Site icon Vistara News

Tiger 3 teaser: ‘ಟೈಗರ್‌ 3’ ಡಿಜಿಟಲ್ ಹಕ್ಕು ಅಮೆಜಾನ್ ಪ್ರೈಮ್ ಪಾಲು; ಭಾರಿ ಮೊತ್ತಕ್ಕೆ ಮಾರಾಟ!

Tiger 3 OTT Rights

ಬೆಂಗಳೂರು: ʻಟೈಗರ್‌ ಕಾ ಮೆಸೆಜ್‌ʼ ಎಂಬ ವಿಡಿಯೊ ಮೂಲಕ ಸಲ್ಮಾನ್‌ ಅಬ್ಬರಿಸಿದ್ದಾಗಿದೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ. ಸೆ. 27ರಂದು ಟೈಗರ್‌ 3 ಸಿನಿಮಾದ ಹೊಸ ಟೀಸರ್‌ ʻಟೈಗರ್‌ ಕಾ ಮೆಸೆಜ್‌ʼ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷ ಮತ್ತು 46 ಸೆಕೆಂಡ್‌ಗಳ ವೀಡಿಯೊವನ್ನು ಕಂಡು ಅಭಿಮಾನಿಗಳು ಸಖತ್‌ ಖುಷ್‌ ಆಗಿದ್ದಾರೆ. ಸಿನಿಮಾ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಸಲ್ಲು ಫ್ಯಾನ್ಸ್‌ಗೆ ಮತ್ತೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅಮೆಜಾನ್ ಪ್ರೈಮ್ ಟೈಗರ್ 3 ಒಟಿಟಿ ಹಕ್ಕುಗಳನ್ನು ಬರೋಬ್ಬರಿ 200 ಕೋಟಿ ರೂ.ಗೆ ಪಡೆದುಕೊಂಡಿದೆ.

ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿಳಿ ಸಮಯದಲ್ಲಿ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. ವರದಿಯ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೊ ಟೈಗರ್ 3 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಶಾರುಖ್ ಖಾನ್ ಅವರ ಜವಾನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ವಾಧೀನಪಡಿಸಿಕೊಂಡಂತೆಯೇ ಇದೂ ಕೂಡ ಒಪ್ಪಂದವನ್ನು ಮಾಡಿದೆ. ಟೈಗರ್ 3 ಚಿತ್ರದ OTT ಹಕ್ಕನ್ನು 200 ಕೋಟಿ ರೂ. ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಮತ್ತು ಒಟಿಟಿ ಹಕ್ಕುಗಳ ಕುರಿತ ಹೆಚ್ಚಿನ ವಿವರಗಳನ್ನು ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ: Tiger 3 teaser: ಸಲ್ಮಾನ್‌ ಖಾನ್‌ಗೆ ಭಾರತದಿಂದ ‘ಕ್ಯಾರೆಕ್ಟರ್ ಸರ್ಟಿಫಿಕೇಟ್ʼ ಬೇಕಂತೆ; ಟೈಗರ್‌ 3 ಟೀಸರ್‌ ಔಟ್‌!

‘ಟೈಗರ್ ಕಾ ಮೆಸೇಜ್’

ಸೆ. 27ರಂದು ಟೈಗರ್‌ 3 ಸಿನಿಮಾದ ಹೊಸ ಟೀಸರ್‌ ʻಟೈಗರ್‌ ಕಾ ಮೆಸೆಜ್‌ʼ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಒಂದು ನಿಮಿಷದ 43 ಸೆಕೆಂಡುಗಳ ಅವಧಿಯ ಟೀಸರ್ ಇದಾಗಿದೆ. “ಭಾರತಕ್ಕೆ 20 ವರ್ಷಗಳ ಸೇವೆಯ ನಂತರ, ನಾನು ಪ್ರತಿಯಾಗಿ ಏನನ್ನೂ ಕೇಳಲಿಲ್ಲ. ಆದರೆ ಇಂದು ನನಗೆ ಬೇಡಿಕೆಯಿದೆ. ಟೈಗರ್​ ನಿಮ್ಮ ಶತ್ರು ಎಂದು ಹೇಳಲಾಗುತ್ತಿದೆ. ಟೈಗರ್​ ಒಬ್ಬ ದ್ರೋಹಿ ಎಂದು ಹೇಳಲಾಗುತ್ತಿದೆ. 20 ವರ್ಷಗಳ ಸೇವೆಯ ನಂತರವೂ ನಾನು ಭಾರತದಿಂದ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿದ್ದೇನೆʼʼಎಂಬುವ ಸಲ್ಮಾನ್‌ ಡೈಲಾಗ್‌ ಹೈಲೈಟ್‌ ಆಗಿದೆ.

ಇದನ್ನೂ ಓದಿ: Tiger 3 teaser: ಸೆಪ್ಟೆಂಬರ್ 27ಕ್ಕೆ ಸಲ್ಮಾನ್ ಖಾನ್‌ರಿಂದ ಹೊಸ ಸಂದೇಶ! ಏನದು?

ಈ ವರ್ಷ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೀಗ ಚಿತ್ರವು ಈ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ʻಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಟೈಗರ್‌ 3 ಸಿನಿಮಾವು ನವೆಂಬರ್‌ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರಿದ ಭಾಗವಾಗಿ ಶಾರೂಖ್‌ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version