ಮಲಯಾಳಂ ನಟಿ, ಸುದೀಪ್ ನಟನೆಯ ‘ಹೆಬ್ಬುಲಿ’ ಸಿನಿಮಾ ಖ್ಯಾತಿಯ ಅಮಲಾ ಪೌಲ್ (Amala Paul) ಅವರು -ಜಗತ್ ದೇಸಾಯಿ ಜತೆ ನವೆಂಬರ್ 5ರ ಭಾನುವಾರದಂದು ಕೇರಳದ ಕೊಚ್ಚಿಯಲ್ಲಿ ವಿವಾಹವಾದರು.
ಅಮಲಾ ಪೌಲ್ ಮತ್ತು ಜಗತ್ ದೇಸಾಯಿ ಅವರ ವಿವಾಹ ಕೇರಳದ ಕೊಚ್ಚಿಯ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಅಮಲಾ ಮತ್ತು ಜಗತ್ ಮದುವೆಯ ಸಂಭ್ರಮದ ಕ್ಷಣಗಳ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Amala Paul: ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಎರಡನೇ ಮದುವೆಗೆ ರೆಡಿ; ನಿಶ್ಚಿತಾರ್ಥ ಫೋಟೊ ವೈರಲ್!
ಅಮಲಾ ಮತ್ತು ಜಗತ್ ಅವರು ಲ್ಯಾವೆಂಡರ್-ಬಣ್ಣದ ಉಡುಪನ್ನು ಧರಿಸಿದ್ದರು. ಅಮಲಾ ಲೆಹೆಂಗಾ ಧರಿಸಿದ್ದರೆ, ಜಗತ್ ಶೇರ್ವಾನಿಯಲ್ಲಿ ಕ್ಯೂಟ್ ಆಗಿ ಕಂಡರು.
ಇದಕ್ಕೂ ಮೊದಲು ಅಮಲಾ ಅವರು ನಿರ್ದೇಶಕ ಎಎಲ್ ವಿಜಯ್ ಅವರನ್ನು ಜೂನ್ 2014 ರಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದರು. 2017 ರಲ್ಲಿ ಅಮಲಾ ಮತ್ತು ವಿಜಯ್ ವಿಚ್ಛೇದನ ಪಡೆದರು.
ಅಂದಹಾಗೆ, ಜಗತ್ ದೇಸಾಯಿ ಓರ್ವ ಉದ್ಯಮಿ ಆಗಿದ್ದಾರೆ. ಅಮಲಾ ಮುಖ್ಯವಾಗಿ ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಹೆಬ್ಬುಲಿ (2017), ತಿರುಟ್ಟು ಪಯಲೆ 2 (2017), ರಾತ್ಸಾಸನ್ (2018), ಆದೈ (2019) ಮತ್ತು ದಿ ಟೀಚರ್ (2022) ನ ಭಾಗವಾಗಿದ್ದರು. ಅಮಲಾ ಕೊನೆಯದಾಗಿ ಭೋಲಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.