Site icon Vistara News

Allu Arjun | ಮ್ಯಾಚಿಂಗ್ ಕಲರ್ ಉಡುಗೆ ತೊಟ್ಟ ಅಲ್ಲು ಅರ್ಜುನ್‌-ಸ್ನೇಹಾ: ಅಲ್ಲು ಪೋನಿಟೇಲ್‌ಗೆ ಫ್ಯಾನ್ಸ್‌ ಫಿದಾ!

Allu Arjun

ಬೆಂಗಳೂರು : ತೆಲುಗು ಚಿತ್ರರಂಗದ ಅತ್ಯಂತ ಸ್ಟೈಲಿಶ್ ಜೋಡಿ ಎಂತಲೇ ಖ್ಯಾತಿ ಪಡೆದಿರುವ ಅಲ್ಲು ಅರ್ಜುನ್‌ (Allu Arjun) ಹಾಗೂ ಸ್ನೇಹಾ ರೆಡ್ಡಿ ಅವರು, ನಿರ್ಮಾಪಕ ದಿಲ್ ರಾಜು ಮೊಮ್ಮಗಳು ಇಶಿಕಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಒಂದೇ ಕಲರ್‌ ಉಡುಪಿನಲ್ಲಿ ಮಿಂಚಿದ್ದಾರೆ. ಇಶಿಕಾ ಜನುಮದಿನ ಅದ್ಧೂರಿಯಾಗಿ ನೆರವೇರಿದ್ದು, ಚಿತ್ರರಂಗದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಅಲ್ಲು ಅರ್ಜುನ್ ಮತ್ತು ಸ್ನೇಹಾ ವೇದಿಕೆಯ ಹೊರಗೆ ಶುಭಾಶಯ ಕೋರುತ್ತಿರುವ ಫೋಟೊಗಳು ಮತ್ತು ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಲ್ಲು ಅರ್ಜುನ್ ಅವರ ಮುದ್ದಾದ ಪೋನಿಟೇಲ್ ಅನ್ನೂ ಅವರ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲು-ಸ್ನೇಹಾ ಆಗಾಗ ಓಡಾಟ, ಪ್ರವಾಸ, ಪಾರ್ಟಿ, ಮಕ್ಕಳ ಜತೆ, ಕುಟುಂಬದವರ ಜತೆಗಿನ ಒಡನಾಟದ ಅನೇಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಅಷ್ಟೇ ಹೊಸ ವರ್ಷಾಚರಣೆಯನ್ನು ಸ್ನೇಹಿತರೊಂದಿಗೆ ಗೋವಾದಲ್ಲಿ ದಂಪತಿ ಆಚರಿಸಿದ್ದರು.

ಇದನ್ನೂ ಓದಿ | Allu Arjun | ಹೊಸ ವರ್ಷವನ್ನು ಸ್ನೇಹಿತರೊಂದಿಗೆ ಆಚರಿಸಿದ ಅಲ್ಲು ಅರ್ಜುನ್‌ ದಂಪತಿ

ಪುಷ್ಪ-2 ಚಿತ್ರೀಕರಣದಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ನಟ ಅಲ್ಲು ಅರ್ಜುನ್‌ ಸ್ನೇಹಿತರೊಂದಿಗೆ ಮಧುರ ಕ್ಷಣವನ್ನು ಅನುಭವಿಸಿದ್ದಾರೆ. ಅಲ್ಲು ಅರ್ಜುನ್ ಮತ್ತು ಸ್ನೇಹಾ ಆಗಾಗ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಲು ಪ್ರವಾಸಕ್ಕೆ ಹೋಗುತ್ತಾರೆ. ಇತ್ತೀಚೆಗೆ, ಅವರು ತಮ್ಮ ಮಗ ಅಯಾನ್ ಮತ್ತು ಮಗಳು ಅರ್ಹಾ ಮತ್ತು ಕುಟುಂಬ ಸದಸ್ಯರೊಂದಿಗೆ ಪ್ರವಾಸಕ್ಕೆ ಹೋಗಿದ್ದರು.

ಪುಷ್ಪ: ದಿ ರೂಲ್ (Pushpa 2: The Rule)
ಪುಷ್ಪ: ದಿ ರೂಲ್ (Pushpa 2: The Rule) ಎಂಬ ಉಪ ಶೀರ್ಷಿಕೆಯಡಿ, ಪುಷ್ಟ-೨ ಸೆಟ್ಟೇರಿದೆ. ಸಿನಿ ರಸಿಕರಲ್ಲಿ ಎರಡನೇ ಪಾರ್ಟ್‌ ಹೇಗಿರಲಿದೆ ಎಂಬ ಕೂತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್‌ ಶೂಟಿಂಗ್‌ ಆರಂಭಿಸುತ್ತಿದ್ದಾರೆ ಎನ್ನಲಾಗುತ್ತಿದೆ. 2021ರಲ್ಲಿ ಚಿತ್ರ ಬಿಡುಗಡೆಗೊಂಡು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪಾರ್ಟ್‌ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್‌ ಫಾಸಿಲ್‌ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.

ಪುಷ್ಪ-2 ನಂತರ ಅಲ್ಲು ಅರ್ಜುನ್‌ ವೇಣು ಶ್ರೀರಾಮ್ ಅವರೊಂದಿಗೆ ಮತ್ತು ಕೊರಟಾಲ ಶಿವ ಅವರೊಂದಿಗೆ ಪ್ರಾಜೆಕ್ಟ್‌ ಹೊಂದಿದ್ದಾರೆ. ಈ ನಡುವೆ ಬೋಯಪತಿ ಶ್ರೀನು, ಎಆರ್ ಮುರುಗದಾಸ್ ಹಾಗೂ ಇತರ ನಿರ್ದೇಶಕರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ | Allu Arjun | ಸ್ನೇಹಿತರೊಂದಿಗೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ಅಲ್ಲು ಅರ್ಜುನ್‌-ಸ್ನೇಹಾ ದಂಪತಿ

Exit mobile version