Site icon Vistara News

Aman Dhaliwal: ಜಿಮ್‌ನಲ್ಲಿ ಪಂಜಾಬಿ ನಟ ಅಮನ್ ಧಾಲೀವಾಲ್ ಮೇಲೆ ಹಲ್ಲೆ: ವಿಡಿಯೊ ವೈರಲ್‌

Aman Dhaliwal

ಬೆಂಗಳೂರು: ಪಂಜಾಬಿ ನಟ ಅಮನ್ ಧಾಲೀವಾಲ್ (Aman Dhaliwal) ಅವರು ಅಮೆರಿಕ ಜಿಮ್‌ನಲ್ಲಿ ಹಲ್ಲೆಗೊಳಗಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ ದಾಳಿಕೋರ ಚಾಕು ತೋರಿಸಿ ಜಿಮ್‌ಗೆ ಹೋಗುವವರಿಗೆ ಬೆದರಿಕೆ ಹಾಕಿದ್ದಾನೆ. ಬಳಿಕ ನಟನನ್ನು ದಾಳಿಯಿಂದಾಗಿ ಅಮನ್ ಧಾಲೀವಾಲ್ ಅವರ ಮೈಲ್ಲಾ ಗಾಯಗಳಾಗಿವೆ. ಇದೀಗ ನಟ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಅಟ್ಯಾಕ್‌ ಮಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವಿಡಿಯೊದಲ್ಲಿ ಆರೋಪಿಯು ನಟ ಅಮನ್ ಧಾಲೀವಾಲ್ ಅವರನ್ನು ಹಿಡಿದುಕೊಂಡಿದ್ದಾಗ, ಆರೋಪಿ ನೀರು ಕೇಳುತ್ತಿರುವುದು ಕಂಡುಬರುತ್ತದೆ. ಸ್ವಲ್ಪ ಸಮಯದ ನಂತರ, ಅಮನ್ ಧಾಲೀವಾಲ್ ಆರೋಪಿಯಿಂದ ತಪ್ಪಿಸಿಕೊಳ್ಳುತ್ತಾರೆ. ಇತರರು ಆರೋಪಿಯನ್ನು ತಪ್ಪಿಸಿಕೊಳ್ಳದಂತೆ ಹಿಡಿದಿರುವ ದೃಶ್ಯ ಸೆರೆಯಾಗಿದೆ. ಘಟನೆಯ ನಂತರ ಪೊಲೀಸರನ್ನು ಕರೆಸಿ ಆರೋಪಿಯನ್ನು ಹಸ್ತಾಂತರಿಸಲಾಗಿದೆ ಎಂದು ವರದಿ ಆಗಿದೆ. ಅಮೆರಿಕದ 3685 ಗ್ರಾಂಡ್ ಓಕ್ಸ್‌ನಲ್ಲಿರುವ ಪ್ಲಾನೆಟ್ ಫಿಟ್‌ನೆಸ್ ಜಿಮ್‌ನಲ್ಲಿ ಬೆಳಗ್ಗೆ 9:20ರ ಸುಮಾರಿಗೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Assault Case: ಯುವಕನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ

ಅಟ್ಯಾಕ್‌ ಮಾಡಿರುವ ವಿಡಿಯೊ

ಅಮನ್ ಧಾಲೀವಾಲ್ ಯಾರು?

ಅಮನ್ ಧಾಲೀವಾಲ್ ಮಾನ್ಸಾ ನಿವಾಸಿಯಾಗಿದ್ದು ಹಲವಾರು ಬಾಲಿವುಡ್ ಮತ್ತು ಪಂಜಾಬಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ, ಜೋಗಿಯಾ ವೇ ಜೋಗಿಯಾ ತೇರಿ ಜೋಗನ್ ಹೋ ಗಯಾ ಆನ್ (Jogiya ve Jogiya Teri Jogan Ho Gaya Aan.) ಹಾಡಿನಿಂದ ಗಮನ ಸೆಳೆದರು. ಅವರು ಏಕ್ ಕುಡಿ ಪಂಜಾಬ್ ದಿ, ಪೋಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಜೋಧಾ ಅಕ್ಬರ್‌ನಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಅವರೊಂದಿಗೆ ನಟಿಸಿದ್ದಾರೆ.

Exit mobile version