ಬೆಂಗಳೂರು: ಸುಕುಮಾರ್ ನಿರ್ದೇಶನ ಹಾಗೂ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೂಲ್, ವೈಜಾಗ್ ಭಾಗದ ಚಿತ್ರೀಕರಣ ಮುಗಿಸಿದೆ. ಅಲ್ಲು ಅರ್ಜುನ್ ಅವರು ಬೀಚ್ನಲ್ಲಿ ನಿಂತು ‘ಥ್ಯಾಂಕ್ಸ್ ವೈಜಾಗ್’ ಎಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.
ವೈಜಾಗ್ ಬೀಚ್ ದಂಡೆಯ ಮೇಲೆ ಹಲವು ದೃಶ್ಯಗಳನ್ನು ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಮುಂದಿನ ಭಾಗದ ಚಿತ್ರೀಕರಣವನ್ನು ಹೈದರಾಬಾದ್ನಲ್ಲಿ ಪ್ಲ್ಯಾನ್ ಮಾಡಲಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಸುನಿಲ್, ರಾವ್ ರಮೇಶ್, ಧನಂಜಯ ಮತ್ತು ಅನಸೂಯಾ ಭಾರದ್ವಾಜ್ ತಾರಾಗಣವನ್ನು ಹೊರತುಪಡಿಸಿ, ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲು ಹೊಸಬರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Allu Arjun | ಮ್ಯಾಚಿಂಗ್ ಕಲರ್ ಉಡುಗೆ ತೊಟ್ಟ ಅಲ್ಲು ಅರ್ಜುನ್-ಸ್ನೇಹಾ: ಅಲ್ಲು ಪೋನಿಟೇಲ್ಗೆ ಫ್ಯಾನ್ಸ್ ಫಿದಾ!
ಪುಷ್ಪ: ದಿ ರೂಲ್ (Pushpa 2: The Rule)
ಪುಷ್ಪ: ದಿ ರೂಲ್ (Pushpa 2: The Rule) ಎಂಬ ಉಪ ಶೀರ್ಷಿಕೆಯಡಿ, ಪುಷ್ಟ-೨ ಸೆಟ್ಟೇರಿದೆ. ಸಿನಿ ರಸಿಕರಲ್ಲಿ ಎರಡನೇ ಪಾರ್ಟ್ ಹೇಗಿರಲಿದೆ ಎಂಬ ಕೂತೂಹಲ ಹೆಚ್ಚಾಗಿದ್ದು, ಸಾಕಷ್ಟು ತಯಾರಿ ಮೂಲಕ ನಿರ್ದೇಶಕ ಸುಕುಮಾರ್ ಶೂಟಿಂಗ್ ಆರಂಭಿಸಿದ್ದಾರೆ. 2021ರಲ್ಲಿ ಚಿತ್ರ ಬಿಡುಗಡೆಗೊಂಡು ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೊದಲ ಪಾರ್ಟ್ನಲ್ಲಿ ಮಲಯಾಳಂ ಚಿತ್ರರಂಗದ ಫಹಾದ್ ಫಾಸಿಲ್ ಮತ್ತು ಕನ್ನಡ ಚಿತ್ರರಂಗದ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪುಷ್ಪಾ: ದಿ ರೈಸ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.