Site icon Vistara News

Amazon Prime Video: ಪ್ರೈಮ್ ವಿಡಿಯೊ ಮತ್ತೊಂದು ಸಾಹಸ; 70 ಹೊಸ ಪ್ರಾಜೆಕ್ಟ್​ಗಳ ಘೋಷಣೆ!

Prime Video

ಬೆಂಗಳೂರು: ಭಾರತದ ಅತ್ಯಂತ ಮೆಚ್ಚಿನ ಮನರಂಜನೆ (Amazon Prime Video) ತಾಣವಾಗಿರುವ ಅಮೆಜಾನ್ ಪ್ರೈಮ್ ವೀಡಿಯೊ‌ ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಿ ಸೀರಿಸ್ ಹಾಗೂ ಸಿನಿಮಾ ಸೇರಿ 70 ಪ್ರಾಜೆಕ್ಟ್​ಗಳನ್ನು ಘೋಷಣೆ ಮಾಡಿದೆ. ಬಹುತೇಕವು ಮುಂದಿನ 2 ವರ್ಷಗಳಲ್ಲಿ ಪ್ರೀಮಿಯರ್ ಆಗಲಿವೆ. 70 ಪ್ರಾಜೆಕ್ಟ್​ಗಳ ಪೈಕಿ 40 ಅಮೆಜಾನ್ ಒರಿಜಿನಲ್ ಸೀರಿಸ್ ಹಾಗೂ ಸಿನಿಮಾಗಳು ಇವೆ. ಉಳಿದ 29 ಸಿನಿಮಾಗಳು ಥಿಯೇಟರ್​ನಲ್ಲಿ ರಿಲೀಸ್ ಆದ ಬಳಿಕ ಈ ಒಟಿಟಿ ಪ್ಲಾಟ್​ಫಾರ್ಮ್​ಗೆ ಬರಲಿವೆ. ಇದರಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಇದು ಒಳಗೊಂಡಿದೆ.

ಆಕರ್ಷಕ ಥ್ರಿಲ್ಲರ್‌ಗಳಿಂದ, ಮನಮುಟ್ಟುವ ಡ್ರಾಮಾಗಳು, ನಗೆಯುಕ್ಕಿಸುವ ಕಾಮಿಡಿಗಳು ಮತ್ತು ಎದೆ ನಡುಗಿಸುವ ಹಾರರ್‌, ಅತ್ಯಂತ ಕುತೂಹಲ ಕೆರಳಿಸುವ ಶೋಗಳು, ಯುವ ಸಮೂಹಕ್ಕೆಂದೇ ರೂಪಿಸಿದ ಸುಂದರ ಕಥೆಗಳು, ಅತ್ಯಂತ ಉತ್ಸಾಹ ಚಿಮ್ಮಿಸುವ ಆಕ್ಷನ್‌ ಸಿನಿಮಾಗಳು ಮತ್ತು ಸಂಗೀತ ಭರಿತ ಡ್ರಾಮಾಗಳು ಎಲ್ಲವೂ ಇದರಲ್ಲಿವೆ. ಇದರ ಜತೆಗೆ ಭಾರತದ ಅತ್ಯಂತ ಪ್ರತಿಷ್ಠಿತ ಫಿಲ್ಮ್ ಸ್ಟೂಡಿಯೋಗಳ ಸಿನಿಮಾಗಳನ್ನೂ ಪ್ರದರ್ಶಿಸಲಾಗುತ್ತದೆ. ಇವು ಥಿಯೇಟರ್‌ನಲ್ಲಿ ಕಾಣಿಸಿಕೊಂಡ ನಂತರದಲ್ಲಿ ಈ ವೇದಿಕೆಗೆ ಲಗ್ಗೆ ಇಡಲಿವೆ.

ಇದನ್ನೂ ಓದಿ: Shiva Rajkumar: ಹೇಮಂತ್‌ ರಾವ್‌ ನಿರ್ದೇಶನದ ʻಶಿವಣ್ಣʼನ ಸಿನಿಮಾ ಹೇಗಿರಲಿದೆ?

“ಪ್ರೈಮ್ ವಿಡಿಯೋದಲ್ಲಿ, ವಿವಿಧ ಮನರಂಜನೆ ವಿಧಾನಗಳ ಮೂಲಕ ಭಾರತೀಯ ಗ್ರಾಹಕರ ಮನರಂಜಿಸಲು ನಾವು ಹೆಚ್ಚು ಗಮನ ಹರಿಸಿದ್ದೇವೆ. ಹೊಸ ವಿಧಾನದ ಒರಿಜಿನಲ್ ಸಿರೀಸ್ ಮತ್ತು ಸಿನಿಮಾಗಳು, ನೇರವಾಗಿ ಪ್ರದರ್ಶನಗೊಳ್ಳಲಿರುವ ಸಿನಿಮಾಗಳು, ವಿವಿಧ ಭಾಷೆಗಳಲ್ಲಿ ಥಿಯೇಟರ್‌ನಲ್ಲಿ ಹಿಟ್ ಆದ ಅತಿ ದೊಡ್ಡ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಪ್ರತಿ ಗ್ರಾಹಕರಿಗೂ ನಾವು ಮೊದಲ ಆಯ್ಕೆಯಾಗಿರಬೇಕು ಎಂದು ಬಯಸುತ್ತೇವೆ” ಎಂದು ಪ್ರೈಮ್ ವೀಡಿಯೋ ಇಂಡಿಯಾದ ಡೈರೆಕ್ಟರ್ ಸುಶಾಂತ್ ಶ್ರೀರಾಮ್ ಹೇಳಿದ್ದಾರೆ.

ʻʻ2023ರಲ್ಲಿ ನಮ್ಮ ಕಂಟೆಂಟ್ ಹೊಸ ಗಡಿಯನ್ನು (Amazon Prime Video) ಮೀರಿದೆ. ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದು ಮತ್ತು ಪ್ರೈಮ್ ಮೆಂಬರ್‌ ಎಂಗೇಜ್‌ಮೆಂಟ್ ವಿಷಯದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಮುಂಚೂಣಿಯಲ್ಲಿರಲು ಸಹಾಯ ಮಾಡಿದೆ. ನಮ್ಮ ಗ್ರಾಹಕರಿಂದ ನಾವು ಪಡೆದ ಪ್ರೀತಿಗೆ ನಾವು ಆಭಾರಿಯಾಗಿದ್ದೇವೆ. ನಮ್ಮ ಪ್ಲಾಟ್‌ಫಾರಂನಲ್ಲಿರುವ ಪ್ರತಿ ಕಥೆಯೂ ಅವರಿಗೆ ಮೆಚ್ಚುಗೆಯಾಗಬೇಕು ಎಂದು ನಾವು ಆಶಿಸುತ್ತೇವೆ. ಇದಕ್ಕೆ ಅನುಗುಣವಾಗಿ ನಾವು ಈವರೆಗಿನ ಅತಿದೊಡ್ಡ ಮತ್ತು ಅತ್ಯಂತ ವೈವಿಧ್ಯಮಯವಾದ ಮನರಂಜನೆಯನ್ನು ಒದಗಿಸಲು ಬಯಸಿದ್ದೇವೆ ಮತ್ತು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿನ ಪ್ರೇಕ್ಷಕರನ್ನು ನಮ್ಮ ಮುಂಬರುವ ಸಿರೀಸ್‌ ಮತ್ತು ಸಿನಿಮಾಗಳು ಮನರಂಜಿಸಲಿದೆ ಎಂದು ನಾವು ಖಾತರಿ ಹೊಂದಿದ್ದೇವೆ” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Vistara Top 10 News: 36 ಶಾಸಕರಿಗೆ ನಿಗಮದ ಸಮಾಧಾನ, ರಾಹುಲ್ ಯಾತ್ರೆಗೆ ದೀದಿಯೇ ಅಡ್ಡಿ ಇತ್ಯಾದಿ ದಿನದ ಪ್ರಮುಖ ಸುದ್ದಿಗಳು

“ವೈವಿಧ್ಯಮಯ, ಅಸಲಿ ಮತ್ತು ನೆಲಮೂಲದ ಭಾರತೀಯ ಕಥೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಪ್ರೈಮ್ ವೀಡಿಯೊ ಬದ್ಧವಾಗಿದೆ. ಇದರಿಂದ ಭಾಷೆ ಮತ್ತು ಭೌಗೋಳಿಕ ಗಡಿಗಳನ್ನೂ ಮೀರಲಿದೆ” ಎಂದು ಪ್ರೈಮ್ ವೀಡಿಯೋದ ಭಾರತ ಮತ್ತು ಆಗ್ನೇಯ ಏಷ್ಯಾದ ಒರಿಜಿನಲ್ಸ್‌ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಹೇಳಿದ್ದಾರೆ.

ʻʻನಮ್ಮ ಶೋಗಳು ಮತ್ತು ಸಿನಿಮಾಗಳ ರಾಷ್ಟ್ರೀಯ ಮತ್ತು ಜಾಗತಿಕ ಪರಿಣಾಮ ನಮಗೆ ಸಂತೃಪ್ತಿ ನೀಡುವ ಸಂಗತಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಕಂಟೆಂಟ್ ಅನ್ನು ನಾವು ಇನ್ನಷ್ಟು ಪ್ರಚುರಪಡಿಸಲು ನಮಗೆ ಖುಷಿಯಾಗುತ್ತದೆ. ಕಥೆಗಾರರು ಮತ್ತು ಪ್ರತಿಭಾವಂತರ ಮನೆಯಾಗಿರುವ ನಾವು ಭಾರತೀಯ ಮನರಂಜನೆ ವಲಯದಲ್ಲಿನ ಪ್ರಮುಖ ವ್ಯಕ್ತಿಗಳ ಜೊತೆಗೆ ಪಾಲುದಾರಿಕೆ ವಹಿಸಲು ನಾವು ಉತ್ಸುಕರಾಗಿದ್ದೇವೆ. ತಾಜಾ, ಶಕ್ತಿಯುತ, ಸ್ಫೂರ್ತಿದಾಯಕ ಮತ್ತು ಮನರಂಜನೆಯ ಕಥೆಗಳನ್ನು ರಚಿಸಲು ಈ ಮೂಲಕ ನಮಗೆ ಶಕ್ತಿ ಒದಗಲಿದೆ. ಭಾರತ ವಿಶ್ವಮಟ್ಟದಲ್ಲಿ ಕಾಣಿಸಿಕೊಳ್ಳಲು ನಮ್ಮ ಮುಂಬರುವ ಸಿನಿಮಾಗಳು ಮತ್ತು ಸರಣಿಗಳು ಹೊಸ ದಾರಿಯನ್ನು ಹಾಕಿಕೊಡಲಿದೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ” ಎಂದರು.

Exit mobile version