೊಂಡಿರುವ ಅಲ್ಲು ಅರ್ಜುನ್, “ಏಪ್ರಿಲ್ 8 ರಂದು #Pushpa2TheRuleTeaser!!” ಎಂದು ಬರೆದಿದ್ದಾರೆ. ಟೀಸರ್ ಗಾಗಿ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳು ಪೋಸ್ಟ್ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ. ‘

ನೆಟ್ಟಿಗರೊಬ್ಬರು “ಹುಟ್ಟುಹಬ್ಬದ ಬ್ಲಾಸ್ಸ್ಟ್ಟ್” ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ” ಕಾಯುವುದು ಅಸಾಧ್ಯ” ಎಂದು ಬರೆದಿದ್ದಾರೆ. ಮತ್ತೊಂದು ಕಾಮೆಂಟ್​ನಲ್ಲಿ “ರ್ಯಾಂಪ್ ಪೋಸ್ಟರ್” ಎಂದು ಬರೆದಿದ್ದಾರೆ. ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು ಪುಷ್ಪ 2 ಟೀಸರ್ ಬಿಡುಗಡೆಯಾಗಲಿದೆ.

ದಿನದ ಹಿಂದೆ ಅಲ್ಲು ಅರ್ಜುನ್ ಮತ್ತೊಂದು ಹೊಚ್ಚ ಹೊಸ ಪೋಸ್ಟರ್ ಹಂಚಿಕೊಂಡಿದ್ದರು. ಅದಲ್ಲಿ ಒಂದು ಕಾಲಿನ ಚಿತ್ರವನ್ನು ಮಾತ್ರ ಹಾಕಲಾಗಿದೆ. ಅದರ ಮೇಲೆ ತಾಯಿತವೊಂದನ್ನು ಕಟ್ಟಲಾಗಿದೆ. ಈ ಪೋಸ್ಟರ್ ಅನ್ನು ಹಂಚಿಕೊಂಡಿರುವ ಅಲ್ಲು ಅರ್ಜುನ್, “ಏಪ್ರಿಲ್ 8 ರಂದು #Pushpa2TheRuleTeaser!!” ಎಂದು ಬರೆದಿದ್ದಾರೆ.

‘ಪುಷ್ಪ 2: ದಿ ರೂಲ್’ ಚಿತ್ರದ ಫಸ್ಟ್ ಲುಕ್ ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು.

ರಶ್ಮಿಕಾ ಅವರ ಹುಟ್ಟುಹಬ್ಬದಂದು ಪುಷ್ಪಾ ಚಿತ್ರದ ನಿರ್ಮಾಪಕರು ಅವರ ಅದ್ಭುತ ಚಿತ್ರವನ್ನು ಹಂಚಿಕೊಂಡಿದ್ದರು. ಹಸಿರು ಸೀರೆ ಮತ್ತು ಆಭರಣಗಳನ್ನು ಧರಿಸಿರುವ ರಶ್ಮಿಕಾ ಅವರ ಕಣ್ಣುಗಳು ಚಿತ್ರದಲ್ಲಿ ಮಾತನಾಡುತ್ತವೆ. ಈ ಫೋಟೋವನ್ನು ಹಂಚಿಕೊಂಡಿರುವ ಚಿತ್ರತಂಡ, “ದೇಶದ ಹೃದಯಸ್ಪರ್ಶಿ ‘ಶ್ರೀವಲ್ಲಿ’ ಅಲಿಯಾಸ್ ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಏಪ್ರಿಲ್ 8ರಂದು #PushpaMassJaathara #Pushpa2TheRuleTeaser. #Pushpa2TheRule ಆಗಸ್ಟ್ 15, 2024 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದರು.

ಇದನ್ನು ಓದಿ: Rashmika mandanna: ರೇಷ್ಮೆ ಸೀರೆಯುಟ್ಟು, ಮೈತುಂಬ ಒಡವೆ ಧರಿಸಿ ಖಡಕ್‌ ಪೋಸ್‌ ಕೊಟ್ಟ ಶ್ರೀವಲ್ಲಿ!

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

ರಶ್ಮಿಕಾ ಅವರು ರಣಬೀರ್ ಕಪೂರ್ ಜತೆ ಬಾಲಿವುಡ್ ಸಿನಿಮಾ ʻಅನಿಮಲ್‌ʼನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

Exit mobile version