Site icon Vistara News

Amala Paul : ಮದುವೆಯಾದ ಎರಡೇ ತಿಂಗಳಿಗೆ 1+1=3 ಎಂದ ʻಹೆಬ್ಬುಲಿʼ ನಟಿ ಅಮಲಾ ಪೌಲ್!

Amala Paul and Jagat Desai announce pregnancy
Amala Paul 

ಕಳೆದ ನವೆಂಬರ್​ನಲ್ಲಿ ಎರಡನೇ ಮದುವೆಯಾಗಿದ್ದ ಬಹುಭಾಷಾ ನಟಿ ಅಮಲಾ ಪೌಲ್ (Amala Paul), ವಿವಾಹವಾದ 2 ತಿಂಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.

Amala Paul 

ಸಾಮಾಜಿಕ ಜಾಲತಾಣದ ಮೂಲಕ ತಾವೂ ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾದಲ್ಲಿ ನಟಿ ಬೇಬಿ ಬಂಪ್‌ ಫೋಟೊಶೂಟ್‌ವನ್ನು ಶೇರ್‌ ಮಾಡಿಕೊಂಡಿದ್ದಾರೆ.

Amala Paul 

ನಾವು ಒನ್ ಪ್ಲಸ್ ಒನ್ ಈಕ್ವಲ್ ತ್ರೀ (1+1=3) ಆಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮಲಯಾಳಂ ನಟಿ, ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಅಮಲಾ ಪೌಲ್ (Amala Paul) ಅವರು -ಜಗತ್ ದೇಸಾಯಿ ಜತೆ ನವೆಂಬರ್ 5ರ ಭಾನುವಾರದಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾಗಿದ್ದರು.

ಇದನ್ನೂ ಓದಿ: Amala Paul: ಎರಡನೇ ಮದುವೆಯಾದ ‘ಹೆಬ್ಬುಲಿ’ ನಟಿ ಅಮಲಾ ಪೌಲ್!

Amala Paul 

ಇದಕ್ಕೂ ಮೊದಲು ಅಮಲಾ ಅವರು ನಿರ್ದೇಶಕ ಎಎಲ್ ವಿಜಯ್ ಅವರನ್ನು ಜೂನ್ 2014 ರಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದರು. 2017 ರಲ್ಲಿ ಅಮಲಾ ಮತ್ತು ವಿಜಯ್ ವಿಚ್ಛೇದನ ಪಡೆದರು. 

Amala Paul 

ಅಂದಹಾಗೆ, ಜಗತ್ ದೇಸಾಯಿ ಉದ್ಯಮಿ ಆಗಿದ್ದಾರೆ. ಅಮಲಾ ಮುಖ್ಯವಾಗಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಹೆಬ್ಬುಲಿ (2017), ತಿರುಟ್ಟು ಪಯಲೆ 2 (2017), ರಾತ್ಸಾಸನ್ (2018), ಆದೈ (2019) ಮತ್ತು ದಿ ಟೀಚರ್ (2022) ನ ಭಾಗವಾಗಿದ್ದರು. ಅಮಲಾ ಕೊನೆಯದಾಗಿ ಭೋಲಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Exit mobile version