Site icon Vistara News

Allu Arjun | ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ʻಪುಷ್ಪ: ದಿ ರೈಸ್‌ʼ ರಷ್ಯನ್ ಟ್ರೈಲರ್‌ ಔಟ್‌: ಫಿದಾ ಆದ್ರು ಫ್ಯಾನ್ಸ್‌!

Allu Arjun (pushpa trailer in russia)

ಬೆಂಗಳೂರು: ಟಾಲಿವುಡ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಹಾಗೂ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ : ದಿ ರೈಸ್‌ ಸಿನಿಮಾದ ಭಾರಿ ಯಶಸ್ಸಿನ ನಂತರ ʻಪುಷ್ಪಾ: ದಿ ರೂಲ್‌ʼ( Pushpa 2: The Rule) ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಇದೀಗ ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದೆ ಚಿತ್ರತಂಡ. ಬ್ಲಾಕ್‌ ಬಸ್ಟರ್‌ ಹಿಟ್‌ ಆದ ಪುಷ್ಪ : ದಿ ರೈಸ್‌ ರಷ್ಯನ್ ಭಾಷೆಯ ಟ್ರೈಲರ್ ಬಿಡುಗಡೆಗೊಂಡಿದೆ. ಡಿಸೆಂಬರ್ 1 ರಂದು ರಷ್ಯಾದಲ್ಲಿ ನಡೆಯಲಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರೀಮಿಯರ್‌ ಆಗಲಿದೆ. ನಂತರ ರಷ್ಯಾದಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಅಲ್ಲು ಅರ್ಜುನ್ ಅವರನ್ನು ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಹೆಸರು ತಂದುಕೊಟ್ಟ ಪುಷ್ಪಾ ದಿ ರೈಸ್‌ ಶೀಘ್ರದಲ್ಲೇ ರಷ್ಯಾದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ, ಅದರ ರಷ್ಯನ್ ಭಾಷೆಯ ಟ್ರೈಲರ್ ಹೊರಬಂದಿದೆ.

ಇದನ್ನೂ ಓದಿ | Pushpa 2: The Rule | ಅಲ್ಲುಅರ್ಜುನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸೆಟ್ಟೇರಲು ಸಜ್ಜಾದ ಪುಷ್ಪರಾಜ್‌!

ಪುಷ್ಪ: ದಿ ರೂಲ್ (Pushpa 2: The Rule)

ಪುಷ್ಪ: ದಿ ರೂಲ್ (Pushpa 2: The Rule) ಎಂಬ ಉಪ ಶೀರ್ಷಿಕೆಯಡಿ, ಪುಷ್ಟ-೨ ಸೆಟ್ಟೇರಿದೆ. ಸಿನಿ ರಸಿಕರಲ್ಲಿ ಎರಡನೇ ಪಾರ್ಟ್‌ ಹೇಗಿರಲಿದೆ ಎಂಬ ಕೂತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್‌ ಶೂಟಿಂಗ್‌ ಆರಂಭಿಸುತ್ತಿದ್ದಾರೆ ಎನ್ನಲಾಗುತ್ತಿದೆ. 2021ರಲ್ಲಿ ಚಿತ್ರ ಬಿಡುಗಡೆಗೊಂಡು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪಾರ್ಟ್‌ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್‌ ಫಾಸಿಲ್‌ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.

ಇದನ್ನೂ ಓದಿ | Pushpa 2: The Rule | ಅಲ್ಲುಅರ್ಜುನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ: ಸೆಟ್ಟೇರಲು ಸಜ್ಜಾದ ಪುಷ್ಪರಾಜ್‌!

Exit mobile version