Site icon Vistara News

Allu Raghu | ನಿರ್ದೇಶನದತ್ತ ಟಿಕ್ ಟಾಕ್ ಸ್ಟಾರ್ ಅಲ್ಲು ರಘು: ʻಸಾವಿರುಪಾಯಿಗೆ ಸ್ವರ್ಗʼ ಕಿರುಚಿತ್ರ ರಿಲೀಸ್‌

Allu Raghu

ಬೆಂಗಳೂರು: ಟಿಕ್ ಟಾಕ್ ಮೂಲಕ ಖ್ಯಾತಿ ಗಳಿಸಿರುವ ಅಲ್ಲು ರಘು (Allu Raghu) ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಟಿಕ್ ಟಾಕ್ ರೀಲ್ಸ್ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಅಲ್ಲು ರಘು ನಿರ್ದೇಶನದತ್ತ ಮುಖ ಮಾಡಿದ್ದಾರೆ. ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದು, ‘ಸಾವಿರುಪಾಯಿಗೆ ಸ್ವರ್ಗ’ ಶೀರ್ಷಿಕೆಯ ಕಿರುಚಿತ್ರ ಬಿಡುಗಡೆಯಾಗಿದೆ.

‘ಸಾವಿರುಪಾಯಿಗೆ ಸ್ವರ್ಗ’ ಚಿತ್ರಕ್ಕೆ ಅಲ್ಲು ರಘು ಕಥೆ ಬರೆದು ನಿರ್ದೇಶನ ಮಾಡಿದ್ದು, ಶಿವಪುತ್ರ ಯಶಾರದ, ವರುಣ್ ಆರಾಧ್ಯ, ರಶ್ಮಿತ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಡಿಂಡಿಮ ಸಂಭಾಷಣೆ, ರಾಘವ್ ಹಾಗೂ ಅಭಿನಂದನ್ ಸಂಗೀತ ನಿರ್ದೇಶನ, ನವೀನ್ ಕುಮಾರ್ ಚಲ್ಲ ಕ್ಯಾಮೆರಾ ವರ್ಕ್, ಕೃಷ್ಣ ಸುಜನ್ ಸಂಕಲನ ಚಿತ್ರಕ್ಕಿದೆ.

‘ಅಲ್ಲು ರಘು ಮಾತನಾಡಿ ”ಇದು ನನ್ನ ನಿರ್ದೇಶನದ ಮೊದಲ ಕಿರುಚಿತ್ರ. ಈ ಚಿತ್ರಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಜನ ಸಹಾಯ ಮಾಡಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಈ ಕಿರುಚಿತ್ರ ಮಾಡಲು ಸಾಧ್ಯವಾಯಿತು. ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾಗಳು ತುಂಬಾ ಇಷ್ಟ. ಉಪೇಂದ್ರ, ಕಾಶಿನಾಥ್ ನನಗೆ ಸ್ಫೂರ್ತಿ. ಒಂದು ಪ್ರಯತ್ನ ಮಾಡಿದ್ದೇನೆ. ಏನೇ ತಪ್ಪಿದ್ದರೂ ತಿಳಿಸಿ. ಎಲ್ಲರೂ ಈ ಕಿರುಚಿತ್ರ ನೋಡಿ ಅಭಿಪ್ರಾಯ ತಿಳಿಸಿʼʼ ಎಂದು ಕೇಳಿಕೊಂಡರು.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ಭೋಜ್‌ಪುರಿ ಸಿನಿಮಾಗೆ ಸೂಕ್ತ, ಹಿಂದಿಗಲ್ಲ ಎಂದ ವಿಮರ್ಶಕ ಕಮಾಲ್ ಖಾನ್!

ಚಿತ್ರದ ಸಂಕಲನಕಾರ ಕೃಷ್ಣ ಸುಜನ್ ಮಾತನಾಡಿ ʻʻನಾವೆಲ್ಲ ತುಂಬ ಹಳೆಯ ಸ್ನೇಹಿತರು. ಅಲ್ಲುಗೆ ಸಿನಿಮಾ ಮಾಡಬೇಕು ಎಂದು ಬಹಳ ಆಸೆ ಇತ್ತು. ಮೊದಲು ಕಿರುಚಿತ್ರ ಮಾಡು ಮತ್ತೊಂದಿಷ್ಟು ನಿರ್ದೇಶನದ ಬಗ್ಗೆ, ಕ್ಯಾಮೆರಾ ವರ್ಕ್ ಎಲ್ಲದರ ಬಗ್ಗೆ ತಿಳಿದುಕೋ ಆಮೇಲೆ ಸಿನಿಮಾ ಮಾಡುವಂತೆ ಎಂದು ಹೇಳಿದ್ದೆ. ಆ ಚರ್ಚೆ ನಂತರ ಆರಂಭವಾದ ಕಿರುಚಿತ್ರ ‘ಸಾವಿರುಪಾಯಿಗೆ ಸ್ವರ್ಗ’. ಫೈನಲ್ ಔಟ್ ಪುಟ್ ನೋಡಿ ಖುಷಿ ಆಯ್ತು. ಇಷ್ಟರಮಟ್ಟಿಗೆ ಬಂದಿದೆ ಅಂದರೆ ನಮಗೆ ತುಂಬ ಖುಷಿ ಎನಿಸುತ್ತದೆʼʼ ಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ | Kannada New Movie | ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಮಿಂಚಲಿದ್ದಾರೆ ʻವಿಕ್ರಾಂತ್‌ ರೋಣʼ ಪಿಟಿ ಮೇಷ್ಟ್ರು ವಜ್ರಧೀರ್ ಜೈನ್

Exit mobile version