Site icon Vistara News

Allu Arjun: ಸಕ್ಸೆಸ್‌ ಮೀಟ್‌ನಲ್ಲಿ ದುಬಾರಿ ಮೌಲ್ಯದ ಶೂ ಧರಿಸಿದ್ದ ಅಲ್ಲು ಅರ್ಜುನ್‌!

Allu Arjun

ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಅಲ್ಲು ಅರ್ಜುನ್ (Allu Arjun), ತೆಲುಗು ಚಿತ್ರರಂಗದಲ್ಲಿ ಅವರದ್ದೇ ಆದ ಛಾಪು ಮೂಡಿಸಿದ್ದಾರೆ. ವಿಜಯ್‌ ದೇವರಕೊಂಡ ಸಹೋದರ ನಟಿಸಿರುವ ‘ಬೇಬಿ’ ಚಿತ್ರದ ಸಕ್ಸೆಸ್‌ ಮೀಟ್‌ನಲ್ಲಿ ಮೆಗಾಸ್ಟಾರ್​ ಚಿರಂಜೀವಿ ಅವರ ಜತೆ ಅಲ್ಲು ಅರ್ಜುನ್‌ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಅಲ್ಲು ಅರ್ಜುನ್ ಧರಿಸಿರುವ ಬಿಳಿ ಶರ್ಟ್‌ ಹೈಲೈಟ್‌ ಆಗಿದೆ. ಪ್ರತಿಷ್ಠಿತ ಬ್ರ್ಯಾಂಡ್ ಗಿವೆಂಚಿಯಿಂದ ಬಿಳಿ ಸ್ನೀಕರ್ಸ್ (ಶೂ) ಧರಿಸಿದ್ದರು. ಇದು 55,000 ರೂ. ಬೆಲೆಯದ್ದಾಗಿದೆ ಎನ್ನಲಾಗಿದೆ.

ನಟ ಅಲ್ಲು ಅರ್ಜುನ್ ಅವರ ಬಳಿ 50 ಸಾವಿರ ರೂ. ಮೌಲ್ಯದ ಸಾಲ್ವಟೋರ್ ಫೆರ್ರಾಗಾಮೊದಿಂದ 60 ಸಾವಿರ ರೂ. ಮೌಲ್ಯದ ಸ್ಯೂಡ್ ಲೋಫರ್‌(suede loafers) ಬ್ರ್ಯಾಂಡ್‌ನ ಶೂಗಳಿವೆ. ಬ್ಲ್ಯಾಕ್ ಸ್ಪೀಡ್ ಆಂಕಲ್-ಲೆಂಗ್ತ್ ಸ್ನೀಕರ್ಸ್ ಮತ್ತು ಗೈಸೆಪ್ಪೆ ಝನೊಟ್ಟಿಯವರ ಸ್ನೀಕರ್‌ಗಳು ಸೇರಿದಂತೆ ಶೂಗಳ ಸಂಗ್ರಹವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಫ್ಯಾಶನ್ ಮತ್ತು ಸ್ಟೈಲಿಂಗ್‌ನಲ್ಲಿ ಹೆಸರುವಾಸಿಯಾದ ಅಲ್ಲು ಅರ್ಜುನ್, ಅವರ ಫ್ಯಾಷನ್ ಸ್ಟೈಲಿಸ್ಟ್ ಹರ್ಮನ್ ಕೌರ್ ಅವರ ಸಹಾಯದಿಂದ, ಪ್ರತಿ ಈವೆಂಟ್‌ನಲ್ಲಿ ಅತ್ಯುತ್ತಮವಾಗಿ ಕಾಣುವಂತೆ ನೋಡಿಕೊಳ್ಳುತ್ತಾರೆ. ಈ ವೇಳೆ ಅಲ್ಲು ಅರ್ಜುನ್​ ‘ಪುಷ್ಪಾ-2’ ಚಿತ್ರದ ಡೈಲಾಗ್​ ಹೇಳಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು., ಸಖತ್‌ ಸುದ್ದಿ ಮಾಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಇಷ್ಟು ಬೇಗ ಯಾಕೆ ಸಿನಿಮಾದ ಡೈಲಾಗ್​ ಲೀಕ್‌ ಮಾಡಿದ್ರಿ? ಎಂದು ಕಮೆಂಟ್ ಮೂಲಕ ನಟನಿಗೆ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸಂತಸ ಹೊರಹಾಕಿದ್ದಾರೆ. “ಈದಿವುಂಡೆಡಿ ಒಂದೇ ಆಳ್ವಿಕೆ ಆದಿ ಪುಷ್ಪ ಗಾಡಿ ಆಳ್ವಿಕೆ” ಎಂದು ಅಲ್ಲು ಖಡಕ್‌ ಡೈಲಾಗ್‌ ಹೇಳಿದರು.

ಇದನ್ನೂ ಓದಿ: Allu Arjun:’ಪುಷ್ಪ 2′ ಡೈಲಾಗ್‌ ಲೀಕ್‌ ಮಾಡಿದ ಅಲ್ಲು ಅರ್ಜುನ್‌ ; ಶಿಳ್ಳೆ ಹೊಡೆದು ಸಂಭ್ರಮಿಸಿದ ಫ್ಯಾನ್ಸ್‌!

ಈ ಮೊದಲು ಸಿನಿಮಾ 2023ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವುದಾಗಿ ವರದಿ ಆಗಿತ್ತು. ಆದರೀಗ ಸಿನಿಮಾ 2024ರಲ್ಲಿ ಬಿಡುಗಡೆಗೊಳ್ಳಲಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ವರದಿ ಪ್ರಕಾರ ಪುಷ್ಪ 2 ಸಿನಿಮಾ 2024ರ ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನಿರ್ದೇಶಕ ಸುಕುಮಾರ್ ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮೀಯ ಅನುಭವವನ್ನು ತರಲು ನಿರ್ಧರಿಸಿದ್ದರಿಂದ ಚಲನಚಿತ್ರವನ್ನು ಸ್ವಲ್ಪ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.

“ಪುಷ್ಪ 2 ಸಿನಿಮಾ 2023ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿಲ್ಲ. 2024ರ ಮೇ ನಂತರ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆʼʼ ಎಂದು ಮೂಲವು ಹೇಳಿಕೊಂಡಿದೆ.

ಈ ಮೊದಲು ಸಿನಿಮಾ ಫಸ್ಟ್‌ ಲುಕ್‌ ಪೋಸ್ಟರ್‌ನಿಂದಾಗಿ ಸಖತ್‌ ಸುದ್ದಿಯಲ್ಲಿತ್ತು. ಫಸ್ಟ್‌ ಲುಕ್‌ನಲ್ಲಿ ಅಲ್ಲು ಅರ್ಜುನ್‌ ಅವರು ಸೀರೆ ಧರಿಸಿ, ಮೈತುಂಬ ಆಭರಣ ತೊಟ್ಟಿದ್ದರು. ಹಾಗೆಯೇ, ನಿಂಬೆ ಹಣ್ಣಿನ ಹಾರವನ್ನೂ ಹಾಕಿಕೊಂಡಿದ್ದರು. ಅಲ್ಲು ಅರ್ಜುನ್‌ ಅವರೇ ಪೋಸ್ಟರ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪುಷ್ಪ 2: ದಿ ರೂಲ್‌ ಆರಂಭವಾಗಿದೆ ಎಂದು ಬರೆದುಕೊಂಡಿದ್ದರು.

Exit mobile version