Site icon Vistara News

Jawan Movie: ‘ಜವಾನ್‌’ ಸಿನಿಮಾಗೆ ಅಲ್ಲು ಅರ್ಜುನ್‌ ಫಿದಾ; ಶಾರುಖ್‌ ಹೊಸ ಅವತಾರಕ್ಕೆ ಮೆಚ್ಚುಗೆ

Allu Arjun

ಬೆಂಗಳೂರು: ಸೆಪ್ಟೆಂಬರ್ 7ರಂದು ಶಾರುಖ್‌ ಖಾನ್‌ ಅಭಿನಯದ ʻಜವಾನ್‌ʼ ಸಿನಿಮಾ (Jawan Movie) ವಿಶ್ವಾದ್ಯಂತ ಬಿಡುಗಡೆಯಾಯಿತು. ‘ಜವಾನ್’ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಭಾರತ ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ಭಾರತದಲ್ಲಿ ಈ ಚಿತ್ರ 350 ಕೋಟಿ ರೂ. ಗಡಿ ದಾಟಿದೆ. ಜಾಗತಿಕವಾಗಿ, ‘ಜವಾನ್’ 600 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಇದೀಗ ಜವಾನ್‌ ಸಿನಿಮಾ ನೋಡಿ ಅಲ್ಲು ಅರ್ಜುನ್‌ ಚಿತ್ರವನ್ನು ಹೊಗಳಿದ್ದಾರೆ.

ಅಲ್ಲು ಅರ್ಜುನ್‌ ಟ್ವೀಟ್‌ನಲ್ಲಿ ʻʻಜವಾನ್‌ ಇಡೀ ತಂಡಕ್ಕೆ ಅಭಿನಂದನೆಗಳು. ಜವಾನ್‌ ಸಿನಿಮಾದಲ್ಲಿರುವ ಪಾತ್ರವರ್ಗ, ತಂತ್ರಜ್ಞರು, ಸಿಬ್ಬಂದಿ ಮತ್ತು ನಿರ್ಮಾಪಕರಿಗೆ ಹೃತ್ಪೂರ್ವಕ ನಮನಗಳು. ಶಾರುಖ್‌ ಅವರ ಹೊಸ ಅವತಾರ, ಇಡೀ ಭಾರತವನ್ನು ಅಷ್ಟೇ ಅಲ್ಲದೇ ವಿಶ್ವಾದ್ಯಂತ ಮೋಡಿ ಮಾಡಿದೆ. ಸಂತೋಷವಾಗಿದೆ ಸರ್. ವಿಜಯ್‌ ಸೇತಪತಿ ಅವರೂ ಅಷ್ಟೇ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಯನತಾರಾ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ. ದೀಪಿಕಾ ಅವರ ನಟನೆ ಕೂಡ ಅದ್ಭುತ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ, ಬಾಕ್ಸ್‌ಆಫೀಸ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಕ್ಕಾಗಿ ನಿರ್ದೇಶಕ ಅಟ್ಲೀ ಅವರಿಗೆ ಧನ್ಯವಾದʼʼಎಂದು ಬರೆದುಕೊಂಡಿದ್ದಾರೆ. ಜವಾನ್‌ ಕೇವಲ ಆರು ದಿನಗಳಲ್ಲಿ ವಿಶ್ವದಾದ್ಯಂತ 600 ಕೋಟಿ ರೂಪಾಯಿಗಳ ಗಡಿ ದಾಟಿದೆ. ಭಾರತದಲ್ಲಿ, ‘ಜವಾನ್’ 400 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಇದನ್ನೂ ಓದಿ: Jawan Movie: ಅಟ್ಲೀ ಜತೆ ತಮಿಳು ಮಾತನಾಡಿದ ಶಾರುಖ್‌ ಖಾನ್‌; ವಿಡಿಯೊ ವೈರಲ್‌!

ಅಲ್ಲು ಅರ್ಜುನ್‌ ಪೋಸ್ಟ್‌

ಅಟ್ಲೀ ಬರೆದು ನಿರ್ದೇಶಿಸಿರುವ ʼಜವಾನ್ʼ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ, ರಿಧಿ ಡೋಗ್ರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಮೊದಲ ದಿನ ಭಾರತದ ಎಲ್ಲಾ ಭಾಷೆಗಳಲ್ಲಿ 74.50 ಕೋಟಿ ಗಳಿಸಿತು. ಈ ಚಿತ್ರವು ವಿಶ್ವಾದ್ಯಂತ 129.06 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ದಿನಕ್ಕೆ ಸಾಕ್ಷಿಯಾಯಿತು. ವ್ಯಾಪಾರ ವರದಿಗಳ ಪ್ರಕಾರ, ಸೆಪ್ಟೆಂಬರ್ 12ರಂದು 6 ನೇ ದಿನದಂದು, ‘ಜವಾನ್’ ಭಾರತದಲ್ಲಿ 26.50 ಕೋಟಿ ರೂ ಗಳಿಕೆ ಕಂಡಿದೆ. ಹಾಗಾಗಿ, ಭಾರತದಲ್ಲಿ ಈಗ ಒಟ್ಟು ಕಲೆಕ್ಷನ್ 345.58 ಕೋಟಿ ರೂ. ‘ಜವಾನ್’ ಸೆಪ್ಟೆಂಬರ್ 11ರಂದು ಒಟ್ಟಾರೆ ಶೇಕಡಾ 26.28 ಆಕ್ಯುಪೆನ್ಸಿ ಹೊಂದಿತ್ತು.

Exit mobile version