Site icon Vistara News

Allu arjun: ಎಲ್ಲಿದ್ದಾನೆ ಪುಷ್ಪ? ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್‌!

Allu arjun Pushpa 2! The Rule has begun video titled 'Hunt for Pushpa'...!

ಬೆಂಗಳೂರು: ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu arjun) ಅವರ ಹುಟ್ಟುಹಬ್ಬದ ಮುಂಚಿತವಾಗಿ ಪುಷ್ಪ-2 ವಿಶಿಷ್ಟವಾದ ಪರಿಕಲ್ಪನೆಯ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಪುಷ್ಪ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಹೀಗೆ ಪೊಲೀಸರ ಹುಡುಕಾಟದ ಗ್ಲಿಂಪ್ಸ್ ಹಂಚಿಕೊಂಡಿದೆ. ಕೊನೆಗೂ ಪುಷ್ಪರಾಜ್ ಹುಲಿ ಜತೆ ಕಾಣಿಸಿಕೊಂಡಿದ್ದಾನೆ. ಇದೀಗ ಚಿತ್ರದ ಪುಷ್ಪರಾಜ್‌ ದರ್ಶನದ ವಿಡಿಯೊ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೇಗಿದೆ ಪುಷ್ಪರಾಜ್‌ನ ದರ್ಶನ?

ಗುಂಡಿನಿಂದ ಗಾಯಗೊಂಡು ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಪುಷ್ಪನಿಗಾಗಿ ಹುಡುಗಾಟ, ಹೊಡೆದಾಟ, ದಾಳಿ ನಡೆಯುತ್ತದೆ. ಎಷ್ಟು ದಿನವಾದ್ರೂ ಪುಷ್ಪ ಪತ್ತೆಯಾಗುವುದಿಲ್ಲ. ದಟ್ಟ ಅರಣ್ಯದಲ್ಲಿ ಹುಲಿಯೊಟ್ಟಿಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವ ಪುಷ್ಪರಾಜನ ಖದರ್ , `ಕಾಡಲ್ಲಿ ಪ್ರಾಣಿಗಳು ಎರಡ ಹೆಜ್ಜೆ ಹಿಂದೆ ಇಟ್ರೆ ಹುಲಿ ಬಂದಿದೆ ಅಂತಾ ಅರ್ಥ.. ಹುಲಿನೇ ಎರಡು ಹೆಜ್ಜೆ ಹಿಂದೆ ಇಟ್ರೆ ಪುಷ್ಪ ಬಂದಿದ್ದಾನೆಂಬ’ ಡೈಲಾಗ್ ಮೂಲಕ ಅಲ್ಲು ಅರ್ಜುನ್ ದರ್ಶನವಾಗುತ್ತದೆ.

ಪುಷ್ಪ ಎಲ್ಲಿ ಎಂಬ ನಿರೀಕ್ಷೆಯೊಂದಿಗೆ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದ್ದು, ಇದೀಗ ಹುಲಿಯೊಂದಿಗೆ ಪುಷ್ಪರಾಜ್ ಕಾಣಿಸಿಕೊಂಡಿದ್ದಾನೆ. ಈ ಹಿಂದೆ, ಚಿತ್ರದ ನಿರ್ದೇಶಕ ಸುಕುಮಾರ್ ಅವರು ಚಿತ್ರ ತಂಡದ ಇತರ ಸದಸ್ಯರೊಂದಿಗೆ ಸಂಭಾಷಣೆಯಲ್ಲಿ ಇರುವ ಫೋಟೊವನ್ನು ಹಂಚಿಕೊಂಡಿದ್ದರು. ಪುಷ್ಪಾ ಸೀಕ್ವೆಲ್‌ನ ಕಥೆಯನ್ನು ಅಭಿಮಾನಿಗಳು ಮತ್ತು ಸಿನಿಪ್ರಿಯರು ಕುತೂಹಲದಿಂದ ನಿರೀಕ್ಷಿಸಿದ್ದಾರೆ. ಮುಂದಿನ ಭಾಗದಲ್ಲಿ ಪುಷ್ಪಾ ರಾಜ್ ಮೇಲೆ ಪೊಲೀಸರು ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಿದೆ. ಪುಷ್ಪಾ 2ರಲ್ಲಿ ಪುಷ್ಪಾ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪತ್ನಿಯಾಗಿ ನಟಿಸಿದ್ದಾರೆ.

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್‌ ಮಗಳು ತೆಲುಗಿನಲ್ಲಿ ಮಾತ್ರ ಮಾತನಾಡುತ್ತಾಳೆ, ಇಂಗ್ಲಿಷ್ ಮಾತನಾಡಲ್ಲ ಎಂದ ಸಮಂತಾ

ಅಲ್ಲು ಅರ್ಜುನ್‌ ಸಂಭಾವನೆ ಪ್ರಮಾಣ ಹೆಚ್ಚಳ

ಇತ್ತೀಚೆಗೆ ಅಲ್ಲು ಅರ್ಜುನ್‌ ಅವರ ನಟನೆಯ ಎಲ್ಲ ಸಿನಿಮಾಗಳು ಹಿಟ್‌ ಲಿಸ್ಟ್‌ ಸೇರುತ್ತಿರುವ ಹಿನ್ನೆಲೆ ನಟ ತನ್ನ ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಹಾಗೆಯೇ ಪುಷ್ಪಾ 2 ಸಿನಿಮಾದಲ್ಲಿ ನಟಿಸುವುದಕ್ಕೆ ಬರೋಬ್ಬರಿ 150 ಕೋಟಿ ರೂ. ಕೊಡಬೇಕು ಎಂದು ಚಿತ್ರತಂಡವನ್ನು ಕೇಳಿದ್ದಾರೆ. ಆದರೆ ಚಿತ್ರತಂಡ ಮತ್ತು ನಟ ಕುಳಿತು ಚರ್ಚೆ ನಡೆಸಿದ್ದು, 125 ಕೋಟಿ ರೂ. ಅನ್ನು ಕೊಡಲು ಒಪ್ಪಿಕೊಳ್ಳಲಾಗಿದೆ ಎಂದು ವರದಿಯಿದೆ.

ಪುಷ್ಪಾ 2 ಸಿನಿಮಾ ತಂಡವು ಎಲ್ಲ ಭಾಷೆಗಳಲ್ಲಿ ಸಿನಿಮಾ ತೆರೆಯ ಹಕ್ಕು ಕಾಯ್ದಿರಿಸಿಕೊಳ್ಳಲು ಒಟ್ಟು 1000 ಕೋಟಿ ರೂ. ಕೇಳಿತ್ತು ಎಂದು ಈ ಹಿಂದೆ ವರದಿಯಾಗಿತ್ತು. ಪುಷ್ಪಾ 2 ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆಯಲ್ಲಿ ಚಿತ್ರತಂಡ ಮತ್ತು ನಟ ಅಲ್ಲು ಅರ್ಜುನ್‌ ಇದ್ದಾರೆ. ಈ ಸಿನಿಮಾ ಬಾಹುಬಲಿ ಮತ್ತು ಕೆಜಿಎಫ್‌ 2 ಸಿನಿಮಾದ ದಾಖಲೆಗಳನ್ನೂ ಮುರಿಯಲಿದೆ ಎನ್ನುವ ವಿಶ್ವಾಸವನ್ನು ಅಲ್ಲು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ. ತೆಲುಗಿನಲ್ಲಿ ಚಿತ್ರೀಕರಿಸಲಾದ ಪುಷ್ಪಾ ಮೊದಲ ಭಾಗವನ್ನು ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು.

ಪುಷ್ಪರಾಜ್‌ ವಿಡಿಯೊ

ಬುಡಕಟ್ಟು ಜನಾಂಗದ ಹುಡುಗಿಯಾಗಿ ಸಾಯಿ ಪಲ್ಲವಿ

ಮೂಲಗಳ ಪ್ರಕಾರ ಸಾಯಿ ಪಲ್ಲವಿ ಈಗಾಗಲೇ 10 ದಿನಗಳ ಕಾಲ ಶೂಟಿಂಗ್‌ಗಾಗಿ ಮೀಸಲಟ್ಟಿದ್ದು, ಚಿತ್ರದಲ್ಲಿ ಬುಡಕಟ್ಟು ಜನಾಂಗದ ಹುಡುಗಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ಮೊದಲ ಪಾರ್ಟ್‌ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್‌ ಫಾಸಿಲ್‌ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Exit mobile version