Site icon Vistara News

Allu Arjun: ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ಗೆ ಜನುಮದಿನದ ಸಂಭ್ರಮ: ಹಾರೈಕೆಗಳ ಸುರಿಮಳೆ

Allu Arjun turns 41 sweet posts shared by loved ones and fans.

ಬೆಂಗಳೂರು: ತೆಲುಗು ಸ್ಟಾರ್‌ ನಟ ಅಲ್ಲು ಅರ್ಜುನ್‌ (Allu Arjun) ಅವರಿಗೆ ಇಂದು (ಏಪ್ರಿಲ್‌ 8) ಹುಟ್ಟುಹಬ್ಬದ ಸಂಭ್ರಮ (Allu Arjun Birthday). 41ನೇ ವರ್ಷದ ಸಂಭ್ರಮದಲ್ಲಿರುವ ಅಲ್ಲು ಅರ್ಜುನ್ ಅವರಿಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಬಾಲಿವುಡ್ ಸಿನಿಮಾರಂಗದ ಗಣ್ಯರು, ನಟ, ನಟಿಯರು, ನಿರ್ಮಾಪಕರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಚಿರಂಜೀವಿ, ಸಾಯಿ ಧರಮ್ ತೇಜ್ ಮತ್ತು ರಶ್ಮಿಕಾ ಮಂದಣ್ಣ ವಿಶ್‌ ಮಾಡಿದ್ದು ಹೀಗೆ.

ಅಲ್ಲು ಅರ್ಜುನ್ ಅವರ ಚಿಕ್ಕಪ್ಪ ಚಿರಂಜೀವಿ, “ಹ್ಯಾಪಿ ಬರ್ತ್ ಡೇ ಡಿಯರ್ ಬನ್ನಿ ಅಲ್ಲು ಅರ್ಜುನ್‌! ಜತೆಗೆ ಪುಷ್ಪ ದಿ ರೂಲ್‌ ಫಸ್ಟ್‌ ಲುಕ್‌ ನೋಡಿದೆ. ಆಲ್ ದಿ ವೆರಿ ಬೆಸ್ಟ್!!” ಎಂದು ಟ್ವೀಟ್ ಮಾಡಿದ್ದಾರೆ.

ಚಿರಂಜೀವಿ ಟ್ವೀಟ್‌

ರಶ್ಮಿಕಾ ಮಂದಣ್ಣ ಟ್ವೀಟ್‌ನಲ್ಲಿ ಅಲ್ಲು ಅರ್ಜುನ್‌ ಜತೆ ಇರುವ ಫೋಟೊ ಹಂಚಿಕೊಂಡು ʻʻನನ್ನ ಪುಷ್ಪರಾಜ್ ಅಲ್ಲು ಅರ್ಜುನ್‌ ಅವರಿಗೆ ಜನ್ಮದಿನದ ಶುಭಾಶಯಗಳು. ಇಡೀ ಜಗತ್ತು ನಿಮ್ಮನ್ನು ಪುಷ್ಪಾ ಆಗಿ ಮತ್ತೆ ನೋಡಲು ಕಾಯುತ್ತಿದೆ. ನಿಮ್ಮ ಅಭಿಮಾನಿಗಳು ನಿಮ್ಮನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಲ್ಲು “ಧನ್ಯವಾದಗಳು ನನ್ನ ಶ್ರೀವಲ್ಲಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಪೋಸ್ಟ್‌

ನಟಿ ಸಮಂತಾ ಕೂಡ ಅರ್ಜುನ್‌ ಅವರಿಗೆ ಶುಭ ಹಾರೈಸಿ ʻʻನಿಮ್ಮಂತೆ ಕೆಲವೇ ಜನರು ನನ್ನನ್ನು ಪ್ರೇರೇಪಿಸುತ್ತಾರೆ. ನಿಮಗೆ ಉತ್ತಮ ಆರೋಗ್ಯವನ್ನು ದೇವರು ಕರುಣಿಸಿಸಲಿ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಮಂತಾ ಪೋಸ್ಟ್‌

ಸಾಯಿ ಧರಮ್ ತೇಜ್ ಅವರ ಹೃತ್ಪೂರ್ವಕ ಹಾರೈಕೆ ಹೀಗಿದೆ. “ಉತ್ಸಾಹ, ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ವ್ಯಕ್ತಿ ಅಲ್ಲು ಅರ್ಜುನ್‌ ಅವರಿಗೆ ಜನ್ಮದಿನದ ಶುಭಾಶಯಗಳುʼʼಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಲ್ಲು “ಧನ್ಯವಾದಗಳು ನನ್ನ ಪ್ರೀತಿಯ ಸಹೋದರʼʼಎಂದು ಪ್ರತಿಕ್ರಿಯಿಸಿದ್ದಾರೆ

ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಪುಷ್ಪ ಸಿನಿಮಾದ ಪೋಸ್ಟ‌ಗಳನ್ನು ಹಂಚಿಕೊಂಡು ನಟನಿಗೆ ಶುಭಾಶಯ ಹೇಳುತ್ತಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಗ್ಲಿಂಪ್ಸ್ ಬಿಡುಗಡೆ ಮಾಡಿದೆ.

ಹೇಗಿದೆ ಪುಷ್ಪರಾಜ್‌ನ ದರ್ಶನ?

ಗುಂಡಿನಿಂದ ಗಾಯಗೊಂಡು ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಪುಷ್ಪನಿಗಾಗಿ ಹುಡುಕಾಟ, ಹೊಡೆದಾಟ, ದಾಳಿ ನಡೆಯುತ್ತದೆ. ಎಷ್ಟು ದಿನವಾದ್ರೂ ಪುಷ್ಪ ಪತ್ತೆಯಾಗುವುದಿಲ್ಲ. ದಟ್ಟ ಅರಣ್ಯದಲ್ಲಿ ಹುಲಿಯೊಟ್ಟಿಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವ ಪುಷ್ಪರಾಜನ ಖದರ್ , `ಕಾಡಲ್ಲಿ ಪ್ರಾಣಿಗಳು ಎರಡ ಹೆಜ್ಜೆ ಹಿಂದೆ ಇಟ್ರೆ ಹುಲಿ ಬಂದಿದೆ ಅಂತಾ ಅರ್ಥ.. ಹುಲಿನೇ ಎರಡು ಹೆಜ್ಜೆ ಹಿಂದೆ ಇಟ್ರೆ ಪುಷ್ಪ ಬಂದಿದ್ದಾನೆಂಬ’ ಡೈಲಾಗ್ ಮೂಲಕ ಅಲ್ಲು ಅರ್ಜುನ್ ದರ್ಶನವಾಗುತ್ತದೆ.

ಇದನ್ನೂ ಓದಿ: Allu Arjun: ನಟನಾಗುವ ಮೊದಲು ಆನಿಮೇಟರ್ ಆಗಲು ಬಯಸಿದ್ದರಂತೆ ಅಲ್ಲು ಅರ್ಜುನ್‌; ಕಾರಣವೇನು?

ಪುಷ್ಪ ಎಲ್ಲಿ ಎಂಬ ನಿರೀಕ್ಷೆಯೊಂದಿಗೆ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದ್ದು, ಇದೀಗ ಹುಲಿಯೊಂದಿಗೆ ಪುಷ್ಪರಾಜ್ ಕಾಣಿಸಿಕೊಂಡಿದ್ದಾನೆ. ಈ ಹಿಂದೆ, ಚಿತ್ರದ ನಿರ್ದೇಶಕ ಸುಕುಮಾರ್ ಅವರು ಚಿತ್ರ ತಂಡದ ಇತರ ಸದಸ್ಯರೊಂದಿಗೆ ಸಂಭಾಷಣೆಯಲ್ಲಿ ಇರುವ ಫೋಟೊವನ್ನು ಹಂಚಿಕೊಂಡಿದ್ದರು. ಪುಷ್ಪಾ ಸೀಕ್ವೆಲ್‌ನ ಕಥೆಯನ್ನು ಅಭಿಮಾನಿಗಳು ಮತ್ತು ಸಿನಿಪ್ರಿಯರು ಕುತೂಹಲದಿಂದ ನಿರೀಕ್ಷಿಸಿದ್ದಾರೆ. ಮುಂದಿನ ಭಾಗದಲ್ಲಿ ಪುಷ್ಪಾ ರಾಜ್ ಮೇಲೆ ಪೊಲೀಸರು ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಿದೆ. ಪುಷ್ಪಾ 2ರಲ್ಲಿ ಪುಷ್ಪಾ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪತ್ನಿಯಾಗಿ ನಟಿಸಿದ್ದಾರೆ.

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version