ಬೆಂಗಳೂರು : ʻಪುಷ್ಪ ದಿ ರೈಸ್ʼ ಸಿನಿಮಾ ಬಿಡುಗಡೆಯ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಭಾರತ ಸಿನಿರಂಗದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದೀಗ ಬಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರಾ ಎನ್ನುವ ಗಾಸಿಪ್‌ಗಳು ಹರಿದಾಡುತ್ತಿವೆ. ಇದಕ್ಕೆ ಅವರೂ ಸಹ ಪ್ರತಿಕ್ರಿಯೆ ನೀಡಿದ್ದು, ತಮ್ಮ “ಅಗತ್ಯತೆ” ಬಗ್ಗೆ ಮಾತನ್ನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಬಾಲಿವುಡ್‌ನಲ್ಲಿ ನಟಿಸುವ ಬಗ್ಗೆ ಅಲ್ಲು ಅರ್ಜುನ್ ಅವರಿಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸ್ಟೈಲಿಶ್ ಸ್ಟಾರ್, ʻಬಾಲಿವುಡ್‌ನಲ್ಲಿ ನನಗೆ ಹಲವಾರು ಅವಾಕಾಶಗಳು ಬಂದಿವೆ. ಆದರೆ, ಅದು ನನ್ನ ಕಂಫರ್ಟ್ ಝೋನ್ ಅಲ್ಲ. ಒಂದು ವೇಳೆ ನನ್ನ ಅಗತ್ಯತೆ ಇದೆ ಎಂದಾದರೆ ನಾನು ನಟಿಸಲು ಸಿದ್ಧವಿರುವೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಈ ʻಪುಷ್ಪʼ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ! ಪಶ್ಚಿಮ ಬಂಗಾಳ ಅರಣ್ಯಾಧಿಕಾರಿ ಟ್ವೀಟ್ ವೈರಲ್
ಈ ಹಿಂದೆ ಅಲ್ಲು ಅರ್ಜುನ್ ಅವರು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದಾಗಿ ಸುದ್ದಿ ಕೇಳಿ ಬರುತ್ತಿತ್ತು. ʻತೆರೆಯ ಮೇಲೆ ನಾನು ಎರಡನೇ ನಾಯಕನಾಗಿ ನಟಿಸಲು ಇಚ್ಚಿಸುವುದಿಲ್ಲ. ಕೆಲವೊಮ್ಮೆ ನನ್ನ ಬಳಿ ದೊಡ್ಡ ಸ್ಟಾರ್ ನಟರೊಂದಿಗೆ ಬಂದು ಎರಡನೇ ನಾಯಕನ ಪಾತ್ರವನ್ನು ಮಾಡಿ ಎಂದು ಕೇಳುತ್ತಾರೆ. ಇದರಲ್ಲಿ ಅರ್ಥವಿಲ್ಲ. ಕೆಲಸ ಮಾಡಿದರೆ ಮುಖ್ಯ ನಾಯಕನಾಗಿ ಪಾತ್ರ ಮಾಡಬೇಕುʼ ಎಂದೂ ಅಲ್ಲು ಅರ್ಜುನ್ ಹೇಳಿಕೊಂಡಿದ್ದರು.
ದಕ್ಷಿಣ ಭಾರತದ ನಟರು ಈಗಾಗಲೇ ಬಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಹಿಂದೆ ಬಾಲಿವುಡ್ ಚಿತ್ರೋದ್ಯಮದ ಕುರಿತು ಮಹೇಶ್ ಬಾಬು ಕೂಡ ಖಡಕ್ ಆಗಿ ಉತ್ತರ ಕೊಟ್ಟಿದ್ದರು. ಅವರ ಹೇಳಿಕೆ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. “ಬಾಲಿವುಡ್ ಉದ್ಯಮದಲ್ಲಿ ನಾನು ಕೆಲಸ ಮಾಡಲು ಬಯಸುವುದಿಲ್ಲ. ನನಗೆ ಹಿಂದಿಯಲ್ಲಿ ಸಾಕಷ್ಟು ಆಫರ್‌ಗಳು ಬಂದಿವೆ. ಆದರೆ ಅವರು ನನ್ನನ್ನು ಸಂಬಾಳಿಸಬಲ್ಲರು ಎಂದು ನಾನು ಭಾವಿಸಲಾರೆ. ನನ್ನನ್ನು ಸಂಬಾಳಿಸಲಾಗದ ಚಿತ್ರ್ಯೋದ್ಯಮದಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡಲಾರೆ. ಇಲ್ಲಿ (ದಕ್ಷಿಣದಲ್ಲಿ) ನನಗೆ ಸಿಗುವ ಸ್ಟಾರ್‌ಡಮ್ ಮತ್ತು ಗೌರವ ದೊಡ್ಡ ಮಟ್ಟದಲ್ಲಿದೆ. ಹಾಗಾಗಿ ನನ್ನ ಉದ್ಯಮ ಬಿಟ್ಟು ಬೇರೊಂದು ಕಡೆ ಹೋಗಬೇಕೆಂದು ನಾನು ಎಂದಿಗೂ ಯೋಚಿಸಿಲ್ಲ. ಸಿನಿಮಾ ಮಾಡಿ ದೊಡ್ಡವನಾಗಬೇಕು ಎಂದು ನಾನು ಯಾವಾಗಲೂ ಯೋಚಿಸುತ್ತಿದ್ದೆ. ನನ್ನ ಕನಸು ಈಗ ನನಸಾಗುತ್ತಿದೆʼ ಎಂದು ಹೇಳಿದ್ದರು.
ಇದನ್ನೂ ಓದಿ | ಹಾಲಿವುಡ್ ಲೆವೆಲ್ ಗೆ ನಾನು ಸೂಟ್ ಆಗಲ್ಲ, ಮತ್ತೆ ಸುದ್ದಿಯಾದ ಶಾರುಖ್ ವಿನಮ್ರ ಮಾತು